ಚಿತ್ರ ಬಿಡಿಸುವಿಕೆ (ಸಂಗ್ರಹ ಚಿತ್ರ) 
ಆರೋಗ್ಯ-ಜೀವನಶೈಲಿ

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ

ಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...

ವಾಷಿಂಗ್ಟನ್: ಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ.

ಅತಿಕೆಲಸ ಮತ್ತು ಇತರೆ ಕಾರಣಗಳಿಂದಾಗಿ ಅತಿಯಾದ ಮಾನಸಿಕ ಒತ್ತಡಕ್ಕೆ ಸಿಲುವ ವ್ಯಕ್ತಿ 45 ನಿಮಿಷಗಳ ಪೇಟಿಂಗ್ ಮಾಡುವುದರಿಂದ ಆತನ ಮಾನಸಿಕ ಒತ್ತಡ ಗಣನೀಯವಾಗಿ  ಇಳಿಯುತ್ತದೆ ಎಂದು ನೂತನೆ ಸಂಶೋಧನೆಯೊಂದು ಹೇಳಿದೆ. ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರು ಈ ವಿನೂತನ ಸಂಶೋಧನೆ ಮಾಡಿದ್ದು, ಬಣ್ಣ ತುಂಬುವುದು, ಚಿತ್ರ ಬಿಡಿಸುವುದು,  ಕೊಲಾಜ್ ತಯಾರಿ ಮತ್ತು ಕ್ಲೇ ಮಾಡೆಲಿಂಗ್‌ನಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಚಿಂತೆ ದೂರವಾಗಿ ಉಲ್ಲಾಸ ಲಭಿಸುತ್ತದೆ ಎಂದು  ಅವರು ಸಂಶೋಧನೆಯಲ್ಲಿ ತಿಳಿಸಿದ್ದಾರೆ.

ಈ ವಿನೂತನ ಸಂಶೋಧನೆಗೆ ವಿಜ್ಞಾನಿಗಳು ಸುಮಾರು 39 ಮಂದಿಯನ್ನು ಬಳಸಿಕೊಂಡಿದ್ದು, ಎಲ್ಲರೂ 18-59 ವರ್ಷದೊಳಗಿನವ ವಯೋಮಾನದರಾಗಿದ್ದರು. ಸಂಶೋಧನೆಗೂ ಮುನ್ನ  ಇವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿ ಬಳಿಕ ಅವರಿಗೆ ಚಿತ್ರ ಬಿಡಿಸಲು ಹೇಳಲಾಗಿತ್ತು. ಸುಮಾರು 45 ನಿಮಿಷಗಳ ಬಳಿಕ ವೈದ್ಯರು ಮತ್ತೆ ಇವರನ್ನು ವೈದ್ಯಕೀಯ ತಪಾಸಣೆಗೆ  ಒಳಪಡಿಸಿದಾಗ ಇವರ ಮಾನಸಿಕ ಒತ್ತಡ ಗಣನೀಯವಾಗಿ ಇಳಿಕೆಯಾಗಿತ್ತು. ಈ ಮೂಲಕ ವಿಜ್ಞಾನಿಗಳು 45 ನಿಮಿಷದ ಈ ಕ್ರಿಯಾಶೀ ಚಟುವಟಿಕೆಯಿಂದ ಮನಸ್ಸಿನ ಗೊಂದಲ ದೂರಾಗುತ್ತದೆ.  ಅದು ಆಶಾಂತಿಯನ್ನು ದೂರ ಮಾಡುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಅಂತೆಯೇ ತೀರಾ ಒತ್ತಡಕ್ಕೆ ಒಳಗಾಗಿದ್ದರೆ, ಅನಾವಶ್ಯಕ ಕಿರಿಕಿರಿ ಅನುಭವಿಸುತ್ತಿದ್ದರೆ ಅದನ್ನು ಮರೆಯಲು ಚಿತ್ರ ಬರೆಯಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!