ಆರೋಗ್ಯ-ಜೀವನಶೈಲಿ

ನಿಂತು ಕೆಲ್ಸ ಮಾಡಿ, ಆಗ ನೋಡಿ!

Srinivasamurthy VN

ಕುಳಿತು ಕೆಲ್ಸ ಮಾಡೋರಿಗಿಂತ ನಿಂತು ಕೆಲ್ಸ ಮಾಡೋರೇ ಹೆಚ್ಚು ಆರೋಗ್ಯವಂತರಂತೆ! ಹೀಗಂದಿದ್ದು ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡಿನ ವೈದ್ಯತಂಡ.

ನಿಂತು ಕೆಲಸ ಮಾಡುವವರಲ್ಲಿ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಹೃದಯ ಸಂಬಂಧಿತ ರೋಗಗಳು ಬರುವುದೂ ಕಡಿಮೆ ಎನ್ನುತ್ತಾರೆ ವೈದ್ಯರು. ಆದರೆ, ಕುಳಿತು ಕೆಲಸ ಮಾಡುವವರಿಗೆ  ಜೀರ್ಣಕ್ರಿಯೆ  ಸಮಸ್ಯೆಯಲ್ಲದೆ ಬೊಜ್ಜು, ಹೃದ್ರೋಗ, ರಕ್ತದೊತ್ತಡ, ಕಣ್ಣಿನ ಸಮಸ್ಯೆಗಳೂ ಬರುವ ಸಾಧ್ಯತೆ ಹೆಚ್ಚು. ನಿಂತು ಕೆಲಸ ಮಾಡುವುದು, ಟ್ರೆಡ್‍ಮಿಲ್‍ನಲ್ಲಿ ಓಡುವುದಕ್ಕೆ ಸಮ. ಪೈಲ್ಸ್ ಕೂಡ  ಬರುವುದಿಲ್ಲ. ಕುಳಿತು ಕೆಲಸ ಮಾಡುವವರ ದೇಹದಲ್ಲಿ ಆಂತರಿಕ ಉಷ್ಣತೆ ಹೆಚ್ಚಂತೆ. ದಿನದ ಕೆಲಸದಲ್ಲಿ ಕೂರುವ ಬದಲು 2 ಗಂಟೆ ನಿಂತು ಕೆಲಸ ಮಾಡಿದರೆ ಆರೋಗ್ಯಕ್ಕೇ ಒಳ್ಳೆಯದು.  ನಿದ್ರಾಹೀನತೆಯೂ ದೂರವಾಗುತ್ತದೆ ಎಂದು ಸ್ಪಷ್ಟನೆ ಕೊಡುತ್ತಾರೆ ವೈದ್ಯರು.

SCROLL FOR NEXT