ನವದೆಹಲಿ: ನೀವು ಸದಾ ಮೇಜಿನ ಮುಂದೆ ಕುಳಿತು ಕೆಲಸ ಮಾಡುತ್ತೀರಾ? ನೀವು ಜಿಮ್ ಗೆ ಹೋಗದೆ ಇದ್ದಾಗ ನಿಮ್ಮ ದೇಹವನ್ನು ಸಧೃಢವಾಗಿ ಉಳಿಸಿಕೊಳ್ಳಲು ಕಚೇರಿಗೆ ನಡೆದೇ ಬನ್ನಿ, ಲಿಫ್ಟ್ ಬದಲು ಮೆಟ್ಟಿಲೇರಿ ಎನ್ನುತ್ತಾರೆ ತಜ್ಞರು.
ಫಿಟ್ನೆಸ್ ತಜ್ಞ ಅಂಕುರ್ ಶರ್ಮ ಅವರ ಪ್ರಕಾರ
* ನಿಮ್ಮ ಮನೆ ಕಚೇರಿಗೆ ಹತ್ತಿರವಾಗಿದ್ದಾರೆ, ಕಚೇರಿಗೆ ನಡೆದೋ, ಜಾಗ್ ಮಾಡಿಯೋ ಅಥವಾ ಸೈಕಲ್ ಹೊಡೆದು ಹೋಗುವುದು ಉತ್ತಮ. ನೀವು ಸಾರ್ವಜನಿಕ ವಾಹನ ಬಳಸುವುದಾದರೆ ನಿಮ್ಮ ನಿಲ್ದಾಣದ ಕೆಲವು ಸ್ಟಾಪ್ ಮೊದಲೇ ಇಳಿದು ನಡೆದು ಹೋಗಿ ಎನ್ನುತ್ತಾರೆ. ನಿಮ್ಮದೇ ಖಾಸಗಿ ವಾಹನದಲ್ಲಿ ಚಲಿಸುವಾಗಲೂ ಕಚೇರಿಗಿಂತ ಅನತಿ ದೂರದಲ್ಲೇ ಅದನ್ನು ನಿಲ್ಲಿಸಿ ಕಚೇರಿಗೆ ನಡೆದು ಹೋಗಿ.
* ಎಲೆವೇಟರ್ ಗಳನ್ನು ಬಳಸದೆ ಮೆಟ್ಟಿಲು ಹತ್ತಿ. ಮೆಟ್ಟಿಲು ಹತ್ತುವುದು ಅತ್ಯುತ್ತಮ ವ್ಯಾಯಾಮ. ಇದು ರಕ್ತ ಚಲನೆಯನ್ನು ಉತ್ತಮಗೊಳಿಸುತ್ತದೆ. ಮತ್ತು ನಿಮ್ಮ ದೇಹದ ಕ್ಯಾಲರಿಗಳನ್ನು ಸುಡಲು ಸಹಕಾರಿ.
* ಕಚೇರಿಯಲ್ಲಿ ಈ ಸರಳ ವ್ಯಾಯಾಮಗಳನ್ನು ಪ್ರಯತ್ನಿಸಿ. ಕೈ-ಕಾಲು, ಎದೆ ಚಾಚುವುದು-ಮಡಚುವುದು, ಗೋಡೆ-ಕುರ್ಚಿಯ ವಿರುದ್ಧವಾಗಿ ಪುಷಪ್ ಮಾಡುವುದು, ಬಗ್ಗುವುದು ಇತ್ಯಾದಿ.