ಆರೋಗ್ಯ-ಜೀವನಶೈಲಿ

ಶಾರೀರಿಕ ಚಟುವಟಿಕೆ ಮತ್ತು ಬುದ್ಧಿವಂತಿಕೆ ಮಧ್ಯೆ ಸಾಮ್ಯತೆ: ಅಧ್ಯಯನ

Sumana Upadhyaya
ಲಂಡನ್: ಅತ್ಯಂತ ಬುದ್ದಿವಂತರಿಗೆ ಉದಾಸೀನ, ಬೇಸರವಾಗುವುದು ಕಡಿಮೆ ಮತ್ತು ಸದಾ ಓಡಾಡುತ್ತಾ, ಹರಟುವವರು ಬೇಗನೆ ಬೇಸರಕ್ಕೊಳಗಾಗುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. 
ಅಮೆರಿಕ ಮೂಲದ ಅಧ್ಯಯನವೊಂದು ಹೀಗೆ ಹೇಳಿದ್ದು, ಅತಿ ಬುದ್ಧಿವಂತ ವ್ಯಕ್ತಿಗಳು ಹೆಚ್ಚಾಗಿ ಏನಾದರೊಂದು ಯೋಚನೆ, ಕೆಲಸದಲ್ಲಿ ಮುಳುಗಿರುತ್ತಾರೆ. ಅದೇ ಕಡಿಮೆ ಬುದ್ಧಿವಂತರು ಹೊರಗಿನ ಚಟುವಟಿಕೆಗಳಲ್ಲಿ, ಏನಾದರೊಂದರಲ್ಲಿ ಮುಳುಗಿರಬೇಕು ಅಂದುಕೊಳ್ಳುತ್ತಾರೆ. ಹಾಗಾಗಿ ಬೇಗನೆ ಅವರಿಗೆ ಬೋರ್ ಬೇಗ ಆಗುತ್ತದೆ. ಫ್ಲೋರಿಡಾ ಗಲ್ಫ್ ತೀರ ವಿಶ್ವವಿದ್ಯಾಲಯದ ಸಂಶೋಧಕರು ಮೂರು ದಶಕಗಳಿಂದಲೂ ಹಿಂದೆ ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಿದ್ದಾರೆ.
ಅಧ್ಯಯನಕ್ಕೊಳಪಟ್ಟ ವಿದ್ಯಾರ್ಥಿಗಳಿಗೆ ಒಂದಷ್ಟು ಪ್ರಶ್ನೆಗಳನ್ನು ನೀಡಲಾಯಿತು. 60 ವಿದ್ಯಾರ್ಥಿಗಳಲ್ಲಿ 30 ಬುದ್ಧಿವಂತ ಮತ್ತು 30 ಅಷ್ಟು ಬುದ್ಧಿವಂತರಲ್ಲದ ವಿದ್ಯಾರ್ಥಿಗಳನ್ನು ಆರಿಸಿ ಏಳು ದಿನಗಳವರೆಗೆ ಕೈಯಲ್ಲಿ ಸಾಧನವೊಂದು ಕಟ್ಟಿಕೊಳ್ಳುವಂತೆ ಹೇಳಲಾಯಿತು. ಆ ಸಾಧನ ವಿದ್ಯಾರ್ಥಿಗಳ ಚಲನೆ ಮತ್ತು ಚಟುವಟಿಕೆ ಹಂತಗಳನ್ನು ಪರೀಕ್ಷಿಸುತ್ತದೆ. ಎರಡೂ ಗುಂಪಿನ ವಿದ್ಯಾರ್ಥಿಗಳ ಶಾರೀರಿಕ ಚಟುವಟಿಕೆ ಹೇಗಿದೆ ಎಂಬ ಬಗ್ಗೆ ನೋಡುವುದಾಗಿತ್ತು. ಈ ಅಧ್ಯಯನ ನಡೆಸಿದ್ದು ಟಾಡ್ಡ್ ಮೆಕ್ ಎಲ್ರೊಯ್ ನೇತೃತ್ವದ ತಂಡ.
ಆದರೆ ಬುದ್ಧಿವಂತರು ಶಾರೀರಿಕವಾಗಿ ಕಡಿಮೆ ಚುರುಕಾಗಿರುವುದರಿಂದ ಕಡಿಮೆ ಆರೋಗ್ಯವಂತರಾಗಿರುತ್ತಾರೆ. 
SCROLL FOR NEXT