ಆರೋಗ್ಯ-ಜೀವನಶೈಲಿ

ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಶ್ವಾಸಕೋಶ ಕ್ಯಾನ್ಸರ್

Sumana Upadhyaya

ಬೆಂಗಳೂರು: ಭಾರತದಲ್ಲಿ ಬೆಂಗಳೂರು ನಗರ ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ರೋಗಿಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಚೆನ್ನೈ ಮತ್ತು ದೆಹಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ವರ್ಷಕ್ಕೆ ಸುಮಾರು 18 ಸಾವಿರ ಹೊಸ ಕ್ಯಾನ್ಸರ್ ರೋಗಿಗಳಿರುವ ವರದಿ ಬರುತ್ತಿದ್ದು ಅವರಲ್ಲಿ ಶೇಕಡಾ 8ರಷ್ಟು ಮಂದಿ ಪುರುಷರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಶೇಕಡಾ 70 ರಷ್ಟು ಶ್ವಾಸಕೋಶ ಕ್ಯಾನ್ಸರ್ ಧೂಮಪಾನ ಮತ್ತು ಮಾಲಿನ್ಯದಿಂದ ಬರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ. 2014ರಲ್ಲಿ  ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 314 ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ಸಂಖ್ಯೆ ವರದಿಯಾಗಿದೆ. ಅವರಲ್ಲಿ 81 ಮಂದಿ ಮಹಿಳೆಯರು.

ಕ್ಯಾನ್ಸರ್ ನಲ್ಲಿ ಶೇಕಡಾ 80ರಷ್ಟು ಮನುಷ್ಯನ ಜೀವನಶೈಲಿಯನ್ನು ಅವಲಂಬಿಸಿದೆ ಎನ್ನುತ್ತಾರೆ ಕಿದ್ವಾಯಿ ಮೆಮೋರಿಯಲ್ ಆಂಕಾಲಜಿ(ಗ್ರಂಥಿಶಾಸ್ತ್ರ) ವಿಭಾಗದ ಮುಖ್ಯಸ್ಥ ಡಾ.ಸಿ ರಮೇಶ್.

ಶ್ವಾಸಕೋಶದ ಕ್ಯಾನ್ಸರ್ ಗೆ ಮುಖ್ಯ ಕಾರಣ ಸಿಗರೇಟು ಸೇವನೆ ಮತ್ತು ವಾಯು ಮಾಲಿನ್ಯ. ವಾಹನಗಳಿಂದ ಬರುವ ಹೊಗೆ, ಕಸ ದಹನದಿಂದ ಹೊರಬರುವ ವಿಷಕಾರಿ ಹೊಗೆ ಶ್ವಾಸಕೋಶ ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗಿದೆ. ತಂಬಾಕು ಮತ್ತು ಆಲ್ಕೋಹಾಲ್ ಸೇವನೆ ನಿಲ್ಲಿಸುವುದರಿಂದ ಕಡಿಮೆ ಕೊಬ್ಬಿನಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶ್ವಾಸಕೋಶ ಕ್ಯಾನ್ಸರ್ ನ್ನು ತಡೆಗಟ್ಟಬಹುದು ಎನ್ನುತ್ತಾರೆ ವೈದ್ಯ ರಮೇಶ್.

ಕಳಪೆ ಗುಣಮಟ್ಟದ ಆಹಾರ ಸೇವನೆ, ಜೀವನಶೈಲಿ ಕ್ಯಾನ್ಸರ್ ಗೆ ಮುಖ್ಯ ಕಾರಣವಾಗಿದೆ. ಐಟಿ ಉದ್ಯೋಗಿಗಳು ಬಹಳ ಮಂದಿ ದೇಹದ ತೂಕ ಹೆಚ್ಚಳ ಮತ್ತು ಫಿಟ್ ನೆಸ್ ನ ತೊಂದರೆಯಿಂದ ಬಳಲುತ್ತಾರೆ. ಕೆಲಸದ ಒತ್ತಡದಲ್ಲಿರುವವರಿಗೆ ದೈಹಿಕ ವ್ಯಾಯಾಮ ಸಿಗುವುದು ಕಡಿಮೆಯಾಗುತ್ತದೆ. ಪ್ಯಾಕೇಜ್ ಆಹಾರವನ್ನು ಸೇವಿಸುತ್ತಾರೆ. ಜಂಕ್ ಫುಡ್, ಪ್ರಿಸರ್ವೇಟಿವ್, ಪ್ಯಾಕೇಜ್ ಆಹಾರಗಳನ್ನು ಹಲವು ವರ್ಷಗಳಿಂದ ಸೇವಿಸುತ್ತಾ ಬಂದರೆ ನಿಧಾನವಾಗಿ ಕ್ಯಾನ್ಸರ್ ರೋಗ ಉಲ್ಭಣಿಸುತ್ತದೆ ಎನ್ನುತ್ತಾರೆ ಡಾ.ರಮೇಶ್.

ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯುವುದರಿಂದ ರೋಗವನ್ನು ಆದಷ್ಟು ನಿವಾರಣೆ ಮಾಡಬಹುದು ಎನ್ನುತ್ತಾರೆ ಡಾ.ಕೆಬಿ ಲಿಂಗೇಗೌಡ. ಅವರು ಕಿದ್ವಾಯಿ ಸ್ಮಾರಕ ಸಂಸ್ಥೆಯ ಆಂಕಲಜಿ ವಿಭಾಗದ ನಿರ್ದೇಶಕರಾಗಿದ್ದಾರೆ. ಕ್ಯಾನ್ಸರ್ ಗೆ ಏನು ಕಾರಣ, ಹೇಗೆ ಬರುತ್ತದೆ, ಅಪಾಯಕಾರಿ ಅಂಶಗಳು ಯಾವುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು.

SCROLL FOR NEXT