ನಿದ್ರಿಸುವ ಭಂಗಿ (ಸಂಗ್ರಹ ಚಿತ್ರ) 
ಆರೋಗ್ಯ-ಜೀವನಶೈಲಿ

ನಿಮ್ಮ ಸ್ವಭಾವವನ್ನು ನಿಮ್ಮ ನಿದ್ರಾಭಂಗಿಗಳೇ ಹೇಳುತ್ತೆ!

ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ...

ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ. ಅದರಂತೆ ಅವರವರ  ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡುತ್ತಾ ಹೋಗಿದೆ. ಒಬ್ಬ ವ್ಯಕ್ತಿ 55 ನಿಮಿಷಕ್ಕೂ ಅಧಿಕ ಕಾಲ ಒಂದೇ ಭಂಗಿಯಲ್ಲಿ ಮಲಗಿದರೆ, ಅದು ಅವರ ನಿದ್ರಾಭಂಗಿ ಎನಿಸಿಕೊಳ್ಳುತ್ತದೆ.

ಮುದುಡಿದ ಭಂಗಿ: ಇದು ಸಾಮಾನ್ಯ ಭಂಗಿ. ದೇಹವನ್ನು ಬಿಲ್ಲಿನಂತೆ ಬಾಗಿಸಿ, ನೂಲಿನಂತೆ ಮುದುಡಿ ಮಲಗಿರುತ್ತಾರೆ. ಇವರದ್ದು ತುಂಬಾ ಗಡಸು ಮಾತು. ಆದರೆ, ಒಳಗೆ ಇವರು  ಮೃದುವಾಗಿರುತ್ತಾರೆ. ಸೂಕ್ಷ್ಮ ಸ್ವಭಾವದ ಇವರಿಗೆ ಒಂದು ಹೇಳಿದ್ರೆ ಕಮ್ಮಿ, ಎರಡು ಹೇಳಿದ್ರೆ ಹೆಚ್ಚು.

ಒಂದೇ ಪಾರ್ಶ್ವ: ತೋಳಿನ ಮೇಲೆ ತಲೆಯಿಟ್ಟುಕೊಂಡು, ದೇಹದ ಒಂದೇ ಮಗ್ಗಲಿನಲ್ಲಿ ಮಲಗುವವರು ಮುಕ್ತ ಸ್ವಭಾವದವರು. ಬೇಗನೆ ಇನ್ನೊಬ್ಬರನ್ನು ನಂಬುತ್ತಾರೆ. ಹೆಚ್ಚು ಮಾತಾಡುವ ಸ್ವಭಾವ ಇವರದ್ದು. ಯಾವ ಕೆಲ್ಸ ಮಾಡೋದಾದ್ರೂ ತೀರಾ ಪರ್ಫೆಕ್ಟ್ ಆಗಿರಲು ಬಯಸುತ್ತಾರೆ.

ಶೂಟಿಂಗ್ ಭಂಗಿ: ಒಂದೇ ಮಗ್ಗಲಲ್ಲಿ, ಎರಡೂ ಕೈಗಳನ್ನು ಚಾಚಿಕೊಂಡು ಮಲಗುವವರು ತುಂಬಾ ಹಿಂಜರಿಕೆಯುಳ್ಳವರಾಗಿರುತ್ತಾರೆ. ಅವರನ್ನಷ್ಟೇ ನಂಬುತ್ತಾರೆ. ಇವರು ಪಕ್ಕಾ ವ್ಯವಹಾರ ವ್ಯಕ್ತಿತ್ವದವರು. ಇವರ ಜಿಪುಣತನದಿಂದ ಮತ್ತೊಬ್ಬರಿಗೆ ಕಿರಿಕಿರಿಯನ್ನು ಸೃಷ್ಟಿಸುತ್ತದಂತೆ.

ಸೈನಿಕ ಭಂಗಿ: ಎರಡೂ ಕೈಗಳನ್ನು ಚಾಚಿಕೊಂಡು, ದೇಹವನ್ನು ನೆಟ್ಟಗೆ ಮಾಡಿಕೊಂಡು ಮಲಗಿಕೊಳ್ಳುವವರು ಶಿಸ್ತುಪಾಲನೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ರಸಿಕತನ ಎನ್ನುವುದೇ ಇವರಿಗೆ  ಗೊತ್ತಿರುವುದಿಲ್ಲ. ತಮ್ಮಂತೆಯೇ ಎಲ್ಲರೂ ಇರಬೇಕೆನ್ನುವು ಇವರ ಸ್ವಭಾವವನ್ನು ಬಹುತೇಕರು ಒಪ್ಪುವುದಿಲ್ಲ.

ಸ್ಟಾರ್ಫಿಶ್ ಭಂಗಿ: ಎರಡೂ ಕೈಯನ್ನು ಮೇಲಕ್ಕೆತ್ತಿಕೊಂಡು, ಕಾಲುಗಳನ್ನೂ ಅಗಲ ಮಾಡಿಕೊಂಡು ವಿರಾಜಮಾನರಾಗಿ ನಿದ್ರಿಸುವವರು ತುಂಬಾ ಮಹತ್ವಾಕಾಂಕ್ಷಿಗಳು. ಕ್ರಿಯಾಶೀಲ ಬುದ್ಧಿವಂತಿಕೆ  ಇವರಲ್ಲಿರುತ್ತದೆ. ಯಾರ ಮಾತನ್ನೂ ಕೇಳುವವರಲ್ಲ. ಆದರೆ, ಎಲ್ಲರನ್ನೂ ಪ್ರೀತಿಸುವವರಾಗಿರುತ್ತಾರೆ.

ಮಗುಚಿ ಮಲಗುವುದು: ದೇಹವನ್ನು ಕೆಳಮುಖವಾಗಿಸಿ ಮಲಗುವವರು ಶುದ್ಧ ಸೋಮಾರಿಗಳು, ರಸಿಕತನವುಳ್ಳವರು, ಮತ್ತೊಬ್ಬರಿಗೆ ಮೋಸ ಮಾಡುವವರೂ ಆಗಿರುತ್ತಾರೆ. ಇವರನ್ನು ಜಾಸ್ತಿ  ನಂಬಬಾರದಂತೆ. ತೀರಾ ಸಿಟ್ಟು, ಅತಿಯಾದ ನಾಚಿಕೆ ಇವರ ಸ್ವಭಾವ. ಜನರೊಟ್ಟಿಗೆ ಇವರು ಬೆರೆಯುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT