ಗ್ಯಾಡ್ಜೆಟ್ಸ್

ವಾಟ್ಸಪ್ ಹೊಸ ಫೀಚರ್: ಒಂದೇ ಸಂಖ್ಯೆಯಿಂದ ನಾಲ್ಕು ಡಿವೈಸ್ ಕನೆಕ್ಷನ್ ಗೆ ಅವಕಾಶ!

Raghavendra Adiga

ಜನಪ್ರಿಯ ಸಾಮಾಜಿಕ ಮಾದ್ಯಮ ವಾಟ್ಸಪ್ ಇದೀಗ ಮಲ್ಟಿ ಡಿವೈಸ್ ಫೀಚರ್ ಅನ್ನು ನೀಡಲು ಮುಂದಾಗಿದೆ. ಈ ಮೂಲಕ ಯಾರಾದರೂ ತಮ್ಮ ಒಂದೇ ವಾಟ್ಸಪ್ ನಂಬರ್ ಅನ್ನು ನಾಲ್ಕು ವಿಭಿನ್ನ ಡಿವೈಸ್ ಗಳಲ್ಲಿ ಏಕಕಾಲಕ್ಕೆ ಬಳಸಬಹುದಾಗಿರುತ್ತದೆ. ಫೇಸ್‌ಬುಕ್‌  ಮಾಲಿಕತ್ವದ ವಾಟ್ಸಪ್ ಈ ಮೂಲಕ ತನ್ನ ಗ್ರಾಹಕರಿಗೆ  ಇನ್ನಷ್ಟು ಸುಲಲಿತ ಸೇವೆ ಒದಗಿಸಲು ಮುಂದಾಗಿದೆ.

ಇದುವರೆಗೆ ಒಂದು ವಾಟ್ಸಪ್ ಸಂಖ್ಯೆಯನ್ನು ಒಂದು ಮೊಬೈಲ್ ನಲ್ಲಿ ಮಾತ್ರ ಬಳಸಲು ಅವಕಾಶವಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಏಕಕಾಲಕ್ಕೆ ನಾಲ್ಕು ಡಿವೈಸ್ ಗಳಲ್ಲಿ ಒಂದೇ ವಾಟ್ಸಪ್ ಸಂಖ್ಯೆ ಬಳಕೆ ಮಾಡಲು ಅವಕಾಶವಿರಲಿದೆ.  

ಸಧ್ಯ ವಾಟ್ಸಪ್ ಬಿಟಾ ಆವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು ಸಧ್ಯದಲ್ಲೇ ಎಲ್ಲರ ವಾಟ್ಸಪ್ ಗಳಲ್ಲಿ ಈ ಸೌಲಭ್ಯ ಸಿಕ್ಕಲಿದೆ ಎಂದು ಹೇಳಲಾಗಿದೆ.

ನೀವು ವಾಟ್ಸಪ್ ನ ಬಲತುದಿಯಲ್ಲಿನ ಮೂರು ಚುಕ್ಕೆಗಳ ಒತ್ತಿದಾಗ ‘Linked Device’ ಎಂಬ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯ ಮೂಲಕ ಈ ಫೀಚರ್ ಬಳಕೆ ಮಾಡಿಕೊಳ್ಲಲು ಸಾಧ್ಯವಿದೆ. ಡೆಸ್ಕ್‌ಟಾಪ್‌ ಆವೃತ್ತಿಯ ವಾಟ್ಸಪ್‌ ವೆಬ್ಮೂಲಕವೂ ಈ ಆಯ್ಕೆಯನ್ನು ಬಳಸಲು ವಾಟ್ಸಪ್ ಬಳಕೆದಾರರಿಗೆ ಅನುಕೂಲ ಕಲ್ಪಿಸಲಾಗಿದೆ. 

SCROLL FOR NEXT