ಆರೋಗ್ಯ-ಜೀವನಶೈಲಿ

ನಕಾರಾತ್ಮಕ ಮನಸ್ಥಿತಿ ಹೆಚ್ಚು ಸಿಹಿ ತಿನ್ನುವುದನ್ನು ಉತ್ತೇಜಿಸುತ್ತದೆ!

Srinivas Rao BV

ನ್ಯೂಯಾರ್ಕ್: ಸೋಲು ಎದುರಿಸಿದವರು, ನಕಾರಾತ್ಮಕ ಭಾವನೆ ಹೊಂದಿರುವವರು ಸಿಹಿ ತಿನ್ನಲು ಹಂಬಲಿಸುವ ಪ್ರವೃತ್ತಿ ಹೊಂದಿರುತ್ತಾರೆ ಎಂಬುದನ್ನು ಅಮೇರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

ಜರ್ನಲ್ ಅಪೆಟೈಟ್ ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ, ಒಬ್ಬ ವ್ಯಕ್ತಿಯ ಭಾವನಾತ್ಮಕ ಸ್ಥಿತಿ ಹೇಗೆ ಆತನ ರುಚಿ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಕೇಂದ್ರಿತವಾಗಿದೆ. ಈ ಅಂಶ ಕ್ರೀಡ ಅಪಟುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ, ರಾಬಿನ್ ದಂಡೋ ಹೇಳಿದ್ದಾರೆ.

ಪ್ರತಿ ದಿನ ಮನುಷ್ಯ ಎದುರಿಸುವ ಭಾವನೆಗಳು ಆಟ ಸೇವಿಸುವ ಆಹಾರದ ರುಚಿ ಗ್ರಹಿಕೆ ಮೇಲೆ ಪರಿಣಾಮ ಬೀರಲಿದ್ದು ಸಂತೋಷದ ಅನುಭವ ಉಂಟಾದರೆ ಕಡಿಮೆ ಸಿಹಿ ಸೇವಿಸುತ್ತಾರೆ. ಅದೇ ರೀತಿಯಲ್ಲಿ ನಕಾರಾತ್ಮಕ ಭಾವನೆ ಹೊಂದಿದ್ದರೆ ಸ್ವಾದಿಷ್ಟ ಆಹಾರವೂ ಆಕರ್ಷಕವಾಗಿರುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.  ಈ ಸಂಶೋಧನೆಗಾಗಿ ಕಾಲೇಜು ಹಾಕಿ ಆಟಗಳು ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ವಿಜೇತ ತಂಡದ ಸದಸ್ಯರು ಸಾಮಾನ್ಯ ಆಹಾರದಿಂದಲೇ ಸಂತಸ ಪಟ್ಟರೆ, ಸೋತ ತಂಡದ ಸದಸ್ಯರು ಹೆಚ್ಚು ಸಿಹಿ ಇರುವ ಐಸ್ ಕ್ರೀಮ್ ಅಥವಾ ಇನ್ನಿತರ ಆಹಾರಗಳನ್ನು ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.

SCROLL FOR NEXT