ಸಂಗ್ರಹಚಿತ್ರ 
ಅಡುಗೆ

ಮಸಾಲಾ ಮಜ್ಜಿಗೆ | Masala majjige Recipe in Kannada

ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಹಾಗೂ ದಾಹವನ್ನು ತಣಿಸಲು ಮಸಾಲಾ ಮಜ್ಜಿಗೆ ಅತ್ಯುತ್ತಮ ಆಯ್ಕೆ. ಮೊಸರು, ನೀರು, ಜೀರಿಗೆ, ಶುಂಠಿ, ಕರಿಬೇವು ಮತ್ತು ಇತರ ಮಸಾಲೆಗಳೊಂದಿಗೆ ತಯಾರಾಗುವ ಈ ಪಾನೀಯವು ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯಕರವೂ ಆಗಿದೆ.

ಬೇಕಾಗುವ ಪದಾರ್ಥಗಳು...

  • ಮೊಸರು – 1 ಬಟ್ಟಲು

  • ನೀರು – 2 ಬಟ್ಟಲು

  • ಉಪ್ಪು – ರುಚಿಗೆ ತಕ್ಕಷ್ಟು

  • ಜೀರಿಗೆ ಪುಡಿ – ½ ಚಮಚ

  • ಶುಂಠಿ (ತುರಿದದ್ದು) – ½ ಚಮಚ

  • ಕರಿಬೇವು – ಸ್ವಲ್ಪ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಹಸಿಮೆಣಸಿನಕಾಯಿ – 1

ಮಾಡುವ ವಿಧಾನ...

  • ಒಂದು ಬಟ್ಟಲಿನಲ್ಲಿ ಮೊಸರು ಹಾಗೂ ನೀರನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ, ಚೆನ್ನಾಗಿ ಗ್ರೈಂಡ್ ಮಾಡಿ. ಮಜ್ಜಿಗೆ ಸಿದ್ಧಪಿಡಿಸಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.

  • ನಂತರ ಅದಕ್ಕೆ ಉಪ್ಪು, ಜೀರಿಗೆ ಪುಡಿ, ಸಣ್ಣಗೆ ಕತ್ತರಿಸಿಕೊಂಡ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಾಸಾಲಾ ಮಜ್ಜಿಗೆ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಬೆಂಗಳೂರು: ಪೊಲೀಸರ ಭದ್ರತೆ ನಡುವೆ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಅಕ್ರಮ ಮಹಿಳಾ ವಲಸಿಗರು ಪರಾರಿ!

'ರಾಹುಲ್, ಪ್ರಿಯಾಂಕಾ ವಯನಾಡನ್ನು ಮರೆತುಬಿಡಿ': ಗಾಂಧಿಗಳಿಗೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳ ವಿರುದ್ಧ ಕೇಸ್!

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

SCROLL FOR NEXT