ಆರೋಗ್ಯ-ಜೀವನಶೈಲಿ

ಕ್ಯಾಂಡಿ ಗೇಮ್ ಆಡುವ ಮಕ್ಕಳು ಅನಾರೋಗ್ಯಕರ ತಿಂಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ!

Srinivas Rao BV

ಆನ್ ಲೈನ್ ನಲ್ಲಿ ಆಹಾರಕ್ಕೆ ಸಂಬಂಧಿಸಿದ ಗೇಮ್ ಆಡುವ ಮಕ್ಕಳು ಅನಾರೋಗ್ಯಕರ ತಿಂಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಪರಿಣಾಮ ತೂಕ ಹೆಚ್ಚುವುದು ಹಾಗೂ ಅನಾರೋಗ್ಯ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ತಾವು ಆಡುವ ಬಹುತೇಕ ಗೇಮ್ ಗಳು ಕ್ಯಾಂಡಿ ಹಾಗೂ ಇನ್ನಿತರ ಪದಾರ್ಥಗಳ ಜಾಹೀರಾತುಗಳ ರೂಪ ಎಂಬುದನ್ನು ಅರಿಯಲು ಮಕ್ಕಳು ವಿಫಲರಾಗುತ್ತಾರೆ. ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದ ವೆಬ್ ಸೈಟ್ ಗಳು ಗೇಮ್ ಆಯ್ಕೆಗಳನ್ನು ಹೊಂದಿದ್ದು, ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ, ಇದರಿಂದಾಗಿ ಗೇಮ್ ಆಡುವ ಗೀಳಿನಲ್ಲಿ ಆರೋಗ್ಯಕ್ಕೆ ಒಳಿತಲ್ಲದ ತಿಂಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ನೆದರ್ಲ್ಯಾಂಡ್ ನ ಸಂಶೋಧಕ ಫ್ರಾನ್ಸ್ ಫೋಲ್ಕ್ವೋರ್ಡ್ ಹೇಳಿದ್ದಾರೆ.   
ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ವೆಬ್ ಸೈಟ್ ಗಳಲ್ಲಿ ಲೋಗೊ ಹಾಗೂ ಬ್ರಾಂಡ್ ನ ಹೆಸರು ಸ್ಪಷ್ಟವಾಗಿದ್ದರೂ ಗೇಮ್ ಗಳನ್ನು ಮಕ್ಕಳು ಜಾಹಿರಾತುಗಳೆಂದು ಭಾವಿಸುವುದಿಲ್ಲ. ಆನ್ ಲೈನ್ ಆಹಾರ ಜಾಹಿರಾತುಗಳು ಮಕ್ಕಳ ಆಹಾರ ಕ್ರಮದ ಮೇಲೆ ಬೀರುವ ಪರಿಣಾಮವನ್ನು ತಿಳಿಯಲು ಸುಮಾರು 1 ,000 ಮಕ್ಕಳನ್ನು ಸಂಶೋಧನೆಗೊಳಪಡಿಸಲಾಗಿತ್ತು.  ಈ ಸಂಶೋಧನಾ ವರದಿ ಸ್ವಭಾವ ವಿಜ್ಞಾನಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ. 

SCROLL FOR NEXT