ಥಂಡರ್ ಗಾಡ್ ಬಳ್ಳಿ 
ಆರೋಗ್ಯ-ಜೀವನಶೈಲಿ

ಬೊಜ್ಜನ್ನು ಕರಗಿಸಬಲ್ಲ ಚೈನಾ ಗಿಡಮೂಲಿಕೆ: ಅಧ್ಯಯನ

ಚೈನಾದಲ್ಲಿ ಸಾಂಪ್ರದಾಯಿಕ ಔಷಧವಾಗಿ ಬಳಸಲ್ಪಡುವ ಗಿಡಮೂಲಿಕೆಯ ರಸ ಹೊಟ್ಟೆಹಸಿವನ್ನು ಕಡಿಮೆ ಮಾಡಿ ತೂಕವನ್ನು ಇಳಿಸಬಲ್ಲುದಾಗಿದೆ ಎಂದು

ನ್ಯೂಯಾರ್ಕ್: ಚೈನಾದಲ್ಲಿ ಸಾಂಪ್ರದಾಯಿಕ ಔಷಧವಾಗಿ ಬಳಸಲ್ಪಡುವ ಗಿಡಮೂಲಿಕೆಯ ರಸ ಹೊಟ್ಟೆಹಸಿವನ್ನು ಕಡಿಮೆ ಮಾಡಿ ತೂಕವನ್ನು ಇಳಿಸಬಲ್ಲುದಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

"ಥಂಡರ್ ಗಾಡ್' ಬಳ್ಳಿಯಿಂದ ತೆಗೆಯಲಾದ ಸಾರವನ್ನು ಬೊಜ್ಜಿಗೆ ಔಷಧಿಯಾಗಿ ಅಭಿವೃದ್ಧಿಪಡಿಸಬಹುದು ಎಂದು ಈ ಅಧ್ಯಯನದ ಸಂಶೋಧನೆ ತಿಳಿಸಿದೆ.

ಬೊಜ್ಜು ಇಲಿಗಳಲ್ಲಿ ಈ ಉತ್ಪನ್ನದ ಬಳಕೆಯಿಂದ ಆಹಾರ ಸೇವನೆಯನ್ನು ಗಣನೀಯವಾಗಿ ಕಡಿಮೆಯಾಗಿ ದೇಹದ ತೂಕವನ್ನು ೪೫% ಇಳಿಸಲು ಸಾಧ್ಯವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಸೆಲೆಸ್ಟ್ರಾಲ್ ಎಂದು ಕರೆಯಾಲಾಗುವ ಈ ಸಾರ ಹೊಟ್ಟೆ ಹಸಿವು ತಡೆಯಬಲ್ಲ ಹಾರ್ಮೋನ್ 'ಲೆಪ್ಟಿನ್' ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.

"ಈ ಸೆಲೆಸ್ಟ್ರಾಲ್ ಇಲಿಗಳ ಮೇಲೆ ಕೆಲಸ ಮಾಡಿದಂತೆಯೇ ಮನುಷ್ಯರ ಮೇಲೂ ಕೆಲಸ ಮಾಡಿದರೆ ಇದು ಬೊಜ್ಜನ್ನು ಮತ್ತು ಬೊಜ್ಜಿನಿಂದ ಉಂಟಾಗುವ ಹೃದ್ರೋಗ, ಟೈಪ್-೨ ಡಯಾಬೆಟೆಸ್, ಪಿತ್ತಜನಕಾಂಗದ ಊತ ಇವುಗಳನ್ನು ಪರಿಹರಿಸುವ ಪರಿಣಾಮಕಾರಿ ಔಷಧಿಯಾಗಬಲ್ಲುದು" ಎಂದು ಹಾರ್ವಾರ್ಡ್ ವೈದ್ಯಕೀಯ ಶಾಲೆಯ ಪ್ರೊಫೆಸರ್ ಹಾಗು ಈ ಅಧ್ಯನದ ಪ್ರಮುಖ ಸಂಶೋಧನಕಾರ ಅಮುಟ್ ಆಜ್ಕ್ಯಾನ್ ತಿಳಿಸಿದ್ದಾರೆ.

ಈ ಸೆಲೆಸ್ಟ್ರಾಲ್ ಚಿಕಿತ್ಸೆ ಪ್ರಾರಂಭವಾದ ಒಂದು ವಾರದಲ್ಲೇ ಬೊಜ್ಜು ದೇಹದ ಇಲಿಗಳು ಇತರ ಇಲಿಗಳಿಗೆ ಹೋಲಿಸಿದಾಗ ಆಹಾರ ಸೇವನೆಯನ್ನು ಶೇಕಡಾ ೮೦% ಕಡಿಮೆ ಮಾಡಿದವು ಎಂದು ಸಂಶೋಧಕರು ತಿಳಿಸಿದ್ದಾರೆ. ಮೂರನೆ ವಾರದ ಅಂತ್ಯದಲ್ಲಿ ದೇಹದ ಕೊಬ್ಬಿನ ಅಂಶವೆಲ್ಲಾ ಕರಗಿ ದೇಹದ ತೂಕ ಶೇಕಡಾ ೪೫% ಕಡಿಮೆಯಾಗಿತ್ತು ಎಂದಿದೆ.

'ಥಂಡರ್  ಗಾಡ್' ಬಳ್ಳಿಯ ಬೇರುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಈ ಸೆಲೆಸ್ಟ್ರಾಲ್ ಕಂಡುಬರುತ್ತದೆ. ಇದನ್ನು ನೇರವಾಗಿ ಮನುಷ್ಯ ಸೇವಿಸಿದರೆ ದೇಹಕ್ಕೆ ಬೇರೆ ರೀತಿಯ ಹಾನಿಯುಂಟಾಗಬಹುದು ಎಂದು ಕೂಡ ಆಜ್ಕ್ಯಾನ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT