ಆರೋಗ್ಯ-ಜೀವನಶೈಲಿ

ದಂತ ಚಿಕಿತ್ಸೆಗಳಿಗಾಗಿ ವಾರ್ಷಿಕ 442 ಬಿಲಿಯನ್ ಡಾಲರ್ ಖರ್ಚು

Srinivas Rao BV

ನ್ಯೂಯಾರ್ಕ್: ದಂತ ಚಿಕಿತ್ಸೆಯ ವಹಿವಾಟಿನಿಂದ ವಿಶ್ವದ ಆರ್ಥಿಕತೆಗೆ ಗಣನೀಯ ಲಾಭ ಉಂಟಾಗುತ್ತಿದೆಯಂತೆ! ಸಂಶೋಧಕರ ಅಂದಾಜಿನ ಪ್ರಕಾರ, ದಂತ ಸಮಸ್ಯೆಗಳಿಗೆ ಚಿಕಿತ್ಸೆಯಿಂದಾಗಿ ವಿಶ್ವದ ಆರ್ಥಿಕತೆಗೆ ಪ್ರತಿವರ್ಷ ಸುಮಾರು 442 ಬಿಲಿಯನ್ ಡಾಲರ್ ನಷ್ಟು ಲಾಭವಾಗುತ್ತಿದೆ.

ದಂತ ಚಿಕಿತ್ಸೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು ತುರ್ತು ಅಗತ್ಯವಾಗಿದ್ದು, ಆರ್ಥಿಕ ಹೊರೆಯನ್ನು ವರದಿ ಮಾಡಲಾಗಿದೆ. ಜರ್ಮನಿಯ ಹೈಡೆಲ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಪ್ರತಿ ವರ್ಷ ನೇರ ಚಿಕಿತ್ಸೆಗಾಗಿ 298 ಬಿಲಿಯನ್ ಡಾಲರ್ ಹಣ ವ್ಯಯವಾಗುತ್ತಿದೆ ಹೆಚ್ಚುವರಿ ಚಿಕಿತ್ಸೆಯೂ ಸೇರಿ ಒಟ್ಟು 442 ಬಿಲಿಯನ್ ಡಾಲರ್ ನಷ್ಟು ಹಣ ವ್ಯಯವಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ದಂತ ಚಿಕಿತ್ಸೆಗಾಗಿ ಖರ್ಚಾಗುತ್ತಿರುಎವ ಹಣದ ಬಗೆಗಿನ ಸಂಶೋಧನಾ ವರದಿ ಎಎಡಿಆರ್ ಹಾಗೂ ಅಂತಾರಾಷ್ಟ್ರೀಯ ಡೆಂಟಲ್ ಸಂಶೋಧನಾ ಸಂಘಟನೆಯ ಜರ್ನಲ್ ನಲ್ಲಿ ವರದಿ ಪ್ರಕಟವಾಗಿದೆ.

SCROLL FOR NEXT