ಸಿಮ್ ಕಾರ್ಡ್ Online Desk
ಗ್ಯಾಡ್ಜೆಟ್ಸ್

ನಿಮಗೆ ಗೊತ್ತಿಲ್ಲದೇ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಇರಬಹುದು? ನಕಲಿ ನಂಬರ್ ಬ್ಲಾಕ್ ಮಾಡೋದು ಹೇಗೆ ಗೊತ್ತಾ?

ಎಷ್ಟೋ ಜನರಿಗೆ ತಮ್ಮ ಹೆಸರಲ್ಲಿ ಎಷ್ಟು ಮೊಬೈಲ್ ನಂಬರ್ ಆಕ್ಟಿವ್ ಇದೆ ಅಂತಾನೇ ಗೊತ್ತಿಲ್ಲ! ಯಾಕಂದ್ರೆ, ಅವರ ಹತ್ತಿರ 1 ಇಲ್ಲಾ 2 ಸಿಮ್ ಇದ್ರೆ, ಅವ್ರಿಗೆ ಗೊತ್ತಿಲ್ಲದೆಯೂ ಮತ್ತೊಂದು - ಎರಡು ಸಿಮ್ ಇರಬಹುದು! ಹಾಗಾದ್ರೆ, ಅದನ್ನ ತಿಳಿದು ಕೊಳ್ಳೋದು ಹೇಗೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಭಾರತದ ಅಂದಾಜು ಜನಸಂಖ್ಯೆ 146 ಕೋಟಿ, ಆದರೆ ಭಾರತದಲ್ಲಿ ಅಂದಾಜು 134 ಕೋಟಿ ಸಿಮ್ ಇದೆ! ಅಂದ ಮಾತ್ರಕ್ಕೆ ಪ್ರತಿಯೊಬ್ಬರ ಬಳಿಯೂ ಒಂದ್ ಒಂದೇ ಸಿಮ್ ಇದೆ ಅಂತಾ ಅಲ್ಲ. ಯಾಕಂದ್ರೆ, ಅದೆಷ್ಟೋ ಜನರ ಬಳಿ 2 ಸಿಮ್ ಇದೆ. ಇನ್ನೂ ಕೆಲವರ ಬಳಿ 3 ಸಿಮ್ ಇದೆ! ಈ ಎಲ್ಲದರ ನಡುವೆ, ಅದೆಷ್ಟೋ ಜನರಿಗೆ ತಮ್ಮ ಹೆಸರಲ್ಲಿ ಎಷ್ಟು ಮೊಬೈಲ್ ನಂಬರ್ ಆಕ್ಟಿವ್ ಇದೆ ಅಂತಾನೇ ಗೊತ್ತಿಲ್ಲ! ಯಾಕಂದ್ರೆ, ಅವರ ಹತ್ತಿರ 1 ಇಲ್ಲಾ 2 ಸಿಮ್ ಇದ್ರೆ, ಅವ್ರಿಗೆ ಗೊತ್ತಿಲ್ಲದೆಯೂ ಮತ್ತೊಂದು - ಎರಡು ಸಿಮ್ ಇರಬಹುದು! ಹಾಗಾದ್ರೆ, ಅದನ್ನ ತಿಳಿದು ಕೊಳ್ಳೋದು ಹೇಗೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಹೌದು, ನಿಮ್ಮ ಹೆಸರಿನಲ್ಲಿ (ಆಧಾರ್ ಕಾರ್ಡ್) ಎಷ್ಟು ಮೊಬೈಲ್ ನಂಬರ್‌ಗಳು ಚಾಲ್ತಿಯಲ್ಲಿವೆ ಎಂಬುದನ್ನು ಸರ್ಕಾರದ ಅಧಿಕೃತ Sanchar Saathi Portal ಮೂಲಕ ಕೇವಲ 2 ನಿಮಿಷಗಳಲ್ಲಿ ಪರಿಶೀಲಿಸಬಹುದು ಮತ್ತು ನಿಮ್ಮ ಅನುಮತಿಯಿಲ್ಲದೆ ಇರುವ ನಕಲಿ ಸಿಮ್‌ಗಳನ್ನು ಬ್ಲಾಕ್ ಮಾಡಬಹುದು. ಅದೇಗೆ ಗೊತ್ತಾ?

ನಿಮ್ಮ ಬಳಿ ಇಲ್ಲದ, ನಿಮ್ಮ ಹೆಸರಿನ ಮೊಬೈಲ್ ನಂಬರ್ ಬ್ಲಾಕ್ ಮಾಡೋದು ಹೇಗೆ ಗೊತ್ತಾ?

  • ಮೊದಲಿಗೆ ಕೇಂದ್ರ ಸರ್ಕಾರದ ಅಧಿಕೃತ Sanchar Saathi Portal ಲಿಂಕ್ ಕ್ಲಿಕ್ ಮಾಡಿ.

  • ನಂತರ ಹೋಮ್ ಪೇಜ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ, "Know Your Mobile Connections" (TAFCOP) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

  • ಈಗ ನಿಮ್ಮ ಪ್ರಸ್ತುತ 10 ಅಂಕಿಯ ಮೊಬೈಲ್ ನಂಬರ್ ಮತ್ತು ಸ್ಕ್ರೀನ್ ಮೇಲಿರುವ ಕ್ಯಾಪ್ಚಾ (Captcha) ಕೋಡ್ ಅನ್ನು ಟೈಪ್ ಮಾಡಿ.

  • ತದ ನಂತರ 'Validate OTP' ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆಯನ್ನು ನಮೂದಿಸಿ ಲಾಗ್-ಇನ್ ಆಗಿ.

  • ಈಗ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

  • ಅದರಂತೆ, ಲಿಸ್ಟ್ ನಲ್ಲಿ ನಿಮ್ಮದಲ್ಲದ ಅಥವಾ ನಿಮಗೆ ಬೇಡದ ನಂಬರ್ ಇದ್ದರೆ, ಅದರ ಮುಂದೆ ಇರುವ ಬಾಕ್ಸ್ ಟಿಕ್ ಮಾಡಿ.

  • ಇದೆ ವೇಳೆ ಅಲ್ಲಿ ಕಾಣಿಸುವ 'Not My Number' ಅಥವಾ 'Not Required' ಆಯ್ಕೆಯನ್ನು ಆರಿಸಿ, 'Report' ಬಟನ್ ಕ್ಲಿಕ್ ಮಾಡಿ.

ಹೀಗೆ, ವರದಿ ಮಾಡಿದ ನಂತರ ಸರ್ಕಾರದಿಂದ ನಿಮಗೆ ಒಂದು Ticket ID (ರೆಫರೆನ್ಸ್ ನಂಬರ್) ಸಿಗುತ್ತದೆ, ಅದರ ಮೂಲಕ ನಿಮ್ಮ ದೂರಿನ ಸ್ಥಿತಿಯನ್ನು ನೀವು ಟ್ರ್ಯಾಕ್ ಮಾಡಬಹುದು. ತನಿಖೆಯ ನಂತರ ಆ ನಕಲಿ ಸಂಖ್ಯೆಯನ್ನು ಕಾಯಂ ಆಗಿ ಬ್ಲಾಕ್ ಮಾಡಲಾಗುತ್ತದೆ.

ಸಿಮ್ ಕಾರ್ಡ್

ಹಾಗಾದ್ರೆ, ಓರ್ವ ವ್ಯಕ್ತಿ ತಮ್ಮ ಬಳಿ ಎಷ್ಟು ಸಿಮ್ ಇಟ್ಟುಕೊಳ್ಳಬಹುದು?

ದೂರಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಹೊಂದಲು ಅವಕಾಶವಿದೆ. ಆದರೆ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಜನರು ಗರಿಷ್ಠ 6 ಸಿಮ್‌ಗಳು ಮಾತ್ರವೇ ಪಡೆಯಬಹುದು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ನಿತೀಶ್ ಕುಮಾರ್ ರಾಜೀನಾಮೆ ನಂತರ ಪಕ್ಷದ ಹೆಸರು ಬದಲಾವಣೆಗೆ ಮುಂದಾದ JDU; ಇಲ್ಲಿದೆ ಕಾರಣ...

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ; ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ; ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ! Video