ಗ್ಯಾಡ್ಜೆಟ್ಸ್

ಈ ಮೊಬೈಲ್ ಫೋನ್ ಗಳಲ್ಲಿ ಜನವರಿ 1 ರಿಂದ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತ!

Srinivas Rao BV

ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಜನವರಿ 1 ರಿಂದ ನಿರ್ದಿಷ್ಟ ಮೊಬೈಲ್ ಫೋನ್ ಗಳಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆ. 

ಆಂಡ್ರಾಯ್ಡ್ 4.0.3 ಆಪರೇಟಿಂಗ್ ಸಿಸ್ಟಮ್ ಹಾಗೂ ಅದಕ್ಕಿಂತ ಹೊಸತು ಮತ್ತೆ ಐಫೋನ್ ಗಳಲ್ಲಿ ಐಒಎಸ್ 9 ಹಾಗೂ ಅದಕ್ಕಿಂತ ಹೊಸ ಮೊಬೈಲ್ ಗಳಿಗೆ ಮಾತ್ರವೇ ವಾಟ್ಸ್ ಆಪ್ ಕಾರ್ಯನಿರ್ವಹಣೆ ಅನುಮತಿಯನ್ನು ನೀಡಲಿದ್ದು, ಇದಕ್ಕಿಂತ ಹಳೆಯದಾದ ಕೆಲವು ಆಂಡ್ರಾಯ್ಡ್ ಹಾಗೂ ಐಫೋನ್ ಗಳಲ್ಲಿ ವಾಟ್ಸ್ ಆಪ್ ಸೌಲಭ್ಯ ಇನ್ನು ಮುಂದೆ ಶಾಶ್ವತವಾಗಿ ಅಲಭ್ಯವಾಗಲಿದೆ ಎಂದು ವಾಟ್ಸ್ ಆಪ್ ತಿಳಿಸಿದೆ.

ಐಫೋನ್ 4S, ಐಫೋನ್ 5, ಐಫೋನ್ 5S, ಐಫೋನ್ 6 ಹಾಗೂ ಐಫೋನ್ 6S ಗಳು ಅಂದರೆ ಐಫೋನ್ 4 ಕ್ಕೂ ಮುಂಚಿತವಾಗಿ ಪರಿಚಯಗೊಂಡ ಐ ಫೋನ್ ಗಳು ವಾಟ್ಸ್ ಆಪ್ ಗೆ ಸಪೋರ್ಟ್ ಕಳೆದುಕೊಳ್ಳಲಿವೆ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಹೆಚ್ ಟಿಸಿ ಡಿಸೈರ್, ಮೊಟೋರೋಲಾ ಡ್ರೋಯ್ಡ್ ರೇಜರ್, ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್ ಹಾಗೂ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಸ್2 ವಾಟ್ಸ್ ಆಪ್ ಸಪೋರ್ಟ್ ನ್ನು ಜ.1 ರಿಂದ ಕಳೆದುಕೊಳ್ಳಲಿದೆ.

ಜಿಯೋ ಫೋನ್ ಹಾಗೂ ಜಿಯೋಫೋನ್ 2 ಸೇರಿದಂತೆ KaiOS 2.5.1 OS ಹಾಗೂ ಹೊಸ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಸಪೋರ್ಟ್ ಮುಂದುವರೆಯಲಿದೆ.

SCROLL FOR NEXT