ಆರೋಗ್ಯ-ಜೀವನಶೈಲಿ

ಅತಿ ಹೆಚ್ಚು ಸಮಯ ಟಿವಿ ವೀಕ್ಷಣೆಯಿಂದ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಸಿತ!

Srinivas Rao BV

ವಾಷಿಂಗ್ಟನ್: ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುವುದರಿಂದ ಯುವಕರಲ್ಲಿ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ಯುವಕರು ಕಡಿಮೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ, ಹೆಚ್ಚು ಕಾಲ ಟಿವಿ ವೀಕ್ಷಿಸುವುದರಿಂದ ಮಧ್ಯ ವಯಸ್ಸಿನಲ್ಲಿ ಮೆದುಳಿನ ಕಾರ್ಯಕ್ಷಮತೆ ಕುಗ್ಗುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿದ್ದು ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುದರ ಪರಿಣಾಮ 25 ವರ್ಷಗಳ ನಂತರ ಗೋಚರಿಸಲಿದ್ದು  ಜೀವನದ ಮಧ್ಯಭಾಗದಲ್ಲಿ ಗ್ರಹಿಕೆಯ ಶಕ್ತಿ ಕಳಪೆಯಾಗುವುದನ್ನು ಗಮನಿಸಿದ್ದಾರೆ.  
ಯಾವುದೇ ಕೆಲಸಗಳನ್ನು ನಿಧಾನಗತಿಯಲ್ಲಿ ಮಾಡುವುದು, ಕಾರ್ಯನಿರ್ವಾಹಣೆಯ ಗುಣಮಟ್ಟದಲ್ಲಿ ಕುಸಿತ ಕಾಣುವುದು ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುವುದರಿಂದ ಉಂಟಾಗುವ ಪರಿಣಾಮಗಳ ಫಲಿತಾಂಶವಾಗಿರುತ್ತದೆ ಎಂದು ಸಂಶೋಧನಾ ತಜ್ಞೆ ಟೀನಾ ಡಿ ಹಾಂಗ್ ನಮ್ ಹೇಳಿದ್ದಾರೆ. ಈ ಅಧ್ಯಯನ ವರದಿಯನ್ನು ಜೆಎಎಂಎ ಸೈಕಿಯಾಟ್ರಿ ಪ್ರಕಟಿಸಿದೆ.

SCROLL FOR NEXT