ಫಿಶ್ ಪಕೋಡಾ 
ಅಡುಗೆ

ಫಿಶ್ ಪಕೋಡಾ | Fish Pakora recipe in Kannada

ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ ಸಿಗುವ ಫಿಶ್ ಪಕೋಡಾ ಸಂಜೆ ಚಹಾದೊಂದಿಗೆ ಸವಿಯಲು ಅತ್ಯುತ್ತಮ ಸ್ನ್ಯಾಕ್. ಕಡಿಮೆ ಸಮಯದಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಮನೆಗೆ ಅತಿಥಿಗಳು ಬಂದಾಗ ಅಥವಾ ವಾರಾಂತ್ಯದ ವಿಶೇಷ ತಿಂಡಿಯಾಗಿ ಈ ಫಿಶ್ ಪಕೋಡಾ ಎಲ್ಲರ ಮನ ಗೆಲ್ಲುವುದಂತೂ ಖಚಿತ.

ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿ ಸಿಗುವ ಫಿಶ್ ಪಕೋಡಾ ಸಂಜೆ ಚಹಾದೊಂದಿಗೆ ಸವಿಯಲು ಅತ್ಯುತ್ತಮ ಸ್ನ್ಯಾಕ್. ಕಡಿಮೆ ಸಮಯದಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಮನೆಗೆ ಅತಿಥಿಗಳು ಬಂದಾಗ ಅಥವಾ ವಾರಾಂತ್ಯದ ವಿಶೇಷ ತಿಂಡಿಯಾಗಿ ಈ ಫಿಶ್ ಪಕೋಡಾ ಎಲ್ಲರ ಮನ ಗೆಲ್ಲುವುದಂತೂ ಖಚಿತ.

ಬೇಕಾಗುವ ಪದಾರ್ಥಗಳು...

  • ಮೀನು - 225 ಗ್ರಾಂ (ಮೂಳೆ ಇಲ್ಲದ್ದು)

  • ಕಾಳು ಮೆಣಸಿನ ಪುಡಿ – ¼ ಚಮಚ ಅಥವಾ 1 ಹಸಿಮೆಣಸಿನಕಾಯಿ (ಜಜ್ಜಿದ್ದು)

  • ಉಪ್ಪು – ರುಚಿಗೆ ತಕ್ಕಷ್ಟು

  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ

  • ನಿಂಬೆ ರಸ – 1½ ಚಮಚ

  • ಅರಿಶಿನ – ¼ ಚಮಚ

  • ಕಾಶ್ಮೀರಿ ಚಿಲ್ಲಿ ಪೌಡರ್ ಪುಡಿ – ½ ರಿಂದ ¾ ಚಮಚ

  • ಗರಂ ಮಸಾಲಾ – ¾ ಚಮಚ (ಐಚ್ಛಿಕ)

  • ಅಜ್ವೈನ್– ½ ಚಮಚ (ಜಜ್ಜಿದ್ದು)

  • ಪುದೀನಾ/ಕೊತ್ತಂಬರಿ/ಕರಿಬೇವಿನ ಸೊಪ್ಪು – ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)

  • ಕಡಲೆಹಿಟ್ಟು (ಬೆಸನ್) – ⅓ ಬಟ್ಟಲು

  • ಅಕ್ಕಿಹಿಟ್ಟು ಅಥವಾ ಕಾರ್ನ್‌ಸ್ಟಾರ್ಚ್ – 2½ ಚಮಚ

  • ಮೊಟ್ಟೆ – 1 (ಬಿಳಿಭಾಗ)

  • ಎಣ್ಣೆ- ಕರಿಯಲು ಬೇಕಾದಷ್ಟು

ಮಾಡುವ ವಿಧಾನ...

  • ಮೊದಲು ಮೀನಿನ ತುಂಡುಗಳಲ್ಲಿ ಸಣ್ಣ ಮೂಳೆಗಳಿವೆಯೇ ಎಂದು ಕೈಯಿಂದ ಪರಿಶೀಲಿಸಿ. ಇದ್ದರೆ ಟ್ವೀಜರ್ ಸಹಾಯದಿಂದ ತೆಗೆದುಹಾಕಿ. ಬಳಿಕ ಮೀನನ್ನು ಸುಮಾರು 1 ಇಂಚಿನ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ.

  • ಒಂದು ಮಿಕ್ಸಿಂಗ್ ಬೌಲ್‌ಗೆ ಮೀನಿನ ತುಂಡುಗಳನ್ನು ಹಾಕಿ. ಅದಕ್ಕೆ ಉಪ್ಪು, ನಿಂಬೆ ರಸ, ಅರಿಶಿನ, ಕಾಳುಮೆಣಸಿನ ಪುಡಿ ಅಥವಾ ಹಸಿಮೆಣಸಿಕಾಯಿ ಪೇಸ್ಟ್, ಶುಂಠಿ ಹಾಗೂ ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು 5 ನಿಮಿಷಕ್ಕಿಂತ ಹೆಚ್ಚು ಮೆರಿನೇಟ್ ಮಾಡಬೇಡಿ.

  • ನಂತರ ಅಜ್ವೈನ್ ಲಟ್ಟಣಿಗೆಯಿಂದ ಸ್ವಲ್ಪ ಜಜ್ಜಿ ಸುವಾಸನೆ ಬರುವಂತೆ ಮಾಡಿ. ಅದನ್ನು ಮೆರಿನೇಟ್ ಮಾಡಿದ ಮೀನಿಗೆ ಸೇರಿಸಿ. ನಂತರ ಮೊಟ್ಟೆಯ ಬಿಳಿಭಾಗ, ಕಾಶ್ಮೀರಿ ಮೆಣಸಿನ ಪುಡಿ, ಗರಂ ಮಸಾಲಾ, ಕತ್ತರಿಸಿದ ಸೊಪ್ಪು, ಕಡಲೆಹಿಟ್ಟು ಹಾಗೂ ಅಕ್ಕಿಹಿಟ್ಟನ್ನು ಸೇರಿಸಿ.

  • ಅಗತ್ಯವಿದ್ದರೆ 2–3 ಟೇಬಲ್ ಸ್ಪೂನ್ ನೀರನ್ನು ಮಾತ್ರ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಮೀನಿನ ಮೇಲೆ ಚೆನ್ನಾಗಿ ಅಂಟಿಕೊಳ್ಳುವಷ್ಟು ಮಾತ್ರ ಇರಬೇಕು. ಹಿಟ್ಟು ತುಂಬಾ ತೆಳುವಾಗಬಾರದು.

  • ಈ ನಡುವೆ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸರಿಯಾಗಿ ಬಿಸಿಯಾಗಿದೆಯೇ ಎಂದು ಪರೀಕ್ಷಿಸಲು ಸ್ವಲ್ಪ ಹಿಟ್ಟನ್ನು ಹಾಕಿ. ಅದು ನಿಧಾನವಾಗಿ ಮೇಲಕ್ಕೆ ತೇಲಿ ಬರಬೇಕು, ತಕ್ಷಣ ಕಂದು ಬಣ್ಣಕ್ಕೆ ತಿರುಗಬಾರದು.

  • ಈಗ ಮೀನಿನ ತುಂಡುಗಳನ್ನು ಒಂದೊಂದಾಗಿ ಎಣ್ಣೆಗೆ ಬಿಡಿ. ಬಾಣಲೆಯಲ್ಲಿ ಹೆಚ್ಚು ತುಂಡುಗಳನ್ನು ಒಟ್ಟಿಗೆ ಹಾಕಬೇಡಿ. ಹಾಕಿದ ನಂತರ ಮೊದಲ 2 ನಿಮಿಷ ಕೈ ಹಾಕದೆ ಬಿಡಿ.

  • ನಂತರ ನಿಧಾನವಾಗಿ ತಿರುಗಿಸುತ್ತಾ ಮಧ್ಯಮ ಉರಿಯಲ್ಲಿ 4–5 ನಿಮಿಷಗಳ ಕಾಲ ಅಥವಾ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಮೀನಿನ ದಪ್ಪಕ್ಕೆ ಅನುಗುಣವಾಗಿ ಸಮಯ ಬದಲಾಗಬಹುದು.

  • ಚೆನ್ನಾಗಿ ಕರಿದ ನಂತರ ಪಕೋಡಾವನ್ನು ಹೊರತೆಗೆದು ಟಿಷ್ಯೂ ಪೇಪರ್ ಮೇಲೆ ಇಡಿ. ಮುಂದಿನ ಬ್ಯಾಚ್ ಕರಿಯುವಾಗ ಎಣ್ಣೆ ಅತಿಯಾಗಿ ಬಿಸಿಯಾಗದಂತೆ ನೋಡಿಕೊಳ್ಳಿ. ಹೆಚ್ಚು ಬಿಸಿ ಎಣ್ಣೆಯಲ್ಲಿ ಕರಿದರೆ ಹೊರಭಾಗ ಮಾತ್ರ ಬೇಯುತ್ತದೆ, ಒಳಗೆ ಮೀನು ಹಸಿಯಾಗಿಯೇ ಉಳಿಯಬಹುದು.

  • ಬಿಸಿ ಬಿಸಿ ಫಿಶ್ ಪಕೋಡಾವನ್ನು ಚಹಾ, ಪುದೀನಾ ಚಟ್ನಿ, ಕೊತ್ತಂಬರಿ ಚಟ್ನಿ ಅಥವಾ ನಿಮ್ಮ ಇಷ್ಟದ ಡಿಪ್ ಜೊತೆಗೆ ಬಡಿಸಿ. ಜೊತೆಗೆ ಈರುಳ್ಳಿ ತುಂಡುಗಳು ಹಾಗೂ ನಿಂಬೆ ಹೋಳುಗಳನ್ನು ನೀಡಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

ಟಿಪ್ಸ್

  • ಅಜ್ವೈನ್ ಜಜ್ಜಿ ಬಳಸಿದರೆ ಅದರ ಸುವಾಸನೆ ಚೆನ್ನಾಗಿ ಬರುತ್ತದೆ.

  • ಗರಂ ಮಸಾಲಾ ಮೀನಿನ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇಕಿಲ್ಲದಿದ್ದರೆ ಬಿಡಬಹುದು.

  • ಮೀನನ್ನು 5 ನಿಮಿಷಕ್ಕಿಂತ ಹೆಚ್ಚು ಮೆರಿನೇಟ್ ಮಾಡಬೇಡಿ. ಹೆಚ್ಚು ಹೊತ್ತು ಇಟ್ಟರೆ ಮೀನು ಮೆತ್ತಗಾಗಿ ಬಿಡುತ್ತದೆ.

  • ಪಕೋಡಾವನ್ನು ಯಾವಾಗಲೂ ಮಧ್ಯಮ ಉರಿಯಲ್ಲಿ ಕರಿಯಿರಿ. ಹೆಚ್ಚು ಉರಿಯಲ್ಲಿ ಕರಿದರೆ ಹೊರಗೆ ಮಾತ್ರ ಬೇಯುತ್ತದೆ, ಕಡಿಮೆ ಉರಿಯಲ್ಲಿ ಕರಿದರೆ ಹೆಚ್ಚು ಎಣ್ಣೆ ಹೀರಿಕೊಂಡು ಮೃದುವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video

'ಸ್ವಂತ ಕೆಲಸದ ಮೇಲೆ ನಂಬಿಕೆ ಇಲ್ಲವೇ?': ಸಚಿವರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ?; CJP ಸಂಸ್ಥಾಪಕ ಅಭಿಜಿತ್ ದೀಪ್ಕೆ