ಆರೋಗ್ಯ-ಜೀವನಶೈಲಿ

ಬಾಲ್ಯಾವಸ್ಥೆಯಲ್ಲಿ ಸ್ಥೂಲಕಾಯ, ಎತ್ತರ ಬೆಳೆಯುವುದರಿಂದ ಅಪರೂಪದ ಕ್ಯಾನ್ಸರ್ ಅಪಾಯ ಹೆಚ್ಚು

Srinivas Rao BV

ನ್ಯೂಯಾರ್ಕ್: ಬಾಲ್ಯಾವಸ್ಥೆಯಲ್ಲಿ ತೂಕ ಹೆಚ್ಚುವುದು ಹಾಗೂ ಅತಿ ಎತ್ತರ ಬೆಳೆಯುವುದರಿಂದ ದುಗ್ಧನಾಳ ವ್ಯವಸ್ಥೆಗೆ ಸಂಬಂಧಿಸಿದ ಅಪರೂಪದ ಕ್ಯಾನ್ಸರ್ ಎದುರಾಗುವ ಅಪಾಯ ಹೆಚ್ಚಿರುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಸಿದೆ.
ತೂಕ ಹೆಚ್ಚುವುದರಿಂದ ದುಗ್ಧನಾಳ ಕ್ಯಾನ್ಸರ್ ಗೆ ಕಾರಣವಾಗಲಿರುವ ನಾನ್-ಹಾಗ್ಕಿನ್ಸ್ ಲಿಂಫೊಮ ಹೆಚ್ಚಾಗುತ್ತದೆ. ಪ್ರಪಂಚದಾದ್ಯಂತ  ಹಾಗ್ಕಿನ್ಸ್ ಲಿಂಫೊಮದ ಪ್ರಮಾಣ ಹೆಚ್ಚುತ್ತಿದೆ ಎಂದು ಇಸ್ರೇಲ್ ಶೇಬ ಮೆಡಿಕಲ್ ಸೆಂಟರ್ ನ ಸಂಶೋಧನಾ ವರದಿ ಹೇಳಿದೆ. ಸ್ಥೂಲಕಾಯ ಮಧುಮೇಹ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವುದರ ಜೊತೆಗೆ ಎನ್ ಹೆಚ್ ಎಲ್ ಗೂ (ನಾನ್-ಹಾಗ್ಕಿನ್ಸ್ ಲಿಂಫೊಮ) ಕಾರಣವಾಗಲಿದೆ.
1967 ರಿಂದ 2012 ವರೆಗೆ 16 - 19 ವರ್ಷದವರೆಗಿನ 2,352,988 ಹದಿಹರೆಯದವರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಅಧ್ಯಯನ ವರದಿ ಮಾಹಿತಿಯನ್ನು ಇಸ್ರೇಲ್ ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿಯೊಂದಿಗೆ ಹೋಲಿಕೆ ಮಾಡಲಾಗಿದ್ದು 1967 ರಿಂದ 2012 ವರೆಗೆ 4 ,021 ಎನ್ ಹೆಚ್ ಎಲ್ ಪ್ರಕರಣಗಳು ಬೆಳಕಿಗೆ ಬಂದಿವೆ.
ಎಲ್ಲಾ ಎನ್ ಹೆಚ್ ಎಲ್ ಪ್ರಕರಣಗಳಲ್ಲಿ ಬಾಲ್ಯದಲ್ಲೇ ಸ್ಥೂಲ ಕಾಯ ಹಾಗೂ ಎತ್ತರದ ಬೆಳವಣಿಗೆ ಅನುಕ್ರಮವಾಗಿ ಶೇ.3 ಹಾಗೂ ಶೇ.6 ರಷ್ಟು ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

SCROLL FOR NEXT