ಗ್ಯಾಡ್ಜೆಟ್ಸ್

ಟಿಸಿಎಲ್‌ ಎಐ ಬೆಂಬಲಿತ ಟಿವಿ ಬಿಡುಗಡೆ

Srinivas Rao BV

ಬೆಂಗಳೂರು: ಜಾಗತಿಕ ಮಟ್ಟದಲ್ಲಿ 2ನೇ ಪ್ರಮುಖ ಸ್ಥಾನದಲ್ಲಿರುವ ಟಿವಿ ಸಂಸ್ಥೆ ಟಿಸಿಎಲ್‌, ಸ್ಮಾರ್ಟ್‌ ಶ್ರೇಣಿಯಲ್ಲಿ ಎಐ ಬೆಂಬಲಿತ ಟಿವಿಗಳು ಮತ್ತು ಏರ್‌ ಕಂಡೀಷನರ್‌ಗಳನ್ನು ಟಿಸಿಎಲ್‌ ಹೋಮ್ ಆಪ್‌ ಸಹಿತ ಪರಿಚಯಿಸಿದೆ (ಆಂಡ್ರಾಯ್ಡ್‌ + ಒಎಸ್). 

ಜಾಗತಿಕ ಎಲೆಕ್ಟ್ರಾನಿಕ್ಸ್‌ ದೈತ್ಯ ವಿಶ್ವದಲ್ಲೇ ಅತ್ಯಂತ ಪ್ರಭಾವಿ ಮತ್ತು ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಕಂಪನಿಗಳಲ್ಲಿ ಒಂದಾಗಿದ್ದು, 39 ವರ್ಷಗಳ ಇತಿಹಾಸವನ್ನು ಇದು ಹೊಂದಿದೆ. ಟಿವಿ ವಿಭಾಗದಲ್ಲಿ ಭಾರಿ ಯಶಸ್ಸು ಮತ್ತು ತ್ವರಿತ ಪ್ರಗತಿಯನ್ನು ಸಾಧಿಸಿದ ಟಿಸಿಎಲ್, ಎಐ ಆಧರಿತ ಸ್ಮಾರ್ಟ್‌ ಟಿವಿ ಮತ್ತು ಐಒಟಿ ಹೊಂದಿರುವ ಎಸಿಗಳ ಮೇಲೆ ಗಮನ ಹರಿಸುವ ಮೂಲಕ ಗೃಹ ಮನರಂಜನೆ ಮತ್ತು ಕಂಫರ್ಟ್‌ ಸ್ಪೇಸ್ ಅನ್ನು ಬದಲಾವಣೆ ಮಾಡಲು ಟಿಸಿಎಲ್ ದಾಪುಗಾಲಿರಿಸಿದೆ. 

ಟಿಸಿಎಲ್ ಇತ್ತೀಚೆಗೆ ಬಿಡುಗಡೆ ಮಾಡಿದ 4ಕೆ ಎಐ ಟಿವಿ ಶ್ರೇಣಿಯು ಭಾರತದಲ್ಲಿ ಟಿವಿ ವಲಯವನ್ನು ಬದಲಾವಣೆ ಮಾಡಲಿದೆ. ಟಿಸಿಎಲ್‌ 4ಕೆ ಎಐ ಆಂಡ್ರಾಯ್ಡ್‌ ಟಿವಿ ಸಿರೀಸ್‌ನಲ್ಲಿ ಡಾಲ್ಬಿ ವಿಷನ್‌ ಮತ್ತು ಡಬ್ಲ್ಯೂಸಿಜಿ ಇದ್ದು, ವರ್ಧಿತ ಮತ್ತು ವಿವಿಡ್ ವೀಕ್ಷಣೆ ಹಾಗೂ ಆಳ ಮತ್ತು ವೈವಿಧ್ಯಮಯ ವರ್ಣಗಳಿವೆ. ಇತ್ತೀಚಿನ ಆನ್‌ಕ್ಯೋ ಸ್ಪೀಕರ್ ಮತ್ತು ಡಾಲ್ಬಿ ಆಟ್ಮೋಸ್ ಟೆಕ್ನಾಲಜಿಯು ಧ್ವನಿ ಗುಣಮಟ್ಟವನ್ನು ವರ್ಧಿಸುತ್ತದೆ ಮತ್ತು ಟಿವಿಯು ಆಂಡ್ರಾಯ್ಡ್‌ ಪೈ (9.0) ಸಿಸ್ಟಂ ಹೊಂದಿದ್ದು, ಇದರಲ್ಲಿ ನಿಮ್ಮ ಮನೆಯ ಟಿವಿ ಸ್ಕ್ರೀನ್‌ಗೆ ಉತ್ತಮ ಸಿನೆಮಾ ಅನುಭವವನ್ನು ಒದಗಿಸಲು ಗೂಗಲ್ ಅಸಿಸ್ಟೆಂಟ್‌ ಕೂಡ ಇದೆ. ಎರಡು ಗಾತ್ರದಲ್ಲಿ ಅಂದರೆ 55 ಇಂಚು ಸ್ಕ್ರೀನ್ (55ಸಿ8) ಮತ್ತು 65 ಇಂಚು ಸ್ಕ್ರೀನ್ (65ಸಿ8) ಲಭ್ಯವಿವೆ.

SCROLL FOR NEXT