ಆರೋಗ್ಯ-ಜೀವನಶೈಲಿ

ಹದಿಹರೆಯದಲ್ಲಿ ಸ್ಥೂಲಕಾಯ ಹೃದ್ರೋಗ ಸಮಸ್ಯೆಗೆ ನಾಂದಿ: ಅಧ್ಯಯನ

Sumana Upadhyaya

ಅನಾರೋಗ್ಯಕರ ಆಹಾರ ಸೇವನೆಯಿಂದ ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಸಂಶೋಧಕರ ತಂಡವೊಂದು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಹರೆಯದ ಕೊನೆಯ ಹಂತಗಳಲ್ಲಿ ದೇಹದಲ್ಲಿ ಬೊಜ್ಜು ಬೆಳೆಯುವುದರಿಂದ ಹೃದ್ರೋಗ ಸಮಸ್ಯೆ ಸಾಕಷ್ಟು ಬರುವ ಸಾಧ್ಯತೆಯಿದೆ. ಅಲ್ಲದೆ ಪಾರ್ಶ್ವವಾಯು ಮತ್ತು ಪ್ರೌಢಾವಸ್ಥೆಯಲ್ಲಿ ಹಠಾತ್ ನಿಧನವಾಗುವ ಅಪಾಯ ಹೆಚ್ಚು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದು, ಇಸ್ರೇಲ್ ನ 17 ವರ್ಷ ವಯೋಮಾನದವರ ಸುಮಾರು 20 ಲಕ್ಷ ಮಂದಿಯ ಮೇಲೆ ನಡೆಸಿದ ಅಧ್ಯಯನದಿಂದ ಇದು ತಿಳಿದುಬಂದಿದೆ.

ಕಳೆದ ದಶಕದಿಂದೀಚೆಗೆ ಹದಿಹರೆಯದವರಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು ಮಧ್ಯವಯಸ್ಸಿನಲ್ಲಿಯೇ ಮರಣ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಜೆರುಸಲೇಮ್ ನ ಹೀಬ್ರ್ಯೂ ವಿಶ್ವವಿದ್ಯಾಲಯದ ಅಧ್ಯಯನದ ಹಿರಿಯ ಲೇಖಕ ಜೆರೆಮಿ ಕಾರ್ಕ್ ತಿಳಿಸಿದ್ದಾರೆ.

SCROLL FOR NEXT