ಲಂಡನ್: ಸಾಮಾಜಿಕ ಗುಂಪಿನಲ್ಲಿ ಬೇರೆಯವರನ್ನು ಜಡ್ಜ್ ಮಾಡಿ ಅವರಿಗೆ ಸಹಕಾರ ನೀಡುವುದೇ ಬೇಡವೇ ಎಂದು ನಿರ್ಧರಿಸುವುದರಿಂದ ಮಾನವನ ಮೆದುಳಿನ ಗಾತ್ರ ಕಳೆದ ಎರಡು ದಶಲಕ್ಷ ವರ್ಷಗಳಿಂದ ವೇಗವಾಗಿ ವಿಸ್ತರಣೆಗೊಂಡಿದೆ ಎಂದು ಸಂಶೋಧಕರ ತಂಡವೊಂದು ಕಂಡುಹಿಡಿದಿದೆ.
ತಮ್ಮಂತೆ ಇರುವ ಇತರರಿಗೆ ಸಹಾಯ ಮಾಡಲು ಬಯಸುವವರು ಬೇಗನೆ ಪ್ರಗತಿ ಹೊಂದುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ಒಂದು ಸಮಾಜ ಸಮೃದ್ಧತೆಯಿಂದ ಕೂಡಿರಲು ಜನರ ಮಧ್ಯೆ ಪರಸ್ಪರ ಸಹಕಾರ ಬೇಕು. ಸಹಕಾರದ ವಿಷಯ ಬಂದಾಗ ಸ್ವಾ ಭಾವಿಕವಾಗಿ ಸಮಾಜದಲ್ಲಿ ಹೋಲಿಕೆ ಮಾಡುವುದು, ಬೇರೆಯವರಿಗೆ ಸಹಾಯ ಮಾಡಬೇಕೆ, ಬೇಡವೆ ಎಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ವಿಷಯ ಬರುತ್ತದೆ ಎನ್ನುತ್ತಾರೆ ಬ್ರಿಟನ್ ನ ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಗರ್ ವಿಟಕೆರ್.
ಸಾಮಾಜಿಕ ಮೆದುಳಿನ ಕಲ್ಪನೆ ಪ್ರಕಾರ, ಮಾನವ ಬೌದ್ಧಿಕವಾಗಿ ವಿಕಾಸ ಹೊಂದುತ್ತಿದ್ದಂತೆ, ಸಾಮಾಜಿಕ ಗುಂಪಿನಲ್ಲಿ ಹೆಚ್ಚು ಹೆಚ್ಚು ಬೆರೆತರೆ ಮೆದುಳಿನ ಗಾತ್ರ ವಿಸ್ತಾರವಾಗುತ್ತದೆ. ಬೇರೆಯವರು ಹೇಗೆ ಎಂದು ಯೋಚಿಸುವುದರಿಂದಲೂ ಮಾನವನ ಮೆದುಳಿನ ಗಾತ್ರದಲ್ಲಿ ದೊಡ್ಡದಾಗುತ್ತದೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಬಿನ್ ದುನ್ ಬಾರ್ ಹೇಳಿದ್ದಾರೆ. ಇಬ್ಬರು ಆಟಗಾರರ ಮೇಲೆ ಸಂಶೋಧಕರ ತಂಡ ಪರೀಕ್ಷೆ ನಡೆಸಿದೆ.ಸೈಂಟಿಫಿಕ್ ರಿಪೋರ್ಟ್ ಎಂಬ ಪತ್ರಿಕೆಯಲ್ಲಿ ಈ ಸಂಶೋಧನೆ ಪ್ರಕಟಗೊಂಡಿದೆ.