ಕಾಫಿ 
ಆರೋಗ್ಯ-ಜೀವನಶೈಲಿ

ಚರ್ಮದ ಕ್ಯಾನ್ಸರ್ ತಡೆಗೆ ಕಾಫಿ ಕುಡಿಯಿರಿ

ದಿನಕ್ಕೆ ನಾಲ್ಕು ಕಪ್ ಕಾಫಿ ಸೇವನೆ ಮಾಡುವುದರಿಂದ ಚರ್ಮದ ಕ್ಯಾನ್ಸರ್‌ನ್ನು ತಡೆಗಟ್ಟಬಹುದು!...

ದಿನಕ್ಕೆ ನಾಲ್ಕು ಕಪ್ ಕಾಫಿ ಸೇವನೆ ಮಾಡುವುದರಿಂದ ಚರ್ಮದ ಕ್ಯಾನ್ಸರ್‌ನ್ನು ತಡೆಗಟ್ಟಬಹುದು! ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ ತಜ್ಞರು ದಿನಾ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಸೇವನೆ ಮಾಡುವವರಲ್ಲಿ  ಮಾರಕ melanoma ( ಚರ್ಮದ ಮೇಲ್ಪದರಲ್ಲಿ ಹರಡುವ ಕ್ಯಾನ್ಸರ್) ಪ್ರಮಾಣ ಶೇ.20ರಷ್ಟು ಕಡಿಮೆಯಿರುತ್ತದೆ ಎಂದು ಹೇಳಿದ್ದಾರೆ.

ಕಾಫಿಯ ಸೇವನೆ ದೇಹಕ್ಕೆ ಒಳ್ಳೆಯದು ಎಂಬುದು ನಮ್ಮ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಅಧ್ಯಯನ ತಂಡದ ರಿಸರ್ಚರ್ ಎರಿಕಾ ಲಾಫ್ಟ್‌ಫೀಲ್ಡ್ ಹೇಳಿದ್ದಾರೆ.

ಅಧ್ಯಯನ ತಂಡವು  ಕಳೆದ 10 ವರ್ಷದಲ್ಲಿ  447,357 ಜನರ ಮೇಲೆ ಆರೋಗ್ಯರೀತಿಯ ಬಗ್ಗೆ ಅಧ್ಯಯನ ನಡೆಸಿದೆ. ಅದರಲ್ಲಿ 2,904 ಜನರಿಗೆ ಮೆಲಾನೋಮಾ ಇದ್ದರೆ, 1,874 ಜನರಲ್ಲಿ ಪ್ರಾಥಮಿಕ ಹಂತದ ಮೆಲಾನೋಮಾ ಕಂಡು ಬಂದಿದೆ.

ಆದಾಗ್ಯೂ, ಕಾಫಿ ಸೇವನೆ ಮಾಡುವವರಲ್ಲಿ ಇತರರಿಗೆ ಹೋಲಿಸಿದರೆ ಮೆಲಾನೋಮಾ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಕಾಫಿ ಸೇವನೆ ಚರ್ಮದ ಕ್ಯಾನ್ಸರ್‌ನ್ನು ತಡೆಯಲು ಸಹಕಾರಿಯಾಗಿದೆ ಎಂದು ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆ.

(ಅಧ್ಯಯನ ವರದಿ Journal of the National Cancer Institute ನಲ್ಲಿ ಪ್ರಕಟವಾಗಿದೆ.)



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT