ಆರೋಗ್ಯ-ಜೀವನಶೈಲಿ

'ಕೊಕೈನ್'ಗೆ ವ್ಯಸನಿಗಳಾಗುವುದು ಏಕೆ?

Guruprasad Narayana
ವಾಷಿಂಗ್ಟನ್: ಒಮ್ಮೆ ಕೊಕೈನ್ ಡ್ರಗ್ ಸೇವಿಸಿದರೆ ಅದಕ್ಕೆ ದಾಸರಾಗಿ ಮತ್ತೆ ಮತ್ತೆ ಸೇವಿಸುವುದೇಕೆ ಎಂದು ಸಂಶೋಧಕರ ತಂಡ ಪತ್ತೆ ಹಚ್ಚಲು ಪ್ರಯತ್ನಿಸಿದೆ. 
"ಕೊಕೈನ್ ದೇಹದ-ಮೆದುಳಿದ ಡೋಪಮೈನ್ ವ್ಯವಸ್ಥೆ ಮತ್ತು ಡೋಪಮೈನ್ ರವಾನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ವರ್ಷಗಳಿಂದ ತಿಳಿದಿದ್ದಾರೆ, ಆದುದರಿಂದ ಇದು ಹೇಗೆ ಕೊಕೈನ್ ನ ಪರಿಣಾಮಕ್ಕೆ ಸಹನೆಯನ್ನು ಬೆಳೆಸಿಕೊಳ್ಳುತ್ತದೆ ಎಂದು ತಿಳಿಯಲು ಅಧ್ಯಯನ ನಡೆಸಿದೆವು " ಎಂದು ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ ನ ಹಿರಿಯ ಸಂಶೋಧಕ ಸಾರಾ ಆರ್ ಜೋನ್ಸ್ ಹೇಳಿದ್ದಾರೆ. 
"ಸದ್ಯಕ್ಕೆ ಕೊಕೈನ್ ವ್ಯಸನ ಬಿಡಿಸಲು ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ ಆದುದರಿಂದ ಹೊಸ ಚಿಕಿತ್ಸೆಯ ಸಂಶೋಧನೆಗೆ ಈ ಡ್ರಗ್ ಬೀರುವ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ" ಎಂದು ಅವರು ತಿಳಿಸಿದ್ದಾರೆ.
ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸಿರುವ ಸಂಶೋಧಕರು, ಇಲಿಗಳಿಗೆ ಆರು ಘಂಟೆಗಳಿಗೊಮ್ಮೆ ಕೊಕೈನ್ ನೀಡಿದ್ದಾರೆ. ಕೆಲವು ದಿನಗಳ ನಂತರ ಆದರೆ ಈ ಆರು ಘಂಟೆಯ ಅವಧಿ ಇಲಿಗಳಲ್ಲಿ ಅನಿಯಂತ್ರಿತ ವರ್ತನೆ, ಅತಿಯಾಗಿ ಆಹಾರ ಸೇವನೆ ಮಾಡುವಂತೆ ಮಾಡಿದೆ. 
ಐದು ದಿನದ ಈ ಪ್ರಯೋಗದ ನಂತರ 14 ರಿಂದ 60 ದಿನಗಳ ವರೆಗೆ ಈ ಇಲಿಗಳಿಗೆ ಕೊಕೈನ್ ನೀಡಲಾಗಿಲ್ಲ. ಈ ಅವಧಿಯ ನಂತರ ಡೋಪಮೈನ್ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ಆದರೆ ನಂತರ ಒಮ್ಮೆ ಕೊಕೈನ್ ಡೋಸ್ ನೀಡಿದಾಗ ಈ ಇಲಿಗಳು ದೀರ್ಘಾವಧಿ ಕೊಕೈನ್ ಸೇವನೆಯಿಂದ ಉಂಟಾಗಿದ್ದ ಮೆದುಳಿನ ಡೋಪಮೈನ್ ಸ್ಥಿತಿಗೆ ಬಂದಿವೆ. 
"60 ದಿನಗಳ ವ್ಯರ್ಜನೆಯ ನಂತರವೂ (ಮನುಷ್ಯರಿಗೆ ಇದು ನಾಲ್ಕು ವರ್ಷಗಳ ಕಾಲಕ್ಕೆ ಸಮ) ಒಂದು ಕೊಕೈನ್ ಡೋಸ್ ಇಲಿಗಳ ಡೋಪಮೈನ್ ವ್ಯವಸ್ಥೆ ಮತ್ತು ಸಹನೆಯ ಮಟ್ಟವನ್ನು ನಿರಂತರವಾಗಿ ಡ್ರಗ್ ಸೇವಿಸುತ್ತಿದ್ದ ಸ್ಥಿತಿಗೆ ಮರಳಿಸಿವೆ ಮತ್ತು ಅನಿಯಂತ್ರಿತ ಹಾಗು ಅತಿಯಾದ ಆಹಾರ ಸೇವನೆಯತ್ತ ಮರಳಿಸಿವೆ" ಎಂದು ಜೋನ್ಸ್ ಹೇಳಿದ್ದು ಇದು ವ್ಯಸನದ ಅತ್ಯುಗ್ರ ಚಕ್ರ ಎನ್ನುತ್ತಾರೆ. 
ಇದಕ್ಕೆ ಚಿಕಿತ್ಸೆಯಾಗಿ ಆಂಫೆಟಮೈನ್ ತರಹದ ಡ್ರಗ್ ಗಳನ್ನು ನೀಡುವ ಪ್ರಯೋಗಗಳು ಪ್ರಗತಿಯಲ್ಲಿವೆ ಎಂದು ಕೂಡ ಅವರು ಹೇಳಿದ್ದಾರೆ. 
SCROLL FOR NEXT