ಆರೋಗ್ಯ-ಜೀವನಶೈಲಿ

ಕಣ್ ಕಣ್ಣಲ್ಲಿ ಬೆರೆಯುವ ಪ್ರೇಮಿಗಳೇ ಹುಷಾರ್...!

Sumana Upadhyaya

ಕಣ್ಣು..ಕಣ್ಣು ಬೆರೆತಾಗ...ಮನವು ಉಯ್ಯಾಲೆಯಾಗಿದೆ..ಹೀಗೆ ಒಂದು ಹಾಡು ಸಾಗಿದರೆ, ಮತ್ತೊಂದು ಕಣ್ಣಿನ ನೋಟಗಳು..ಕೋಲ್ಮಿಂಚಿನ ಬಾಣಗಳು...ಇನ್ನೊಂದು ಕಣ್ಣಲೇ..ಕಣ್ಣಲ್ಲೇ ಪ್ರೀತಿಯ ಸಾಂಗ್ ಹೇಳಲೆ...ಮತ್ತೊಂದು ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೇ... ಹೀಗೆ ಪ್ರೇಮಿಗಳನ್ನು ಇಟ್ಟುಕೊಂಡು ಕಣ್ಣಿಗೆ ಸಂಬಂಧಪಟ್ಟ ಹತ್ತಾರು ಹಾಡುಗಳನ್ನು ಕವಿಗಳು ಬರೆದಿದ್ದಾರೆ.

 ಹೌದು, ಪ್ರೇಮಿಗಳಿಗೂ ಕಣ್ಣಿಗೂ ಬಿಡಿಸಲಾರದ ನಂಟು. ಹುಡುಗ ಮತ್ತು ಹುಡುಗಿ ಪ್ರೀತಿಸುತ್ತಿದ್ದಾರೆ ಎಂದರೆ ಅವರ ಕಣ್ಣುಗಳನ್ನು ನೋಡಿ ತಿಳಿದುಕೊಳ್ಳಬಹುದು,ಅವರ ಕಣ್ಣುಗಳು ಮಾತನಾಡುತ್ತವೆ ಅಂತಾರೆ..

ಆದರೆ, ಈ ಕಣ್ಣು ಕಣ್ಣು ನೋಡೋದು ಮಹಾ ಡೇಂಜರ್ ಅನ್ನುತ್ತೆ ಒಂದು ಅಧ್ಯಯನ. ಒಬ್ಬರ ಕಣ್ಣನ್ನು ಮತ್ತೊಬ್ಬರು ದಿಟ್ಟಿಸಿ ನೋಡುವುದರಿಂದ ವಾಸ್ತವಿಕ ಸ್ಥಿತಿಯಿಂದ ಭ್ರಮಾ ಲೋಕಕ್ಕೆ ಹೊರಟುಹೋಗುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇಟಲಿಯ ಉರ್ಬಿನೋ ವಿಶ್ವವಿದ್ಯಾಲಯದ ಸಂಶೋಧಕ ಗಿಯೋವನ್ನಿ ಕ್ಯಾಪುಟೋ ತಾವು ಅಧ್ಯಯನ ನಡೆಸಿ ಹೀಗೆ ಹೇಳಿದ್ದಾರೆ. ಒಂದು ಮಬ್ಬು ಬೆಳಕಿನ ಕೊಠಡಿಯಲ್ಲಿ 20 ಜೋಡಿಯನ್ನು ಹತ್ತು ನಿಮಿಷಗಳವರೆಗೆ ಎದುರುಬದಿರು ಕೂರಿಸಿ ನಂತರ ಏನನ್ನಿಸುತ್ತಿದೆ ಎಂದು ಅವರನ್ನು ಕೇಳಿದಾಗ ಅವರಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ವಂತೆ, ವಾಸ್ತವ ಲೋಕದಿಂದ ಬೇರೆ ಪ್ರಪಂಚಕ್ಕೆ ಹೊರಟುಹೋಗಿದ್ದರಂತೆ. ನೀವು ನಿಮ್ಮ ಸಂಬಂಧಿಕರ ಮುಖ ನೋಡಿದಿರಾ? ನೀವು ಸಾಕು ಪ್ರಾಣಿಯ ಅಥವಾ ಕಾಡು ಪ್ರಾಣಿಯ ಮುಖ ನೋಡಿದಿರಾ? ಅಥವಾ ದೈತ್ಯಾಕಾರದ ಮುಖವನ್ನು ನೋಡಿದಿರಾ ಎಂದು ಕ್ಯಾಪುಟಾ ಕೇಳಿದಾಗ, ಶೇಕಡಾ 90 ಜೋಡಿ ತಮ್ಮ ಜೋಡಿಯನ್ನು ದಿಟ್ಟಿಸಿ ನೋಡಿದಾಗ ವಿರೂಪಗೊಂಡ ಮುಖವನ್ನು ನೋಡಿದ್ದಾಗಿ ಮತ್ತು ಶೇಕಡಾ 75 ಜೋಡಿ ದೈತ್ಯದ ಮುಖ ಕಾಣಿಸಿದ್ದಾಗಿ ಹೇಳಿದ್ದಾರೆ.

20 ಜೋಡಿಗಳಲ್ಲಿ 10 ಜೋಡಿಗಳು ತಮ್ಮ ಜೊತೆಗಾರರ ಭಾಗಶಹ ಮುಖ ತಮ್ಮ ಮುಖದ ಜೊತೆ ಸೇರಿಕೊಂಡಿರುವುದಾಗಿ ಮತ್ತು ಶೇಕಡಾ 15ರಷ್ಟು ಜೋಡಿಗಳು ತಮ್ಮ ಸಂಬಂಧಿಕರ ಮುಖ ನೋಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಸುತ್ತಮುತ್ತಲಿನ ಪ್ರಪಂಚದಿಂದ ಬಿಟ್ಟಿರುವಂತೆ ಅನ್ನಿಸಿತು ಎಂದು ಹೇಳಿಕೊಂಡಿದ್ದಾರೆ.

ವಿಚಿತ್ರ ಮುಖ ಲಕ್ಷಣವು ತಾತ್ಕಾಲಿಕ ಭ್ರಮೆ ಹಚ್ಚುವ ಮೂಲಕ ತಡೆಯುಂಟು ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಸೈಕಿಯಾಟ್ರಿ ರಿಸರ್ಚ್ ಎಂಬ ದಿನಪತ್ರಿಕೆಯಲ್ಲಿ ಈ ಅಧ್ಯಯನದ ವರದಿ ಪ್ರಕಟಗೊಂಡಿದೆ.

SCROLL FOR NEXT