ಆರೋಗ್ಯ-ಜೀವನಶೈಲಿ

2025ರ ವೇಳೆಗೆ ವಿಶ್ವದಲ್ಲಿ ಶತಕೋಟಿ ಸ್ಥೂಲಕಾಯ ವ್ಯಕ್ತಿಗಳು

Sumana Upadhyaya

ವಿಶ್ವದಲ್ಲಿ ಸ್ಥೂಲಕಾಯ ವ್ಯಕ್ತಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕರಲ್ಲಿ ಇದು ಸಮಸ್ಯೆಯಾಗಿ ಕಾಡುತ್ತಿದೆ, ವಿಶ್ವಸಂಸ್ಥೆಯ ಆರೋಗ್ಯ ಇಲಾಖೆ ಕೂಡ ಇದನ್ನು ಒಂದು ರೋಗವಾಗಿ ಪರಿಗಣಿಸಿದೆ. ಒಂದು ಅಧ್ಯಯನದ ಪ್ರಕಾರ, ವಿಶ್ವದಲ್ಲಿ 2025ರ ಕೊನೆಯ ಹೊತ್ತಿಗೆ ವಿಶ್ವದಲ್ಲಿ ಸುಮಾರು ಒಂದು ಶತಕೋಟಿ ಬೊಜ್ಜು ಹೊಂದಿದ ವ್ಯಕ್ತಿಗಳಿರುತ್ತಾರೆ ಅಂತ ಗೊತ್ತಾಗಿದೆ.

ಇಷ್ಟೊಂದು ಪ್ರಮಾಣದಲ್ಲಿ ಜನರಲ್ಲಿ ಬೊಜ್ಜು ಬೆಳೆಯಲು ಕಾರಣ ಪಾಶ್ಚಾತ್ಯ ಜೀವನಶೈಲಿ ಮತ್ತು ಡಯಟ್ ಕ್ರಮ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಆಕರ್ಷಕ ಮತ್ತು ಬಾಯೂರಿಸುವ ಜಾಹೀರಾತುಗಳಿಗೆ ಮಾರುಹೋಗಿ ಅಧಿಕ ಕ್ಯಾಲೊರಿ, ಕೊಬ್ಬು ಜಾಸ್ತಿ ಇರುವ ಆಹಾರಗಳನ್ನು ಸೇವಿಸುವುದು ಕಾರಣವಾಗಿದೆ.

ಬೊಜ್ಜು ಹೆಚ್ಚುವುದರಿಂದ ಜೀವಕ್ಕೆ ಅಪಾಯವನ್ನುಂಟುಮಾಡುವ ಪರಿಣಾಮಗಳು  ಉಂಟಾಗುತ್ತವೆ ಎಂದು 2011ರಲ್ಲಿ ವಿಶ್ವಸಂಸ್ಥೆಯ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿತ್ತು. 2025 ಹೊತ್ತಿಗೆ ಬೊಜ್ಜು ಹೆಚ್ಚಾಗಿರುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶ ಹೊಂದಿದ್ದರೂ ಅದು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ವಯಸ್ಕರಲ್ಲಿ ಬೊಜ್ಜು ಹೊಂದುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.

2010ರಿಂದೀಚೆಗೆ ವಿಶ್ವದಲ್ಲಿ ಶೇಕಡಾ 11.5ರಷ್ಟು ಜನ ಕೊಬ್ಬು ಸಮಸ್ಯೆಯಿಂದ ಬಳಲುತ್ತಿದ್ದಾರೆ. 2014ರಲ್ಲಿ ಆ ಸಂಖ್ಯೆ ಶೇಕಡಾ 13 ರಷ್ಟಾಗಿದೆ. ಇದು ಶೇಕಡಾ 17ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ವಿಶ್ವ ಸ್ಥೂಲಕಾಯ ಸಂಸ್ಥೆಯ ಅಧ್ಯಯನ ಪ್ರಕಾರ, ಸುಮಾರು 170 ದಶಲಕ್ಷ ಜನರಲ್ಲಿ ಈಗ ಬೊಜ್ಜಿನ ಸಮಸ್ಯೆ ಇದೆ. ಈ ಸಮಸ್ಯೆ ಮಧ್ಯ ಪ್ರಾಚ್ಯ, ಲ್ಯಾಟಿನ್ ಅಮೇರಿಕಾ, ಚೀನಾ ಮತ್ತು ಆಗ್ನೇಯ ಏಷ್ಯಾ ದೇಶಗಳ ಜನರಲ್ಲಿ ಹೆಚ್ಚು. ಸ್ಥೂಲಕಾಯ ಹೃದ್ರೋಗ, ಶ್ವಾಸಕೋಶ  ಕಾಯಿಲೆ, ಸಕ್ಕರೆ ಕಾಯಿಲೆಯಂಥಹ ತೊಂದರೆಗಳಿಗೆ ಕಾರಣವಾಗುತ್ತದೆ. ಆದುದರಿಂದ ದೇಹದಲ್ಲಿ ಬೊಜ್ಜು ಬಾರದಂತೆ ತಡೆಗಟ್ಟುವುದೇ ಉತ್ತಮ. ಆಹಾರ ಸೇವನೆಯಲ್ಲಿ ನಿಯಂತ್ರಣ, ಪ್ರತಿನಿತ್ಯ ವ್ಯಾಯಾಮ, ಯೋಗ, ಧ್ಯಾನ ಮಾಡುವುದರಿಂದ ಸಾಧ್ಯವಾದಷ್ಟು ಸ್ಥೂಲಕಾಯ ಸಮಸ್ಯೆಯಿಂದ ದೂರವಿರಬಹುದು.

SCROLL FOR NEXT