ಗ್ಯಾಡ್ಜೆಟ್ಸ್

ಗೂಗಲ್ ಫೋಟೋಸ್: 2021 ರ ಜೂನ್ ನಿಂದ ಉಚಿತವಾಗಿ ಫೋಟೋ ಅಪ್ಲೋಡ್ ಸೌಲಭ್ಯಕ್ಕೆ ಕಡಿವಾಣ!

Srinivas Rao BV

ಸರಿಸುಮಾರು 4 ಟ್ರಿಲಿಯನ್ ಫೋಟೋ ಹಾಗೂ ವಿಡೀಯೋಗಳನ್ನು ಜಾಗತಿಕವಾಗಿ ಹೊಂದಿರುವ ಗೂಗಲ್ ಫೋಟೋಸ್ ನಲ್ಲಿ ಉಚಿತವಾಗಿ ಫೋಟೋ ಅಪ್ಲೋಡ್ ಮಾಡುವ ಸೌಲಭ್ಯ ಕೊನೆಗೊಳ್ಳುತ್ತಿದೆ.

ಗೂಗಲ್ ಫೋಟೋಸ್ ನೀತಿಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, 2021 ರ ಜೂ.1 ರಿಂದ ಉಚಿತವಾಗಿ ಗೂಗಲ್ ಫೋಟೋಸ್ ನಲ್ಲಿ ಫೋಟೋ ಅಪ್ಲೋಡ್ ಮಾಡುವಂತಿಲ್ಲ.

ಈ ನಿಗದಿತ ದಿನಾಂಕದ ನಂತರ ಅಪ್ಲೋಡ್ ಮಾಡಲಾಗುವ ಅಧಿಕ ಗುಣಮಟ್ಟದ ಫೋಟೋಗಳನ್ನು ಗೂಗಲ್ ಸ್ಟೋರೇಜ್ ಕೋಟಾದ ಅಡಿಯಲ್ಲಿ ಪರಿಗಣಿಸಿ, ಜಿ-ಮೇಲ್ ಅಥವಾ ಡ್ರೈವ್ ಮಾದರಿಯಲ್ಲೇ ಗೂಗಲ್ ಫೋಟೋಸ್ ಸಹ ನಿಗದಿತ ಸಂಗ್ರಹ ಮಿತಿಯನ್ನು ಹೊಂದಲಿದೆ.

ಈಗಿನ ನೀತಿಯ ಪ್ರಕಾರ ಅಧಿಕ ಗುಣಮಟ್ಟದ, 16 ಎಂಪಿಗೆ ಕಂಪ್ರೆಸ್ ಮಾಡಲಾಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಅನಿಯಮಿತವಾಗಿ ಬ್ಯಾಕ್ ಅಪ್ ಮಾಡಬಹುದಾಗಿದೆ.

ಮೂಲ ಫೋಟೋಗಳನ್ನು ಬ್ಯಾಕ್ ಅಪ್ ಗೆ ಈಗಾಗಲೇ ನೀವು ಆಯ್ಕೆ ಮಾಡಿದಲ್ಲಿ ಗೂಗಲ್ ಸ್ಟೋರೇಜ್ ಮಿತಿಯಲ್ಲೇ ಅದನ್ನು ಪರಿಗಣಿಸಲಾಗುತ್ತದೆ.

ಹೊಸ ನಿಯಮವೇನು

ಹೊಸ ನಿಯಮಗಳ ಪ್ರಕಾರ ಹೊಸ ಬಳಕೆದಾರರಿಗೆ 15ಜಿಬಿ ವರೆಗೆ ಸಂಗ್ರಹ ಮಿತಿಯನ್ನು ನೀಡಲಾಗುತ್ತದೆ. ಹೆಚ್ಚು ಸ್ಟೋರೇಜ್ ಮಿತಿ ಅಗತ್ಯವಿದ್ದಲ್ಲಿ ಗೂಗಲ್ ಒನ್ ನಿಂದ ಚಂದಾರಾರ ಯೋಜನೆಯನ್ನು ಖರೀದಿಸಬೇಕಾಗುತ್ತದೆ.

ಜೂ.2021 ರವರೆಗೆ ಈಗಿನ ಗ್ರಾಹಕರಿಗೆ ಹೊಸ ನಿಯಮಗಳಿಂದ ವಿನಾಯಿತಿ ಸಿಗಲಿದೆ ಎಂದು ಗೂಗಲ್ ತಿಳಿಸಿದೆ. ಈ ದಿನಾಂಕದ ನಂತರ ಅಪ್ ಲೋಡ್ ಆಗುವ ಫೋಟೋ ಹಾಗೂ ವಿಡಿಯೋಗಳನ್ನು 15 ಜಿಬಿ ಮಿತಿಯ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತದೆ.

SCROLL FOR NEXT