ಆರೋಗ್ಯ-ಜೀವನಶೈಲಿ

ಪಿಜ್ಜಾ, ಬರ್ಗರ್, ಫಾಸ್ಟ್ ಫುಡ್‌ಗಳಲ್ಲಿದೆ ಪ್ಲಾಸ್ಟಿಕ್‌ನಲ್ಲಿ ಬಳಸುವ ರಾಸಾಯನಿಕ ವಸ್ತು!

Rashmi Kasaragodu
ಪಿಜ್ಜಾ, ಬರ್ಗರ್ ಮತ್ತು ಇನ್ನಿತರ ಫಾಸ್ಟ್‌ಫುಡ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಆದರೆ ಪ್ಲಾಸ್ಟಿಕ್, ಸಾಬೂನು, ಪ್ರಸಾಧನ ಸಾಮಾಗ್ರಿಗಳಿಗೆ ಬಳಸುವ ತಾಲೇಟ್  (phthalates) ಎಂಬ ರಾಸಾಯನಿಕ ವಸ್ತು  ಫಾಸ್ಟ್‌ಫುಡ್‌ಗಳ ಮೂಲಕ ದೇಹ ಸೇರುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ!
ಬಂಜೆತನ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಈ ತಾಲೇಟ್‌ಗಳು ಕಾರಣವಾಗುತ್ತವೆ. ಅಷ್ಟೇ ಅಲ್ಲದೆ, ಮಕ್ಕಳಲ್ಲಿ ವಿವಿಧ ರೀತಿಯ ಅಲರ್ಜಿ ರೋಗಗಳಿಗೆ ಇದಕ್ಕೆ ಕಾರಣವಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಫಾಸ್ಟ್‌ಫುಡ್‌ಗಳನ್ನು ತಯಾರಿಸಲು ಮಾಡುವ ಕ್ರಿಯೆಗಳಲ್ಲಿ, ಆಹಾರಗಳನ್ನು ಸಂಗ್ರಹಿಸುವ, ಪಾರ್ಸೆಲ್ ಮಾಡುವ ಪೊಟ್ಟಣಗಳ ಮೂಲಕ ತಾಲೇಟ್‌ಗಳು ನಮ್ಮ ದೇಹ ಪ್ರವೇಶಿಸುತ್ತವೆ ಅಂತಾರೆ ತಜ್ಞರು. ಫಾಸ್ಟ್ ಫುಡ್‌ಗಳನ್ನು ಸೇವಿಸುವರ ಮೂತ್ರ ಸ್ಯಾಂಪಲ್‌ಗಳನ್ನು ಪರಿಶೋಧಿಸಿ ತಜ್ಞರು ಅಧ್ಯಯನ ನಡೆಸಿದ್ದು ಇವರ ದೇಹದಲ್ಲಿ ತಾಲೇಟ್ ಪ್ರಮಾಣ ಜಾಸ್ತಿ ಇದೆ ಎಂದು ಪತ್ತೆ ಹಚ್ಚಿದ್ದಾರೆ.
ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್‌ನ ಸಮೀಕ್ಷೆಯಿಂದ ತಜ್ಞರು ಈ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಏನಿದು ತಾಲೇಟ್? (Phthalates)
ರಾಸಾಯನಿಕ ವಸ್ತುಗಳ ಸಂಯೋಗವಾಗಿದೆ ತಾಲೇಟ್. ಈ ರಾಸಾಯನಿಕ ವಸ್ತುವನ್ನು ಪ್ಲಾಸ್ಟಿಕ್ ಮತ್ತು ವಿನಾಯಲ್ ನ್ನು ಮೃದುವಾಗಿಸಲು ಮತ್ತು ಫ್ಲೆಕ್ಸಿಬಲ್  ಮಾಡುವುದಕ್ಕಾಗಿ ಬಳಸಲಾಗುತ್ತದೆ. 
ಯಾವ ಆಹಾರೋತ್ಪನ್ನಗಳಲ್ಲಿ ತಾಲೇಟ್ ಪ್ರಮಾಣ ಅಧಿಕವಿರುತ್ತದೆ?
ಧಾನ್ಯಗಳಿಂದ ಮಾಡಿದ ಮತ್ತು ಮಾಂಸಗಳಿಂದ ಕೂಡಿದ ಫಾಸ್ಟ್ ಫುಡ್‌ಗಳಲ್ಲಿ ತಾಲೇಟ್ ಪ್ರಮಾಣ ಹೆಚ್ಚಿರುತ್ತದೆ.
SCROLL FOR NEXT