ಆರೋಗ್ಯ-ಜೀವನಶೈಲಿ

ಸಂಗಾತಿಯನ್ನು ಹೋಲಿಕೆ ಮಾಡುವುದು ಸಂಬಂಧವನ್ನು ಬೆಳಸಲೂಬಹುದು, ಒಡೆಯಲೂಬಹುದು!

Srinivas Rao BV

ನ್ಯೂಯಾರ್ಕ್: ಸಂಬಂಧಗಳಲ್ಲಿ ಸಂತಸ ಕಂಡುಕೊಳ್ಳುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಸಂಗಾತಿಯನ್ನು ಬೇರೆಯವರಿಗೆ ಹೋಲಿಕೆ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
ಯಾವುದೇ ವ್ಯಕ್ತಿಗೆ ತನ್ನ ಸಂಗಾತಿ ತನ್ನ ಆದರ್ಶಗಳ ಆದ್ಯತೆಗಳನ್ನು ಈಡೇರಿಸುವುದು ಮುಖ್ಯವಾಗಿರುವುದಿಲ್ಲ. ಸಂಬಂಧಗಳು ಸಂತಸ ನೀಡುವುದಕ್ಕೆ ಆದರ್ಶ ಅಡ್ಡಿ ಬರುವುದಿಲ್ಲ, ಅತ್ಯುತ್ತಮ ಸಂಗಾತಿಗಳನ್ನು ಪಡೆಯುವುದರಲ್ಲಿ ಸಂಬಂಧಗಳು ಉಳಿಯುತ್ತವೆ ಎಂದು ಟೆಕ್ಸಾಸ್ ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.  
ಸಂಗಾತಿ ಹಾಗೂ ಸಂಶೋಧನೆ ಕುರಿತಾದ ಸಂಶೋಧನೆಗಾಗಿ ಸುಮಾರು ಸಂಗಾತಿಯೊಂದಿಗೆ ಏಳು ವರ್ಷ ಕಾಲ ಕಳೆದ 259 ವಯಸ್ಕರ( 119 ಪುರುಷರು ಹಾಗೂ 140 ಮಹಿಳೆಯರು)ನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ಸಂಶೋಧನೆಯಲ್ಲಿ ಸಂಗಾತಿಯನ್ನು ಹೋಲಿಕೆ ಮಾಡುವುದು ಸಂಬಂಧವನ್ನು ಬೆಳಸಲೂಬಹುದು, ಒಡೆಯಲೂಬಹುದು ಎಂಬುದು ತಿಳಿದುಬಂದಿದೆ.

SCROLL FOR NEXT