ಆರೋಗ್ಯ-ಜೀವನಶೈಲಿ

ಕುಡಿತದಿಂದ ದೀರ್ಘ ಕಾಲದ ಆನಂದ ಬರುವುದಿಲ್ಲ: ಸಂಶೋಧನೆ

Guruprasad Narayana

ಲಂಡನ್: ದಿನವೂ ಮದ್ಯಪಾನದ ಅಭ್ಯಾಸ ಇರುವವವರಿಗೆ ಇಲ್ಲೊಂದು ಬೇಸರದ ಸುದ್ದಿ. ಮದ್ಯಪಾನ ತಕ್ಷಣಕ್ಕೆ ನಿಮಗೆ ಸಂತಸ ನೀಡಬಲ್ಲದ್ದಾಗಿದ್ದರೂ, ದೀರ್ಘ ಕಾಲದ ಸಮಯದಲ್ಲಿ ಕುಡಿತದ ಚಟವಿಲ್ಲದವರು ಕೂಡ, ಕುಡುಕರಷ್ಟೇ ಸಂತೋಷವಾಗಿರುತ್ತಾರೆ ಎನ್ನುತ್ತದೆ ಅಧ್ಯಯನ.

ಮದ್ಯಪಾನ ತಕ್ಷಣಕ್ಕೆ ಸುಖ ನೀಡಬಲ್ಲದ್ದಾಗಿದ್ದರೂ ದೀರ್ಘ ಕಾಲದ ಸಮಯದಲ್ಲಿ ಸಂತೋಷಕ್ಕಾಗಿ ಕುಡಿತದ ಕೊಡುಗೆ ಏನೂ ಇಲ್ಲ ಎನ್ನುತ್ತದೆ ಕೆಂಟ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ.

ಈ ಸಂಶೋಧನೆಯ ಅಧ್ಯಯನದ ಪ್ರಕಾರ, ಹೆಚ್ಚು ಕುಡಿತದಿಂದ ಮನುಷ್ಯ ತನ್ನ ಜೀವನದಲ್ಲಿ ಹೆಚ್ಚು ತೃಪ್ತಿ ಹೊಂದುವುದಿಲ್ಲ ಅದಕ್ಕೆ ವಿರುದ್ಧವಾಗಿ ಕುಡಿತದ ಚಟಕ್ಕೆ ಬೀಳುವವರು ಜೀವನದಲ್ಲಿ ಹೆಚ್ಚು ಅತೃಪ್ತಿ ಹೊಂದಿರುತ್ತಾರೆ ಎನ್ನುತ್ತದೆ.

ಈ ಸಂಶೋಧನೆಯಲ್ಲಿ ಭಾಗಿಯಾದವರು ಮದ್ಯವನ್ನು ಹೆಚ್ಚೆಚ್ಚು ಸೇವಿಸಿದಂತೆ ಅವರ ಸಮಗ್ರ ಜೀವನದ ಆನಂದದಲ್ಲಿ ಕುಡಿತದ ಯಾವುದೇ ಪಾತ್ರವಿಲ್ಲ ಎಂದು ತಿಳಿದುಬಂದಿದೆ.

ಸಮಾಜ ವಿಜ್ಞಾನ ಮತ್ತು ಔಷದಗಳ ಜರ್ನಲ್ ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ, ಮನುಷ್ಯನ ಸಮಗ್ರ ಜೀವನದ ಸಂತೋಷ ಮತ್ತು ಕುಡಿತದ ನಡುವೆ ಸಂಬಧ ಹುಡುಕಲು ಐಫೋನಿನ ಆಪ್ ಮತ್ತು ಸಂಪ್ರದಾಯಿಕ ಮಾರ್ಗವನ್ನು ಬಳಸಿದೆ.

ಮೊದಲ ಅಧ್ಯಯನದಲ್ಲಿ ಐಫೋನ್ ಬಳಸುವ ಯುವಕರು ಮತ್ತು ಸಿರಿವಂತರನ್ನು ಒಳಗೊಂಡಿದ್ದರೆ, ಎರಡನೇ ಅಧ್ಯನ ೩೦-೪೨ ವರ್ಷದ ಮಧ್ಯವಯಸ್ಕರನ್ನು ಒಳಗೊಂಡಿದೆ.

"ಮದ್ಯ ನಿಯಂತ್ರಣ ಮಾಡುವ ನೀತಿ ರೂಪಿಸುವವರಿಗೆ ಈ ಅಧ್ಯಯನ ಉಪಯೋಗವಾಗಬಲ್ಲದು. ಮದ್ಯ ಮತ್ತು ವ್ಯಯಕ್ತಿಕ ಸಂತೋಷದ ಬಗೆಗಿನ ಈ ಅಧ್ಯಯನ ಜನಕ್ಕೆ ಉಪಯೋಗವಾಗುವಂತಹ ಅಥವಾ ಉಪಯೋಗವಲ್ಲದ ನೀತಿ ರೂಪಿಸುವಾಗ ಬಳಕೆಗೆ ಬರುತ್ತದೆ" ಎಂದು ಕೆಂಟ್ ವಿಶ್ವವಿದ್ಯಾಲಯದ ಸಾಮಾಜಿಕ ನೀತಿ ತಜ್ಞ ಬೆನ್ ಬಾಮರ್ಗ್ ಗಿಗರ್ ತಿಳಿಸಿದ್ದಾರೆ.

SCROLL FOR NEXT