ಸಂಗ್ರಹ ಚಿತ್ರ 
ಗಣೇಶ ಚತುರ್ಥಿ

ಹಸಿವು ನೀಗದೆ ಕುಬೇರನನ್ನೇ ನುಂಗಲು ಹೋದ ಗಣಪ

ಕುಬೇರನ ಒಳಗಿನ ಶ್ರೀಮಂತಿಕೆ ಅಹಂ ಬಲ್ಲವನಾಗಿದ್ದ ಶಿವನು ನಕ್ಕು, ನನಗೆ ತುಂಬಾ ಕೆಲಸವಿದೆ ಕುಬೇರ...

ಮೂರು ಲೋಕಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತ ತಾನೇ ಎಂಬ ಗರ್ವ ಕುಬೇರನಿಗಿತ್ತು. ಮೂರು ಲೋಕದಲ್ಲಿರುವವರಿಗೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಭೂಲೋಕದ ರಾಜಮಹಾರಾಜರುಗಳನ್ನೂ ಹಾಗೂ ದೇವತೆಗಳನ್ನೂ ಆಗಾಗ್ಗೆ ಊಟಕ್ಕೆ ಕರೆಯುತ್ತಿದ್ದ. ಹೀಗೆ ಒಂದೊಮ್ಮೆ ಜಗದೊಡಯ ಶಿವನನ್ನು ಭೋಜನ ಕೂಟಕ್ಕೆ ಆಹ್ವಾನಿಸಲು ಕುಬೇರನಿಗೆ ಮನಸ್ಸಾಯಿತು.

ಕುಬೇರ ಸಂಪತ್ತಿನ ದೇವತೆ. ತನ್ನ ಸಂಪತ್ತಿನ ಬಗ್ಗೆ ಕುಬೇರನಿಗೆ ಭಾರಿ ಹೆಮ್ಮೆಯಿತ್ತು. ಒಂದು ದಿನ ಭಾರಿ ಔತಣ ಕೂಟವನ್ನು ಏರ್ಪಡಿಸಿದನು. ಶಿವ, ಪಾರ್ವತಿ ಮತ್ತು ಗಣೇಶ ಸೇರಿದಂತೆ ದೇವಾನುದೇವತೆಗಳು ಉಪಸ್ಥಿತರಿದ್ದರು. ಆದುದರಿಂದ ಅವನು ಕೈಲಾಸಕ್ಕೆ ಹೋಗಿ ಪರಮೇಶ್ವರನಿಗೆ ನಮಸ್ಕರಿಸಿ, ಸ್ವಾಮಿ ನಾಳೆ ನಮ್ಮ ಮನೆಗೆ ನೀವು ಕುಟುಂಬ ಸಮೇತರಾಗಿ ಊಟಕ್ಕೆ ಬರಬೇಕು ಎಂದು ಪ್ರಾರ್ಥಿಸಿಕೊಂಡನು.

ಕುಬೇರನ ಒಳಗಿನ ಶ್ರೀಮಂತಿಕೆ ಅಹಂ ಬಲ್ಲವನಾಗಿದ್ದ ಶಿವನು ನಕ್ಕು, ನನಗೆ ತುಂಬಾ ಕೆಲಸವಿದೆ ಕುಬೇರ. ಬರಲಾಗುವುದಿಲ್ಲ ಎಂದನು. ಆಗ ಕುಬೇರ, ಹಾಗಾದರೆ ಪಾರ್ವತೀದೇವಿಯನ್ನು ಕರೆದೊಯ್ಯುತ್ತೇನೆ ಎಂದು ಹೇಳಿದನು. ತಕ್ಷಣ ಈಶ್ವರನು ನಾನು ಬರದೇ ಪಾರ್ವತಿ ಎಲ್ಲಿಯೂ ಬರುವುದಿಲ್ಲ. ಬೇಕಾದರೇ, ಗಣೇಶನನ್ನು ಕರೆದುಕೊಂಡು ಹೋಗು ಎಂದು ಹೇಳಿದನು. ಕುಬೇರ ಅದಕ್ಕೆ ಒಪ್ಪಿ ಸಂತೋಷದಿಂದ ತನ್ನ ಮನೆಗೆ ಹೋದ.

ಮರುದಿನ ಕುಬೇರನ ಅರಮನೆಗೆ ದಿವ್ಯಾಲಂಕಾರ ಆಯಿತು. ಸಾವಿರ ಅತಿಥಿಗಳಿಗಾಗುವಷ್ಟು ಬಗೆಬಗೆಯ ಭಕ್ಷ್ಯ ಭೋಜ್ಯಗಳು ಸಿದ್ಧವಾದುವು, ಅತಿಥಿಗಳೆಲ್ಲರೂ ಬಂದು ಗಣಪತಿಯ ಬರವಿಗೆ ಕಾದು ನಿಂತರು.

ಕುಬೇರನ ಕಡೆಗೆ ಗಣಪತಿಯ ಆಗಮನವಾಯಿತು. ಗಣೇಶ ಇಲ್ಲಿ ಬಾ ಅತಿಥಿಗಳ ಪರಿಚಯ ಮಾಡಿಕೊಡುತ್ತೇನೆ ಎಂದು ಕುಬೇರನಿಗೆ ಗಣೇಶನು, ನನಗೆ ತುಂಬಾ ಹಸಿವಾಗಿದೆ. ಮೊದಲು ಊಟ ಹಾಕು ಆಮೇಲೆ ಪರಿಚಯ ಮಾಡಿಕೊಡುವೆಯಂತೆ ಎಂದು ಹೇಳಿದನು. ಕುಬೇರ ಗಣಪತಿಯನ್ನು ಊಟದ ಮನೆಗೆ ಕರೆದುಕೊಂಡು ಹೋಗಿ ಚಿನ್ನದ ತಟ್ಟೆಯಲ್ಲಿ ಊಟಕ್ಕಿಟ್ಟ.
ಮಗು ಗಣೇಶ ಉಟ ಮಾಡಲು ಆರಂಭಿಸಿದನು .

ಅಲ್ಲಿದ್ದ ಊಟವನ್ನು ಖಾಲಿ ಮಾಡಿದರೂ ಗಣೇಶನಿಗೆ ತೃಪ್ತಿಯಾಗಲಿಲ್ಲ. ನಂತರ ಕೆಲ ಅತಿಥಿಗಳು ಉಟಕ್ಕೆಂದು ಬಂದು ನೋಡಿದಲ್ಲಿ ಎಲ್ಲ ತಟ್ಟೆಗಳು ಹಾಗೂ ವಿವಿಧ ಭಕ್ಷ್ಯಗಳು ಖಾಲಿಯಾಗಿದ್ದವು ಅರೇ ಅದೇನು ಅಚ್ಚರಿ..‍‍! ಅಲ್ಲಿದ್ದ ಭಕ್ಷ್ಯಗಳನ್ನು ಖಾಲಿ ಮಾಡಿದ ಗಣೇಶ ಅಲ್ಲಿದ್ದ ಪಾತ್ರೆಪಡಗ, ಪೀಠೋಪಕರಣಗಳು ಮತ್ತು ಕುಬೇರನ ಮುಖ್ಯ ನಗರವಾದ ಅಲಕಾಪುರಿಯನ್ನು ಕಬಳಿಸಲು ಪ್ರಾರಂಭಿಸಿದನು.

ಎಲ್ಲವನ್ನು ತಿಂದು ಮುಗಿಸಿದ ಗಣೇಶ ಕುಬೇರನನ್ನು ತಿನ್ನುವುದಾಗಿ ಹೇಳಿ ಕುಬೇರನನ್ನು ಅಟ್ಟಿಸಿಕೊಂಡು ಬಂದನು. ಹೆದರಿದ ಕುಬೇರ ಈಶ್ವರನಲ್ಲಿಗೆ ಬಂದು ಪಾದವನ್ನು ಹಿಡಿದು ಗಣೇಶನ ಹಸಿವು ನಿಯಂತ್ರಿಸುವಂತೆ ನನಗೆ ಸಹಾಯ ಮಾಡು ಎಂದು ಕಳಕಳಿಯಿಂದ ಪ್ರಾರ್ಥಿಸಿಕೊಂಡನು. ಪರಿಹಾರ ಬಹಳ ಸರಳ ಎಂದ ಶಿವ ಕೈತುಂಬಾ ದ್ವಿದಳಧಾನ್ಯವನ್ನು ಪುತ್ರ ಗಣೇಶನಿಗೆ ನೀಡಿದನು. ತಂದೆ ನೀಡಿದ ಧಾನ್ಯವನ್ನು ತಿಂದ ಗಣೇಶನಿಗೆ ಆಶ್ಚರ್ಯಕರವೆಂಬಂತೆ ಕೂಡಲೇ ಹಸಿವು ನೀಗಿತು.

ಈ ಕಥೆಯಿಂದ ತಿಳಿದುಬರುವುದೇನೆಂದರೆ, ಪ್ರೀತಿಯಿಂದ ಕೊಟ್ಟರೆ ಅಲ್ಪ ಅಹಾರವೂ ತೃಪ್ತಿ ನೀಡಬಲ್ಲದು. ಆದರೆ ಕುಬೇರನು ಶ್ರೀಮಂತಿಕೆಯ ಮದದಲ್ಲಿದ್ದದ್ದನ್ನು ಅಡಗಿಸಲು ಗಣೇಶ ಕುಬೇರನಿಗೆ ಈ ರೀತಿ ಪಾಠ ಕಲಿಸಿದ.

-ಮೈನಾಶ್ರೀ.ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT