ಮಂಡಕ್ಕಿ ದೋಸೆ 
ಅಡುಗೆ

ಗರಿಗರಿಯಾದ ಮಂಡಕ್ಕಿ ದೋಸೆ: ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ!

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ.

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ. ಕಡಿಮೆ ಸಾಮಗ್ರಿಗಳಲ್ಲೇ ತಯಾರಿಸಬಹುದಾದ ಈ ರುಚಿಕರ ದೋಸೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಡಿಸಿದರೆ ಮನೆಯವರೆಲ್ಲರೂ ಇಷ್ಟಪಟ್ಟು ಸವಿಯುತ್ತಾರೆ.

ಬೇಕಾಗುವ ಪದಾರ್ಥಗಳು...

  • ಮಂಡಕ್ಕಿ – 2 ಬಟ್ಟಲು

  • ಅಕ್ಕಿ – ½ ಬಟ್ಟಲು

  • ಮೊಸರು – ½ ಬಟ್ಟಲು

  • ಉಪ್ಪು – ರುಚಿಗೆ ತಕ್ಕಷ್ಟು

  • ಸಕ್ಕರೆ – 1 ಚಮಚ

  • ನೀರು – ಅಗತ್ಯವಿರುವಷ್ಟು

  • ಎಣ್ಣೆ – ದೋಸೆ ಬೇಯಿಸಲು

ಮಾಡುವ ವಿಧಾನ...

  • ಮೊದಲು ಮಂಡಕ್ಕಿ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು, ಪ್ರತ್ಯೇಕವಾಗಿ ಅಥವಾ ಒಟ್ಟಿಗೆ 3–4 ಗಂಟೆ ನೆನೆಸಿಡಿ.

  • ನೆನೆಸಿದ ಮಂಡಕ್ಕಿ ಮತ್ತು ಅಕ್ಕಿಯನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

  • ಇದಕ್ಕೆ ಮೊಸರು, ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ.

  • ಹಿಟ್ಟನ್ನು ಮುಚ್ಚಿ 6–8 ಗಂಟೆ ಅಥವಾ ರಾತ್ರಿ ಇಟ್ಟು ಹುದುಗಲು ಬಿಡಿ.

  • ಬೆಳಗ್ಗೆ ಹಿಟ್ಟು ತುಂಬಾ ದಪ್ಪವಾಗಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ತಂದುಕೊಳ್ಳಿ.

  • ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ.

  • ಒಂದು ಸೌಟು ಹಿಟ್ಟನ್ನು ಹಾಕಿ, ದಪ್ಪವಾಗಿ ಅಥವಾ ತೆಳುವಾಗಿ ನಿಮ್ಮ ಇಷ್ಟದಂತೆ ಹರಡಿ.

  • ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ.

  • ಬಂಗಾರದ ಬಣ್ಣಕ್ಕೆ ಬಂದ ನಂತರ ತೆಗೆದು ಬಿಸಿ ಬಿಸಿಯಾಗಿ ಬಡಿಸಿ.

ಟಿಪ್ಸ್...

  • ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿದರೆ ಮಂಡಕ್ಕಿ ದೋಸೆಗೆ ಇನ್ನಷ್ಟು ರುಚಿ ಬರುತ್ತದೆ.

  • ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ತರಕಾರಿ ಸಾಂಬಾರ್‌ನೊಂದಿಗೆ ಮಂಡಕ್ಕಿ ದೋಸೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ’: ಬಾರ್ ಕೌನ್ಸಿಲ್‌ಗೆ ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯಕಾಂತ್ ತರಾಟೆ

ಉತ್ತರಾಖಂಡ: ಚಮೋಲಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ-Video

Iran ಮುಗಿಸಲು ಅಮೆರಿಕ ಮಾಸ್ಟರ್ ಪ್ಲ್ಯಾನ್: ಜಾಗತಿಕ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭೀಕರ 'ಆರ್ಥಿಕ ಯುದ್ಧ' ಘೋಷಣೆ!

'ಸಮಯವಿಲ್ಲ, ವಿಜಯನಗರ ಜಿಲ್ಲಾ ಉಸ್ತುವಾರಿ ಹೊಣೆ, ಧ್ವಜಾರೋಹಣ ನನಗೆ ಬೇಡ': ಜಮೀರ್ ಅಹ್ಮದ್ ಸಿಎಂಗೆ ಪತ್ರ

ಸ್ವಾತಂತ್ರ್ಯೋತ್ಸವಕ್ಕೆ ಸಿಲಿಕಾನ್ ಸಿಟಿ ಸಜ್ಜು: ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’ಕ್ಕೆ ಭರದ ಸಿದ್ಧತೆ, 18 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ..!