ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ವಿಶ್ವ ನಿದ್ರಾ ದಿನ: ಉತ್ತಮ ನಿದ್ದೆಗೆ ಸರಳ ಸೂತ್ರಗಳು

ಇಂದು(ಮಾರ್ಚ್ 18) ವಿಶ್ವ ನಿದ್ರಾ ದಿನ. ಪುಟ್ಟ ಮಗುವಿನಿಂದ ಹಿಡಿದು ವಯಸ್ಕರಿಗೆ, ವೃದ್ಧರಿಗೆ ಎಲ್ಲರಿಗೂ ಅತ್ಯಗತ್ಯ ನಿದ್ದೆ...

ಇಂದು(ಮಾರ್ಚ್ 18) ವಿಶ್ವ ನಿದ್ರಾ ದಿನ. ಪುಟ್ಟ ಮಗುವಿನಿಂದ ಹಿಡಿದು ವಯಸ್ಕರಿಗೆ, ವೃದ್ಧರಿಗೆ ಎಲ್ಲರಿಗೂ ಅತ್ಯಗತ್ಯ ನಿದ್ದೆ. ಮನುಷ್ಯ ಉತ್ತಮವಾಗಿ ರಾತ್ರಿ ಹೊತ್ತು ಕಣ್ತುಂಬ ನಿದ್ದೆ ಮಾಡುತ್ತಿದ್ದಾನೆ ಎಂದರೆ ಆರೋಗ್ಯವಂತನಾಗಿದ್ದಾನೆ ಎಂದರ್ಥ.

ಇಂದಿನ ವೇಗದ ಯಾಂತ್ರೀಕೃತ,ಸ್ಪರ್ಧಾತ್ಮಕ ಯುಗದಲ್ಲಿ ಹಲವರಿಗೆ ನಿದ್ದೆ ಸರಿಯಾಗಿ ಬರುವುದಿಲ್ಲ. ಒತ್ತಡದಲ್ಲಿಯೇ ಜೀವನ ಸಾಗಿಸುತ್ತಿರುತ್ತಾರೆ. ಇನ್ನು ಹಲವರಿಗೆ ಎಷ್ಟು ನಿದ್ದೆ ಮಾಡಬೇಕು, ಹೇಗೆ ಮಾಡಬೇಕು ಎಂಬ ತಿಳುವಳಿಕೆ ಇಲ್ಲ, ಇವೆಲ್ಲದರ ಪರಿಣಾಮ ಆರೋಗ್ಯ ಕೆಡುತ್ತದೆ.

ಉತ್ತಮ ನಿದ್ದೆಗೆ ಇಲ್ಲಿವೆ ಸರಳ ಸೂತ್ರಗಳು:

1. ಗ್ಯಾಜೆಟ್ ಗಳಿಂದ ದೂರವಿರಿ: ಇಂದಿನ ತಂತ್ರಜ್ಞಾನದ ಯುಗದಲ್ಲಿ ಎಲ್ಲರ ಕೈಯಲ್ಲೂ ಮೊಬೈಲು, ಟ್ಯಾಬು, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್. ಇದರ ಬಳಕೆಯಂತೂ ವಿಪರೀತ. ಎಲ್ಲಿ ಹೋಗುವಾಗಲೂ ಒಟ್ಟಿಗೇ ಇರುತ್ತದೆ. ಕೆಲವರು ಮಲಗಿದ ಮೇಲೂ ಅದರಲ್ಲಿ ಏನೋ ಮಾಡುತ್ತಿರುತ್ತಾರೆ. ಇದರಿಂದ ನಿದ್ರಾಭಂಗವಾಗುತ್ತದೆ. ಮಲಗುವುದಕ್ಕೆ ಅರ್ಧ ಗಂಟೆ ಮೊದಲು ರಿಲ್ಯಾಕ್ಸ್ ಆಗಿ.
2. ಮಲಗುವ ಕನಿಷ್ಠ 4ರಿಂದ 6 ಗಂಟೆಗೆ ಮುನ್ನ ಆಲ್ಕೋಹಾಲ್ ಸೇವನೆ, ಸಿಗರೇಟು ಸೇವನೆ, ಸಿಹಿತಿಂಡಿ, ಸಕ್ಕರೆ ಪದಾರ್ಥಗಳ ಸೇವನೆ ಬೇಡ. ಇದರಿಂದ ನಿದ್ದೆ ಹಾಳಾಗುತ್ತದೆ.ಹಾಗೆಯೇ ಚಹಾ, ಕಾಫಿ, ಲಘು ಪಾನೀಯ ಸೇವನೆ ಕೂಡ ಬೇಡ.
3. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ಒಳ್ಳೆಯದು. ಬೆಳಗಿನ ಆಹ್ಲಾದಕರ ವಾತಾವರಣವನ್ನು ಅನುಭವಿಸುವುದು ಆರೋಗ್ಯಕ್ಕೆ ಉತ್ತಮ.
3. ಹಗಲು ನಡೆದದ್ದನ್ನೆಲ್ಲಾ ರಾತ್ರಿ ಮಲಗುವ ಹೊತ್ತಿಗೆ ನೆನೆಸಿಕೊಳ್ಳುವುದು, ಚಿಂತಿಸುವುದು ಬೇಡ. ನಿದ್ದೆ ಮಾಡುವುದು ದೇಹ ಮತ್ತು ಮನಸ್ಸಿನ ವಿಶ್ರಾಂತಿಗಾಗಿ.
4. ಹಗಲು ಚೆನ್ನಾಗಿ ದುಡಿದು ದಣಿದಿದ್ದರೆ ರಾತ್ರಿ ತನ್ನಷ್ಟಕ್ಕೆ ನಿದ್ದೆ ಬರುತ್ತದೆ. ನಗರವಾಸಿಗಳು ಈಜು, ಓಡುವುದು, ವಾಕಿಂಗ್, ಜಾಗಿಂಗ್, ಯೋಗ,ವ್ಯಾಯಾಮಗಳನ್ನು ಚೆನ್ನಾಗಿ ಮಾಡಿದರೆ ರಾತ್ರಿ ಉತ್ತಮವಾಗಿ ನಿದ್ದೆ ಬರುತ್ತದೆ.
5. ದಂಪತಿಗಳು ಅಥವಾ ಜೋಡಿಗಳು ನಿದ್ದೆಗೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ನಿದ್ದೆ ಉತ್ತಮವಾಗಿ ಬರುತ್ತದೆ ಎನ್ನುತ್ತಾರೆ ತಜ್ಞರು.
6. ಮಲಗುವ ಮುನ್ನ ನಿಮ್ಮ ಇಷ್ಟದ ಸಂಗೀತ ಅಥವಾ ಇತರ ಕಲಾ ಪ್ರಕಾರಗಳನ್ನು ಕೇಳಿ ಅಥವಾ ನೋಡಿ ಮಲಗಿಕೊಂಡರೆ ಉತ್ತಮವಾಗಿ ನಿದ್ದೆ ಬರುತ್ತದೆ.
7. ನಿದ್ದೆ ಬರುವುದಿಲ್ಲವೆಂದು ನಿದ್ದೆ ಮಾತ್ರೆ ಸೇವಿಸುವುದು ಒಳ್ಳೆಯದಲ್ಲ. ಅಥವಾ ವೈದ್ಯರ ಮಾರ್ಗದರ್ಶನವಿಲ್ಲದೆ ನಿಮ್ಮಿಷ್ಟ ಬಂದ ಔಷಧಗಳನ್ನು ಕೂಡ ಸೇವಿಸಬೇಡಿ.
8. ಸಹಜ ನಿದ್ದೆ ಯಾವತ್ತಿಗೂ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕೆ ಶಿಸ್ತುಬದ್ಧ ಜೀವನಕ್ರಮ, ಆಹಾರ ಸೇವನೆ ಮುಖ್ಯವಾಗುತ್ತದೆ.
9.ಆರೋಗ್ಯ ಸಂಸ್ಥೆಯ ಪ್ರಕಾರ, ಈ ವಯಸ್ಸಿನ ವ್ಯಕ್ತಿ ಇಷ್ಟು ನಿದ್ದೆ ಮಾಡಬೇಕು ಎಂಬುದಿರುತ್ತದೆ. 3ರಿಂದ 12 ತಿಂಗಳಿನ ಮಗುವಿಗೆ ದಿನಕ್ಕೆ 4ರಿಂದ 15 ಗಂಟೆ ನಿದ್ದೆ ಬೇಕು. 1ರಿಂದ 3 ವರ್ಷದವರೆಗೆ 12ರಿಂದ 14 ಗಂಟೆ ನಿದ್ದೆ, 3ರಿಂದ 5 ವರ್ಷದವರೆಗೆ 11ರಿಂದ 13 ಗಂಟೆ, 6ರಿಂದ 12 ವರ್ಷದವರೆಗಿನ ಮಕ್ಕಳಿಗೆ ದಿನಕ್ಕೆ 10ರಿಂದ 11 ಗಂಟೆ, 12ರಿಂದ 18 ವರ್ಷದವರೆಗಿನವರು 8ರಿಂದ 10 ಗಂಟೆ ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರು ದಿನಕ್ಕೆ 6ರಿಂದ 8 ಗಂಟೆ ನಿದ್ದೆ ಮಾಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT