ಸಾಂಕೇತಿಕ ಚಿತ್ರ 
ಗಣೇಶ ಚತುರ್ಥಿ

ಗಣಪತಿಯ ವಿವಿಧ ಹೆಸರುಗಳು

ವಿಘ್ನ ನಿವಾರಕ ಗಣಪತಿಯನ್ನು ಭಕ್ತರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಹಿಂದೂ ಧರ್ಮಗ್ರಂಥದಲ್ಲಿ...

ವಿಘ್ನ ನಿವಾರಕ ಗಣಪತಿಯನ್ನು ಭಕ್ತರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಹಿಂದೂ ಧರ್ಮಗ್ರಂಥದಲ್ಲಿ ಗಣೇಶನಿಗೆ 108 ಹೆಸರುಗಳಿವೆ. ಅವುಗಳಲ್ಲಿ ತುಂಬಾ ಮುಖ್ಯವಾದ ಹೆಸರುಗಳು ಇಂತಿವೆ.

ವಕ್ರತುಂಡ: ಸಾಮಾನ್ಯವಾಗಿ ವಕ್ರತುಂಡ ಎಂದರೆ ಬಾಗಿದ ಸೊಂಡಿಲು ಎಂದರ್ಥ. ಆದರೆ ಸಂಸ್ಕೃತದಲ್ಲಿ ಬೇರೆಯ ಅರ್ಥ ಇದೆ. ವಕ್ರತುಂಡ ಎಂದರೆ ತಪ್ಪು ದಾರಿಯಲ್ಲಿ ನಡೆಯುವವರನ್ನು ಸರಿಪಡಿಸಿ ಸರಿದಾರಿಯಲ್ಲಿ ನಡೆಯುವಂತೆ ಮಾಡುವವ ಎಂದರ್ಥ.

ಏಕದಂತ:  ಒಂದು ಹಲ್ಲು ಇರುವವನು. ಗಣಪತಿಯ ಸೊಂಡಿಲಿನಲ್ಲಿ ಒಂದು ದಂತ ಮುರಿದಿದ್ದು, ಇನ್ನೊಂದು ದಂತ ಮಾತ್ರ ಇರುವುದು. ಸಾಂಕೇತಿಕವಾಗಿ  ಜಗತ್ತಿಗೆ ಒಬ್ಬನೇ ಬ್ರಹ್ಮ ಎಂಬುದನ್ನು ಸೂಚಿಸುತ್ತದೆ.

ಕೃಷ್ಣಪಿಂಗಾಕ್ಷ:ಭೂಮಿ ಮತ್ತು ಮೋಡವನ್ನು ಕಣ್ಣುಗಳನ್ನಾಗಿ ಹೊಂದಿರುವವನು. ಕೃಷ್ಣ ಎಂದರೆ ಕಪ್ಪು, ಪಿಂಗ ಎಂದರೆ ಮುಸುಕಾದ ಮತ್ತು ಅಕ್ಷ ಎಂದರೆ ಕಣ್ಣು, ಭೂಮಿಯಿಂದಲೇ ಎಲ್ಲವನ್ನೂ ನೋಡಲು ಶಕ್ತಿಯಿರುವವನು.

ಗಜವಕ್ರ: ಆನೆಯ ಮುಖವನ್ನು ಹೊಂದಿರುವವನು. ಸಾಕಷ್ಟು ಜ್ಞಾನವನ್ನು ಹೊಂದಿರುವವನು ಎಂಬ ಅರ್ಥ ಬರುತ್ತದೆ.

ಲಂಬೋದರ: ದೊಡ್ಡ ಹೊಟ್ಟೆಯನ್ನು ಹೊಂದಿರುವವನು. ಎಲ್ಲವನ್ನೂ ಒಳಗೊಂಡಿರುವವನು ಎಂಬ ಅರ್ಥವಿದೆ.

ವಿಕಟ: ಮೋಕ್ಷ ಪಡೆಯಲು ದಾರಿ ತೋರಿಸುವವನು. ವಿ ಎಂದರೆ ನಿರ್ದಿಷ್ಟವಾದ, ಕೃತು ಅಂದರೆ ಕೆಲಸ ಮತ್ತು ಅಕಟ ಎಂದರೆ ಮೋಕ್ಷ ಎಂದರ್ಥ.

ವಿಘ್ನೇಶ: ಎಲ್ಲಾ ವಿಘ್ನಗಳನ್ನು ನಿವಾರಿಸುವವನು. ಒಳ್ಳೆಯದಕ್ಕೆ ಒಡೆಯ ಎಂದು ಕರೆಯುತ್ತಾರೆ.

ದೂಮ್ರವರ್ಣ: ದೂಮ್ರ ಎಂದರೆ ಹೊಗೆ, ವರ್ಣ ಎಂದರೆ ಬಣ್ಣ. ದುರ್ಗುಣ ಬಿಟ್ಟು ಸುಗುಣವನ್ನು ಆರಿಸುವವನು, ಜಗತ್ತಿಗೆ ಬೆಳಕಿನ ಹೊಗೆಯನ್ನು ಬಿಡುವವನು ಎಂಬ ಅರ್ಥ ಸಿಗುತ್ತದೆ.

ಭಾಲಚಂದ್ರ: ಭಾಲ ಎಂದರೆ ಹಣೆ. ಚಂದ್ರ ಆಕಾಶದಲ್ಲಿರುವ ಚಂದ್ರ, ಹಣೆಯಲ್ಲಿ ಚಂದ್ರನನ್ನು ಹೊಂದಿರುವವನು.

ವಿನಾಯಕ: ನಾಯಕನ ಗುಣ ಹೊಂದಿರುವವನೇ ವಿನಾಯಕ.

ಗಣಪತಿ: ಗಣಗಳಿಗೆ(ದೇವರು) ಅಧಿಪತಿ.

ಗಜಾನನ: ಆನೆಯ ಮುಖ ಹೊಂದಿರುವವನು.

ವ್ರತಾಪತಿ: ವ್ರತ ಮಾಡುವಾಗ ಗಣಪತಿಗೆ ಮೊದಲ ಪ್ರಾಶಸ್ತ್ಯ.ಸ್ತೋತ್ರ, ಮಂತ್ರವನ್ನು ಹೇಳಿಕೊಡುವವ ಎಂದರ್ಥ.

ಮಂಗಳಮೂರ್ತಿ:ಶಾಂತಿ, ನೆಮ್ಮದಿಗೆ ಪೂಜಿಸುವ, ಸರ್ವರಿಗೂ ಒಳ್ಳೆಯದನ್ನುಂಟುಮಾಡುವ ದೇವರು.

ವಿದ್ಯಾಪತಿ:ಗಣಪತಿ ದೇವರನ್ನು 18 ವಿದ್ಯೆಗಳಿಗೆ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ವಿದ್ಯಾಭ್ಯಾಸ ಆರಂಭಕ್ಕೆ ಮುನ್ನ ಸರಸ್ವತಿಗೆ ನಂತರ ಗಣಪತಿಗೆ ಪೂಜಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT