ಗ್ಯಾಡ್ಜೆಟ್ಸ್

ಭಾರೀ ಸದ್ದು ಮಾಡುತ್ತಿದ್ದ 'ರಿಮೂವ್ ಚೀನಾ ಆ್ಯಪ್' ಪ್ಲೇಸ್ಟೋರ್'ನಿಂದ ಔಟ್

Manjula VN

ನವದೆಹಲಿ: ಮೊಬೈಲ್ ನಲ್ಲಿ ಇನ್ ಸ್ಟಾಲ್ ಆಗಿರುವ ಚೀನಾ ಆ್ಯಪ್ ಗಳನ್ನು ಡಿಲೀಟ್ ಮಾಡಲೆಂದೇ ವಿನ್ಯಾಸಗೊಂಡು ಭಾರೀ ಜನಪ್ರಿಯಗಳಿಸಿದ್ದ ರಿಮೂವ್ ಚೀನಾ ಆ್ಯಪ್'ನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ. 

ಬಳಕೆದಾರರನ್ನು ತಪ್ಪುದಾರಿಗೆಳೆಯುವುದು ಹಾಗೂ ಇತರ ಆ್ಯಪ್ ಗಳನ್ನು ನಿಷ್ಕ್ರಿಯಗೊಳಿಸುವಂತೆ ಮಾಡುವುದು ಗೂಗಲ್ ನಿಯಮಗಳಿಗೆ ವಿರುದ್ಧವಾಗಿದ್ದು, ಹಾಗಾಗಿ ಅದನ್ನು ತೆಗೆದು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಜೈಪುರ ಮೂಲಕ ಒನ್ ಟಚ್ ಆ್ಯಪ್ ಅಭಿವೃದ್ಧಿಪಡಿಸಿದ್ದ ರಿಮೂವ್ ಚೀನಾ ಆ್ಯಪ್'ನ್ನು 50 ಲಕ್ಷ ಜನರು ಡೌನ್ ಲೋಡ್ ಮಾಡಿಕೊಂಡಿದ್ದರು. ಟಿಕ್ ಟಾಕ್'ನ ಸ್ವದೇಶಿ ಆವೃತ್ತಿ ಎಂದು ಬಿಂಬಿತವಾಗಿದ್ದ ಮಿತ್ರೋಂ ಆ್ಯಪ್'ನ್ನು ಪ್ಲೇಸ್ಟೋರ್'ನಿಂದ ಗೂಗಲ್ ಈಗಾಗಲೇ ತೆಗೆದಿದೆ. 

SCROLL FOR NEXT