ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ದಿನಕ್ಕೆ ಮೂರರಿಂದ ಐದು ಲೋಟ ಕಾಫಿ ಸೇವನೆಯಿಂದ ಸಾವಿನ ಅಪಾಯ ಕಡಿಮೆ

ದಿನದಲ್ಲಿ ಕಾಫಿ ಕುಡಿಯದೆ ಇರುವವರು ಅಥವಾ ಕಡಿಮೆ ಕಾಫಿ ಕುಡಿಯುವವರಿಗಿಂತಲೂ ಮೂರರಿಂದ ಐದು ಲೋಟ ಕಾಫಿ ಕುಡಿಯುವವರಿಗೆ ವಿವಿಧ ರೋಗಗಳಿಂದ

ನ್ಯೂಯಾರ್ಕ್: ದಿನದಲ್ಲಿ ಕಾಫಿ ಕುಡಿಯದೆ ಇರುವವರು ಅಥವಾ ಕಡಿಮೆ ಕಾಫಿ ಕುಡಿಯುವವರಿಗಿಂತಲೂ ಮೂರರಿಂದ ಐದು ಲೋಟ ಕಾಫಿ ಕುಡಿಯುವವರಿಗೆ ವಿವಿಧ ರೋಗಗಳಿಂದ ಉಂಟಾಗಬಲ್ಲ ಅವಧಿಗೂ ಮುಂಚಿನ ಸಾವಿನ ಅಪಾಯ ಕಡಿಮೆ ಎನ್ನುತ್ತದೆ ನೂತನ ಅಧ್ಯಯನವೊಂದು.

ಹಾರ್ವರ್ಡ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯಕ್ಕಾಗಿ ಟಿ ಎಚ್ ಚ್ಯಾನ್ ಶಾಲೆಯ ಸಂಶೋಧಕರು ನಡೆಸಿರುವ ಈ ಅಧ್ಯಯನದ ಪ್ರಕಾರ ಹೃದ್ರೋಗ, ನರರೋಗ ಮತ್ತು ಟೈಪ್ ೨ ಡಯಾಬೆಟಿಸ್ ನಿಂದ ಉಂಟಾಗಬಲ್ಲ ಸಾವಿನ ಅಪಾಯವನ್ನು ಕಾಫಿ ತಗ್ಗಿಸುತ್ತದೆ ಎನ್ನುತ್ತದೆ.

೩೦ ವರ್ಷಗಳಿಂದ ನಾಲ್ಕು ವರ್ಷಕ್ಕೊಮ್ಮೆ ಆಹಾರದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಬದಲಿಸಿ ಈ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ಸಮಯದಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ೧೯೫೨೪ ಮಹಿಳೆಯರು ಮತ್ತು ೧೨೪೩೨ ಮಹಿಳೆಯರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ.

ಈ ಅಧ್ಯಯನದಲ್ಲಿ ತಿಳಿಸಿರುವಂತೆ ಸಾಧಾರಣ ಮಟ್ಟದಲಿ ಕಾಫಿ ಸೇವಿಸುವವರಲ್ಲಿ ಹೃದ್ರೋಗ, ಟೈಪ್ ೨ ಡಯಾಬೆಟಿಸ್, ನರರೋಗ ಸಂಬಂಧಿ ಪಾರ್ಕಿನ್ಸನ್ ಖಾಯಿಲೆ ಮತ್ತು ಆತ್ಮಹತ್ಯೆ ಗಳಿಂದ ಉಂಟಾಗುವ ಅಪಾಯ ಕಡಿಮೆ ಆಗಿದೆ ಎಂದು ತಿಳಿದುಬಂದಿದೆ.

ಕ್ಯಾನ್ಸರ್ ನಿಂದ ಒದಗುವ ಸಾವಿಗೂ ಕಾಫಿಗೂ ಸಂಬಂಧವಿಲ್ಲ ಎಂದು ಕೂಡ ಅಧ್ಯಯನ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!