ಆರೋಗ್ಯ-ಜೀವನಶೈಲಿ

ಸ್ನೇಹಿತರಿಲ್ಲದಿರುವುದು ಹೃದಯಕ್ಕೆ ಧೂಮಪಾನದಷ್ಟೇ ಹಾನಿಕರ!: ಸಂಶೋಧನಾ ವರದಿ

Srinivas Rao BV

ಬೋಸ್ಟನ್: ಹಾರ್ವರ್ಡ್ ನಲ್ಲಿ ನಡೆದಿರುವ ಸಂಶೋಧನೆ ಸ್ನೇಹಿತರಿಲ್ಲದಿರುವುದು ಧುಪಮಾನದಷ್ಟೇ ಹಾನಿಕರ ಎಂಬುದನ್ನು ಬಹಿರಂಗಪಡಿಸಿದೆ.

ಸಾಮಾಜಿಕವಾಗಿ ಒಂಟಿಯಾಗಿರುವುದಕ್ಕೂ ಹೃದಯಾಘಾತ ಸಂಭವಿಸುವುದಕ್ಕೆ ಕಾರಣವಾಗಿರುವ ರಕ್ತ ಹೆಪ್ಪುಗಟ್ಟುವಿಕೆಯ ಪ್ರೋಟೀನ್ ಮಟ್ಟಕ್ಕೂ ಸಂಬಂಧವಿದೆ ಎಂಬುದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಏಕಾಂಗಿತನ ವ್ಯಕ್ತಿಯಲ್ಲಿ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಗೆ ಹೆಚ್ಚಿನ ಸಾಧ್ಯತೆ ಇದ್ದು, ಧುಮಾಪನದಷ್ಟೇ ಏಕಾಂಗಿತನವೂ ಅಪಾಯಕಾರಿ ಎಂದು ಸಂಶೋಧನೆ ತಿಳಿಸಿದೆ. 
ಅತಿ ಹೆಚ್ಚು ಪ್ರೊಟೀನ್ ಸಹ ದೇಹಕ್ಕೆ ಅಪಾಯಕಾರಿಯಾಗಿದ್ದು ಅಧಿಕ ರಕ್ತದೊತ್ತಡ ಹಾಗೂ ಆರ್ಟರಿಸ್ ಗೆ ಕಾರಣವಾಗಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ತಿಳಿಸಿದ್ದಾರೆ. ವ್ಯಕ್ತಿಯೊಬ್ಬನ ಜೀವನದಲ್ಲಿರುವ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗಿನ ಒಡನಾಟ ಹೃದಾಯಾಘಾತಕ್ಕೆ ಕಾರಣವಾಗುವ ಅಧಿಕ ಮಟ್ಟದ ಪ್ರೊಟೀನ್ ಮೇಲೆ ಪರಿಣಾಮ ಬಿರುವುದರ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಒಡನಾಟ ಕುಗ್ಗಿದಷ್ಟೂ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಪ್ರೊಟೀನ್ ಮಟ್ಟ ಹೆಚ್ಚುತ್ತದೆ ಎಂಬುದನ್ನು ಮನಗಂಡಿದ್ದಾರೆ. ಸಮಾಜದಿಂದ ಪ್ರತ್ಯೇಕವಾದಷ್ಟೂ ವ್ಯಕ್ತಿಯೊಬ್ಬನಿಗೆ ಅಪಾಯ ಮತ್ತು ದುರ್ಬಲವಾಗಿರುವ ಭೀತಿ ಕಾಡುತ್ತದೆ ಎಂದು ರಾಯಲ್ ಸೊಸೈಟಿಯಲ್ಲಿ ಪ್ರಕಟವಾದ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

SCROLL FOR NEXT