ಲಂಡನ್: ಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಅನ್ನೇ ನಾಶಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ಹ್ಯೂಮನ್ ಇಮ್ಯೂನೋ ಡಿಫಿಶಿಯನ್ಸಿ ವೈರಸ್(ಎಚ್‍ಐವಿ)ನ ಸಕ್ಕರೆ ಮತ್ತು ಪೌಷ್ಟಿಕಾಂಶ ಸಾಗಾಟದ ಪೈಪ್‍ಲೈನ್ ಅನ್ನೇ ಬ್ಲಾಕ್ ಮಾಡುವ ಮೂಲಕ ವೈರಸ್ ಅನ್ನು ಸಾಯುವಂತೆ ಮಾಡಬಹುದು ಎಂದು ನಾರ್ತ್‍ವೆಸ್ಟರ್ನ್ ಮೆಡಿಸಿನ್ ಮತ್ತು ವ್ಯಾಂಡರ್‍ಬಿಲ್ಟ್ ಯುನಿವರ್ಸಿಟಿ ಸಂಶೋಧಕರು ಕಂಡುಕೊಂಡಿದ್ದಾರೆ.
ಒಂದು ಸಕ್ರಿಯವಾದ ಪ್ರತಿರಕ್ಷಿತ ಕೋಶದೊಳಕ್ಕೆ ವೈರಸ್ ಪ್ರವೇಶಿಸಿದ ಬಳಿಕ, ಅದು ಕೋಶದಲ್ಲಿರುವ ಸಕ್ಕರೆ ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯಲಾರಂಭಿಸುತ್ತದೆ. ಹಾಗಾಗಿ ಈ ಸಕ್ಕರೆ, ಪೌಷ್ಟಿಕಾಂಶ ಸಾಗಾಟದ ಪೈಪ್‍ಲೈನ್ ಅನ್ನೇ ಬ್ಲಾಕ್ ಮಾಡಿದರೆ ಸೋಂಕುಳ್ಳ ವೈರಸ್‍ನ ಬೆಳವಣಿಗೆ ಕುಂಠಿತಗೊಂಡು, ಅದು ಸಾಯುತ್ತದೆ ಎನ್ನುವುದು ವಿಜ್ಞಾನಿಗಳ ವಾದ. ಫೋಸ್ಪೋಲಿಪೇಸ್ ಡಿ1(ಪಿಎಲ್‍ಡಿ1) ಎಂಬ ಕೋಶ ಘಟಕವನ್ನು ಬಳಸಿ ಪೈಪ್‍ಲೈನ್‍ಗೆ ತಡೆಯೊಡ್ಡಬಹುದು ಎನ್ನುತ್ತಾರೆ ಅವರು.