ಆರೋಗ್ಯ-ಜೀವನಶೈಲಿ

ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಮೆದುಳಿಗೆ ತರಬೇತಿ ನೀಡಬಹುದು!

Srinivas Rao BV

ವಾಷಿಂಗ್ಟನ್: ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಮಾತು ಇನ್ನು ಮುಂದಿನ ದಿನಗಳಲ್ಲಿ ಸುಳ್ಳಾಗಬಹುದು. ಹೌದು, ಮೆದುಳಿನ ವ್ಯವಸ್ಥೆಯನ್ನೇ ಬದಲು ಮಾಡುವ ಮೂಲಕ ಸರಳವಾದ ತರಬೇತಿಯಿಂದ ಋಣಾತ್ಮಕ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಬೆನ್-ಗುರಿಯೋನ್ ವಿಶ್ವವಿದ್ಯಾಲಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ತರಬೇತಿಯಿಂದ ಅಸಂಬದ್ಧ ವಿಷಯಗಳನ್ನು ನಿರ್ಲಕ್ಷ್ಯಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಅದರೊಂದಿಗೆ ಭಾವನಾತ್ಮಕ ಘಟನೆಗಳಿಗೆ ಮೆದುಳಿನ ಪ್ರತಿಕ್ರಿಯೆಯನ್ನು ಕಡಿಮೆ ಮಾಡಿ ಮೆದುಳಿನ ಸಂಪರ್ಕಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಬೆನ್- ಗುರಿಯೋನ್ ವಿವಿಯ ಸಂಶೋಧಕರಾದ ಡಾ ನೋಗ ಕೊಹೆನ್ ಹೇಳಿದ್ದಾರೆ.  

ಭಾವನೆಗಳ ಪ್ರತಿಕ್ರಿಯೆಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವುಳ್ಳ ನರಗಳ ಸಂಪರ್ಕಗಳನ್ನು ಬಲಪಡಿಸುವುದರಿಂದ ಮೆದುಳಿನ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯವಿದೆ. ಈ ತರಬೇತಿ ಕಾರ್ಯಕ್ರಮವನ್ನು ಖಿನ್ನತೆ ಅಥವಾ ಆತಂಕಕ್ಕೆ ಒಳಗಾದವರ ಮೇಲೆ ಪ್ರಯೋಗ ಮಾಡಲಾಗಿದ್ದು ತರಬೇತಿ ಪಡೆದವರ ನಕಾರಾತ್ಮಕ ಭಾವನೆಗಳಿಗೆ ಕಾರಣವಾಗಿದ್ದ ಮೆದುಳಿನ ಭಾಗ ಕಡಿಮೆ ಸಕ್ರಿಯವಾಗಿರುವುದನ್ನು ಗಮನಿಸಿದ್ದಾರೆ. ಮೆದುಳನ್ನು ನಿಯಂತ್ರಿಸುವ ತರಬೇತಿ ರಕ್ತದೊತ್ತಡವನ್ನು ಎದುರಿಸುತ್ತಿರುವವರಿಗೂ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. 

SCROLL FOR NEXT