ಆಧಾರ್ 
ಗ್ಯಾಡ್ಜೆಟ್ಸ್

ಆಧಾರ್ ಕಾರ್ಡುದಾರರಿಗೆ ಹೊಸ ಸೇವೆ ಆರಂಭಿಸಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ

ಆಧಾರ್ ಕಾರ್ಡುದಾರರಿಗೆ ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ (ಯುಐಎಐ)  “ಆಸ್ಕ್  ಆಧಾರ್” ಹೆಸರಿನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸಿದೆ.

ನವದೆಹಲಿ: ಆಧಾರ್ ಕಾರ್ಡುದಾರರಿಗೆ ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ (ಯುಐಎಐ)  “ಆಸ್ಕ್  ಆಧಾರ್” ಹೆಸರಿನಲ್ಲಿ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸಿದೆ.

ಯುಐಡಿಎಐ ಛಾಟ್‌ಬಾಟ್ ಸೇವೆ ಅಂದರೆ, ಆಧಾರ್ ಗೆ  ಸಂಬಂಧಿಸಿದ  ಸಂದೇಹಗಳು, ಸಮಸ್ಯೆಗಳಿಗೆ  ಛಾಟ್ ಬಾಟ್ ಸೇವೆಯನ್ನು ಬಳಸಿಕೊಂಡು  ಜನರು  ಆಧಾರ್ ಸಮಸ್ಯೆಗಳನ್ನು  ಪರಿಹರಿಸಿಕೊಳ್ಳಬಹುದು 

ನೀವು ಯುಐಡಿಎಐ ಅಧಿಕೃತ ವೆಬ್‌ಸೈಟ್ https://uidai.gov.in/ ಅನ್ನು ತೆರೆದರೆ,  ಛಾಟ್‌ಬಾಟ್ ಐಕಾನ್ ಕಾಣಿಸಿಕೊಳ್ಳುತ್ತದೆ. ಆ ಐಕಾನ್  ಮೇಲೆ  ಕ್ಲಿಕ್ ಮಾಡುವ ಮೂಲಕ ಸಮಸ್ಯೆಯನ್ನು ವಿವರಿಸಬಹುದು. ಆಧಾರ್ ನವೀಕರಣ ಮಾಹಿತಿ, ಆಧಾರ್ ಸ್ಥಿತಿ, ಡೌನ್‌ಲೋಡ್ ಇ ಆಧಾರ್, ಆಧಾರ್ ದಾಖಲಾತಿ ಈ  ರೀತಿ   ಆಧಾರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು

ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ  ಛಾಟ್ ಬಾಟ್  ಸೇವೆ ಲಭ್ಯವಿದೆ. ಆಧಾರ್ ಗೆ  ಸಂಬಂಧಿಸಿದ  ವೀಡಿಯೊಗಳು.  ಸಂಬಂಧಿತ ವಿಷಯಗಳನ್ನು  ಇದೇ  ವಿಂಡೋದಲ್ಲಿ ವೀಕ್ಷಿಸಬಹುದು.
 
ಇದರೊಂದಿಗೆ ಆಧಾರ್  ಸಂಬಂಧಿಸಿದ ಯುಐಡಿಎಐ ಮತ್ತೊಂದು ಮೈಲಿಗಲ್ಲು ತಲುಪಿದೆ.  ಈವರೆಗೆ  ೧೨೫ ಕೋಟಿ ಜನರು ಆಧಾರ್ ಕಾರ್ಡ್  ಪಡೆದುಕೊಂಡಿದ್ದಾರೆ  ಎಂದು  ಅಧಿಕೃತವಾಗಿ ಯುಐಡಿಎಐ  ಪ್ರಕಟಿಸಿದೆ

 ಆಧಾರ್ ಕಾರ್ಡ್ ಅನ್ನು ಪ್ರಾಥಮಿಕವಾಗಿ   ಗುರುತಿನ ಚೀಟಿಯಾಗಿ  ಹೆಚ್ಚು  ಬಳಸಲಾಗುತ್ತಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ. ಆಧಾರ್  ಸೇವೆ ಪ್ರಾರಂಭವಾದಾಗಿನಿಂದ ೩೭ ಶತಕೋಟಿ  ಬಾರಿ  ಟೆಸ್ಟ್  ಅಥೆಂಟಿಕೇಷನ್   ನಡೆಸಲಾಗಿದೆ ಎಂದು ಅಂದಾಜಿಸಲಾಗಿದೆ

 ಅಷ್ಟೇ ಅಲ್ಲ  ಪ್ರತಿ ದಿನ  ಆಧಾರ್ ಅಥೆಂಟಿಕೇಷನ್ ಗಾಗಿ  ಮೂರು  ಕೋಟಿ  ಕೋರಿಕೆಗಳು  ಯುಐಡಿಎಐಗೆ  ಬರುತ್ತಿವೆ. ಇದುವರೆಗೆ ೩೩೧ ಕೋಟಿ ಆಧಾರ್ ನವೀಕರಣ  ನಡೆದಿವೆ. ಆಧಾರ್ ನವೀಕರಣಕ್ಕಾಗಿ ಪ್ರತಿದಿನ ೩ ರಿಂದ ೪ ಲಕ್ಷ ಕೋರಿಕೆಗಳು  ಬರುತ್ತಿವೆ  ಎಂದು  ಅಧಿಕೃತವಾಗಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT