ಆರೋಗ್ಯ-ಜೀವನಶೈಲಿ

ಎದೆಹಾಲು ಹಸುಳೆಗಳಲ್ಲಿ ಕಿವಿ ಸೋಂಕಿನ ಅಪಾಯ ತಗ್ಗಿಸುತ್ತದೆ

Guruprasad Narayana

ನ್ಯೂಯಾರ್ಕ್: ಬಾಟೆಲ್ ಗಳಿಂದ ಹಸುಗೂಸುಗಳಿಗೆ ಹಾಲುಕುಡಿಸುವುದಕ್ಕಿಂತಲೂ ಎದೆಹಾಲು ಎಂದಿಗೂ ಆರೋಗ್ಯಕರ ಎಂಬುದು ಪಾರಂಪರಿಕ ಜ್ಞಾನವಾಗಿದ್ದರೂ ಹೊಸ ಅಧ್ಯಯನವೊಂದರ ಪ್ರಕಾರ ಎದೆಹಾಲಿನಿಂದ ಮಕ್ಕಳಲ್ಲಿ ಕಿವಿ ಸೋಂಕಿನ ಅಪಾಯ ತಗ್ಗಿಸುತ್ತದೆ ಎನ್ನುತ್ತದೆ.

ಅದೂ ಅಲ್ಲದೆ ಹಸಿಗೂಸಿನ ಮೊದಲ ೧೨ ತಿಂಗಳ ಅವಧಿಯಲ್ಲಿ ಫಾರ್ಮುಲ ಹಾಲು ಕುಡಿಸುವುದಕ್ಕಿಂತಲೂ ಎದೆಹಾಲು ಕುಡಿಸುವುದು ಅತಿಸಾರದ ಅಪಾಯವನ್ನು ತಗ್ಗಿಸುತ್ತದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಜರ್ನಲ್ ಫಾರ್ ಪೀಡ್ರಿಯಾಟಿಕ್ಸ್ ನಲ್ಲಿ ಪ್ರಕಟಿಸಲಾಗಿರುವ ಈ ಸಮೀಕ್ಷೆಯಲ್ಲಿ ೪೯೧ ತಾಯಿಯರು ಭಾಗವಹಿಸಿದ್ದಾರೆ.

ಆರು ತಿಂಗಳು ಎದೆಹಾಲು ಕುಡಿದ ಹಸುಗೂಸುಗಳಲ್ಲಿ ಕಿವಿ ಸೋಂಕಿನ ಅಪಾಯ ೧೭% ಕಡಿಮೆಯಾಗಿತ್ತು ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ಹಾಗೆಯೇ ಆಮಶಂಕೆ ಅಪಾಯ ೩೦% ಕಡಿಮೆಯಾಗಿದೆ ಎನ್ನುತ್ತಾರೆ ಸಂಶೋಧಕರು.

SCROLL FOR NEXT