ಆರೋಗ್ಯ-ಜೀವನಶೈಲಿ

ಪುರುಷರಿಗೆ ಹೊಟ್ಟೆ ಹಸಿವಿಗಿಂತ ಲೈಂಗಿಕ ಹಸಿವೇ ಹೆಚ್ಚು!

Srinivas Rao BV

ಮಹಿಳೆ- ಪುರುಷರ ಮೆದುಳು ವಿಭಿನ್ನವಾಗಿ ಸಂಯೋಜನೆಗೊಂಡಿವೆ ಎಂಬುದನ್ನು ನಿರೂಪಿಸುವ ಮತ್ತೊಂದು ಸಂಶೋಧನಾ ವರದಿ ಹೊರಬಿದ್ದಿದೆ.
ಉತ್ತಮ ಆಹಾರದ ಮೂಲಕ ಪುರುಷರ ಮನಸ್ಸನ್ನು ಗೆಲ್ಲಬಹುದೆಂದು ಹೇಳುತ್ತಾರೆ. ಆದರೆ ಹೊಸ ಸಂಶೋಧನೆ ಪ್ರಕಾರ ಸೆಕ್ಸ್ ಹಾಗೂ ಆಹಾರ ನಡುವಿನ ವಿಚಾರದಲ್ಲಿ ಪುರುಷರ ಮೊದಲ ಆದ್ಯತೆ ಸೆಕ್ಸ್ ಗೇ  ತಿಳಿದುಬಂದಿದೆ.  ಆಹಾರ ವಿಚಾರಗಳನ್ನು ಬದಿಗಿರಿಸಿ ಲೈಂಗಿಕ ಚಟುವಟಿಕೆಯತ್ತ ಹೆಚ್ಚು ಆಕರ್ಷಿತರಾಗುವಂತೆ ಪುರುಷರ ಮೆದುಳು ರಚನೆಗೊಂಡಿದೆ ಎನ್ನುತ್ತಾರೆ ಸಂಶೋಧಕರು. 
ಪುರುಷರ ಮೆದುಳಿನಲ್ಲಿರುವ ನಿರ್ದಿಷ್ಟ ನರಕೋಶಗಳು ತಿನ್ನುವ ಬಯಕೆಗಿಂತ ಲೈಂಗಿಕ ಬಯಕೆ ಹೆಚ್ಚಾಗುವಂತೆ ಮಾಡುತ್ತವೆ. ಆದರೆ ಮಹಿಳೆಯರ ಮೆದುಳಿನಲ್ಲಿರುವ ನರಕೋಶಗಳು ಆಹಾರಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಮಾಡುತ್ತವೆ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್ ನ ವಿಜ್ಞಾನಿಗಳು ಹೇಳಿದ್ದಾರೆ.
ಈ ಸಂಶೋಧನೆಯಿಂದ ಮಾನವ ಲೈಂಗಿಕತೆ, ಲೈಂಗಿಕ ದೃಷ್ಟಿಕೋನ ಅರಿಯಲು ಸಾಧ್ಯವಾಗುತ್ತದೆ ಎಂದು ಆಲ್ಬರ್ಟ್ ಐನ್ಸ್ಟೀನ್ ಕಾಲೇಜ್ ನ ಪ್ರೊ.ಸ್ಕಾಟ್ ಎಮ್ಮೋನ್ಸ್ ತಿಳಿಸಿದ್ದಾರೆ. ಈ ಅಧ್ಯಯನ ವರದಿಯಿಂದ ಮಹಿಳೆಯರ ಮೆದುಳಿನಲ್ಲಿ ಇಲ್ಲದ ನರಕೋಶಗಳು ಪುರುಷರ ಮೆದುಳಿನಲ್ಲಿರುತ್ತವೆ ಎಂಬುದು ಸ್ಪಷ್ಟವಾಗಿದೆ.
ಪುರುಷರ ಮೆದುಳಿನಲ್ಲಿರುವ ವಿಭಿನ್ನ ನರಕೋಷಗಳಿಗೆ "ಪುರುಷ ರಹಸ್ಯ ಜೀವಕೋಶ" ಎಂದು ಹೇಳಲಾಗಿದೆ. ನೇಚರ್ ಎಂಬ ನಿಯತಕಾಲಿಕದಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

SCROLL FOR NEXT