ಆರೋಗ್ಯ-ಜೀವನಶೈಲಿ

ಪ್ರತಿದಿನ 2 ಲೋಟ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು

Shilpa D

ನವದೆಹಲಿ: ಮಾನವನ ಬೆಳವಣಿಗೆಗೆ ಹಾಗೂ ದೇಹಕ್ಕೆ ಶಕ್ತಿ ನೀಡಲು ಹಾಲು ಅತ್ಯಗತ್ಯ. ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳು ಲಭಿಸುತ್ತವೆ.

ದಿನ ನಿತ್ಯ ನಮ್ಮ ಜೀವನ ಶೈಲಿಯಲ್ಲಿ ಹಾಲು ಕುಡಿಯುವುದು ಅತ್ಯಗತ್ಯ. ಹಾಲು ಕುಡಿಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಪ್ರತಿದಿನ ಹಾಲು ಕುಡಿಯುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಮಕ್ಕಳಿಗೆ ದಿನ ನಿತ್ಯ ಹಾಲು ನೀಡುವುದರಿಂದ  ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಪೂರೈಕೆಯಾಗಿ ಮೂಳೆಗಳು ಗಟ್ಟಿಗೊಳ್ಳುತ್ತವೆ.

ದೊಡ್ಡವರು ಕೂಡ ನಿತ್ಯ ಹಾಲು ಸೇವಿಸುವುದರಿಂದ ವಯಸ್ಸಾದ ಕಾಲದಲ್ಲಿ ಬರಬಹುದಾದ ಹಲವು ರೋಗಗಳನ್ನು ತಡೆಗಟ್ಟಬಹುದು. ಮೂಳೆಗಳಲ್ಲಿ ಉಂಟಾಗುವ ರಂಧ್ರವನ್ನು ತಡೆಗಟ್ಟುತ್ತದೆ. ಹಾಲಿನಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಮಾಂಸಖಂಡಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಇನ್ನು ಹಾಲಿನಲ್ಲಿರುವ ವಿಟಮಿನ್, ಹಾಗೂ ಪೌಷ್ಠಿಕಾಂಶಗಳು ಚರ್ಮವನ್ನು ಮೃದುಹಾಗೂ ಸುಂದರವಾಗಿಸುತ್ತದೆ. ಜೊತೆಗೆ ದೇಹಕ್ಕೆ ಉಂಟಾಗುವ ಆಯಾಸವನ್ನು ಕಡಿಮೆ ಮಾಡುತ್ತದೆ.

SCROLL FOR NEXT