ಇಡ್ಲಿ ದೋಸೆ ಹಿಟ್ಟು ಜಾಸ್ತಿ ಹುಳಿಯಾಗಿದಿಯಾ?  Online Desk
ಅಡುಗೆ

Kitchen Hacks: ಇಡ್ಲಿ-ದೋಸೆ ಹಿಟ್ಟು ಜಾಸ್ತಿ ಹುಳಿಯಾಗಿದಿಯಾ? ಹಾಗಾದ್ರೆ, ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ:

Kitchen Hacks: ಇಡ್ಲಿ ದೋಸೆ ಹಿಟ್ಟು ಹುಳಿಯಾಗಿದೆಯಾ ಚಿಂತಿಸಬೇಡಿ. ಬೇಯಿಸಿದ ಅನ್ನ, ಬೆಲ್ಲ, ತೆಂಗಿನಕಾಯಿ ಮತ್ತು ತಾಜಾ ಹಿಟ್ಟಿನಿಂದ ಹುಳಿ ಹಿಟ್ಟನ್ನು ಮತ್ತೆ ಸರಿ ಮಾಡಿ ಮೆತ್ತಗಿನ ಇಡ್ಲಿ ಜೊತೆಗೆ ಗರಿಗರಿಯಾದ ದೋಸೆ ಮಾಡಿ.

Kitchen Hacks: ಮಳೆಗಾಲದಲ್ಲಿ ಅಕ್ಕಿ, ಉದ್ದಿನಬೇಳೆ ಇಂದ ಮಾಡುವ ದೋಸೆ-ಇಡ್ಲಿ ಹಿಟ್ಟು ಬೇಗ ಹುದುಗಿ ಹುಳಿಯಾಗಿ ಬಿಡುತ್ತದೆ.! ಫ್ರಿಜ್‌ನಲ್ಲಿ ಸರಿಯಾಗಿ ಇಡದಿದ್ದರೂ ಅದೇ ಸಮಸ್ಯೆ. ಹುಳಿ ರುಚಿ ಬಂದ ಕೂಡಲೇ ಹಿಟ್ಟನ್ನು ಎಸೆಯುವ ಬದಲು ಈ ಸುಲಭ ಟ್ರಿಕ್ ಬಳಸಿ. ಅದೇ ಹುಳಿ ಹಿಟ್ಟಿನಿಂದ ಮೆತ್ತಗಿನ ಇಡ್ಲಿ ಮತ್ತು ಗರಿಗರಿಯಾದ ದೋಸೆ ಮಾಡಬಹುದು.

ದೋಸೆ-ಇಡ್ಲಿ ಹಿಟ್ಟಿನಲ್ಲಿ ಹುಳಿ ಯಾಕೆ ಬರುತ್ತದೆ?

ಅಕ್ಕಿ ಮತ್ತು ಉದ್ದಿನ ಬೇಳೆ ಹುದುಗುವಾಗ ಲ್ಯಾಕ್ಟಿಕ್ ಆಸಿಡ್ ಉತ್ಪತ್ತಿಯಾಗಿ ಹುಳಿ ರುಚಿ ಬರುತ್ತದೆ. ಅದ್ರಲ್ಲೂ, ಬಿಸಿಲಿನಲ್ಲಿ 8 ಗಂಟೆಗಿಂತ ಹೆಚ್ಚು ಹೊತ್ತು ಹೊರಗೆ ಇಟ್ಟರೆ ಅಥವಾ ಉಪ್ಪನ್ನು ಮೊದಲೇ ಹಾಕಿದರೆ ಹಿಟ್ಟು ಬೇಗ ಹುಳಿಯಾಗುತ್ತದೆ. ಇದರಿಂದ ಇಡ್ಲಿ ಹುಳಿ ಬರುತ್ತದೆ ಮತ್ತು ದೋಸೆ ಸರಿಯಾಗಿ ಬರುವುದಿಲ್ಲ.

ಅಡಿಗೆ ಸೋಡಾ ಮತ್ತು ಸಕ್ಕರೆ / ಬೆಲ್ಲ:

ಹುಳಿಯಾದ ಹಿಟ್ಟಿಗೆ ಒಂದು ಚಿಟಿಕೆ ಅಡಿಗೆ ಸೋಡಾ ಮತ್ತು ಅರ್ಧ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಯಾಕಂದ್ರೆ, ಸೋಡಾ ಹಿಟ್ಟಿನಲ್ಲಿರುವ ಆಸಿಡ್ ಕಡಿಮೆ ಮಾಡುತ್ತದೆ. ಜೊತೆಗೆ ಅರ್ಧ ಚಮಚ ಪುಡಿ ಬೆಲ್ಲ ಅಥವಾ ಸಕ್ಕರೆಯನ್ನು ಹಿಟ್ಟಿಗೆ ಬೆರೆಸಿ 10 ನಿಮಿಷ ಬಿಡಿ. ಸಿಹಿ ಅಂಶ ಹುಳಿಯನ್ನು ಬ್ಯಾಲೆನ್ಸ್ ಮಾಡುತ್ತದೆ. ಇದು ದೋಸೆಗೆ ಚೆನ್ನಾಗಿ ವರ್ಕ್ ಆಗುತ್ತದೆ. ದೋಸೆ ಬೇಗ ಕಂದು ಬಣ್ಣಕ್ಕೆ ತಿರುಗಿ ಗರಿಗರಿಯಾಗುತ್ತದೆ.

ಫ್ರೀಶ್ ಹಾಲು/ಗಟ್ಟಿ ಮೊಸರು:

ಅತಿಯಾಗಿ ಹುಳಿಯಾಗಿರುವ ಬ್ಯಾಟರ್‌ಗೆ ಕಾಲು ಕಪ್ ತಾಜಾ ಹಾಲು ಅಥವಾ ಹುಳಿ ಇಲ್ಲದ ಗಟ್ಟಿ ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ಇದರಿಂದ ಹಾಲು ಅಥವಾ ಸಿಹಿ ಮೊಸರು ಹಿಟ್ಟಿನ ತೀವ್ರವಾದ ಹುಳಿ ರುಚಿಯನ್ನು ತಕ್ಷಣವೇ ಹೀರಿಕೊಂಡು, ಹಿಟ್ಟಿನ ರುಚಿಯನ್ನು ಸಮತೋಲನಕ್ಕೆ ತರುತ್ತದೆ.

ರವೆ ಅಥವಾ ಅಕ್ಕಿ ಹಿಟ್ಟು ಮಿಕ್ಸ್:

ಹಿಟ್ಟಿನ ದಪ್ಪಕ್ಕೆ ಅನುಗುಣವಾಗಿ ಸ್ವಲ್ಪ ಅಕ್ಕಿ ಹಿಟ್ಟು ಅಥವಾ ಇಡ್ಲಿ ರವೆಯನ್ನು (ಸ್ವಲ್ಪ ನೀರು ಸೇರಿಸಿ) ಹುಳಿ ಹಿಟ್ಟಿಗೆ ನದಿಸಿಕೊಳ್ಳಿ. ಇದು ಹಿಟ್ಟಿನ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ, ಹುಳಿಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಅಕ್ಕಿ ಹಿಟ್ಟು ಸೇರಿಸುವುದರಿಂದ ದೋಸೆ ತುಂಬಾ ಗರಿಗರಿಯಾಗಿ ಬರುತ್ತದೆ.

ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಅಥವಾ ತುಪ್ಪದ ಒಗ್ಗರಣೆ:

ಒಂದು ಸಣ್ಣ ಚಮಚ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಎಣ್ಣೆ ಅಥವಾ ತುಪ್ಪವು ಬ್ಯಾಟರ್‌ನಲ್ಲಿರುವ ಹುಳಿ ವಾಸನೆ ಮತ್ತು ರುಚಿಯನ್ನು ಮರೆಮಾಚುತ್ತದೆ. ಇದರಿಂದ ಮಾಡುವ ಇಡ್ಲಿಗಳು ಅತ್ಯಂತ ಮೆತ್ತಗೆ ಬರುತ್ತವೆ.

ಬೇಯಿಸಿದ ಅನ್ನ ಸೇರಿಸಿ

ಹುಳಿ ಹಿಟ್ಟಿಗೆ 3 ಚಮಚ ತಣ್ಣಗಾದ ಬೇಯಿಸಿದ ಅನ್ನವನ್ನು ಸೇರಿಸಿ ರುಬ್ಬಿ. ಯಾಕಂದ್ರೆ, ಅನ್ನದಲ್ಲಿರುವ ಸ್ಟಾರ್ಚ್ ಹುಳಿಯನ್ನು ಕಡಿಮೆ ಮಾಡುತ್ತದೆ. ಈ ಬ್ಯಾಟರ್ ನಿಂದ ಮಾಡಿದ ಇಡ್ಲಿ ತುಂಬಾ ಮೃದುವಾಗಿ ಬರುತ್ತದೆ.

ಎಚ್ಚರ: ಹಿಟ್ಟು ಹುದುಗಿದ ತಕ್ಷಣ ಫ್ರಿಜ್‌ನಲ್ಲಿ ಇಡಿ. ಬಳಕೆಗೆ ಅರ್ಧ ಗಂಟೆ ಮೊದಲು ಮಾತ್ರ ಉಪ್ಪು ಸೇರಿಸಿ. ಬಳಕೆಯ ನಂತರ ಹಿಟ್ಟುನ್ನು ಯಾವಾಗಲೂ ಮುಚ್ಚಳವಿರುವ ಸ್ಟೀಲ್ ಅಥವಾ ಗಾಜಿನ ಡಬ್ಬದಲ್ಲಿ ಇಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಇಂದು ಸಂಜೆ 4.05 ಕ್ಕೆ ಪ್ರಮಾಣವಚನ ಕಾರ್ಯಕ್ರಮ, ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ…

ಸಂಪುಟ ವಿಸ್ತರಣೆಯಲ್ಲಿ ಭಾರೀ ಟ್ವಿಸ್ಟ್; ಸಿದ್ದು ಸಂಪುಟದ 12 ಸಚಿವರಿಗೆ ಕೊಕ್; ಹಿರಿಯರಿಗೂ ಕೈತಪ್ಪಿದ ಸಚಿವ ಸ್ಥಾನ..!

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಸಿಂಗ್‌ಗೆ ಬಿಗ್ ರಿಲೀಫ್, ದೆಹಲಿ ನ್ಯಾಯಾಲಯದಿಂದ ಖುಲಾಸೆ..!

'ಮುಸ್ಲಿಮರು ಕಾಫಿರರೊಂದಿಗೆ ಸ್ನೇಹ ಬೆಳೆಸಬಾರದು’: ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ, Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!

Iran ಮೇಲಿನ ದಾಳಿ ತಡೆಗೆ ಗಲ್ಫ್ ರಾಷ್ಟ್ರಗಳ ಸಲಹೆಯೇ ಪ್ರಮುಖ ಕಾರಣ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್