ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಬೆದರಿಕೆ, ಅನಗತ್ಯ ಸಂಪರ್ಕಗಳು, ಅಸಂಬದ್ಧ ಕಮೆಂಟ್, ಅವಹೇಳನ ಮಾಡುವುದು ಇತ್ಯಾದಿಗಳಿಂದ ಅದನ್ನು ಕೇಳಿದವರಿಗೆ ಅಥವಾ ಅಂತಹ ಅನುಭವಗಳಾದರೆ ಅಂಥವರು ಖಿನ್ನತೆಗೆ ಒಳಗಾಗುವುದು ಜಾಸ್ತಿ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ನಡೆಸುವ ಸಂವಾದವನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಇದು ಜೀವನದ ಮೇಲೆ ಬೀರುವ ಪರಿಣಾಮ ಕಡಿಮೆ ಎಂದು ಜನರು ಭಾವಿಸುವುದೇ ಇಲ್ಲ, ಏಕೆಂದರೆ ವ್ಯಕ್ತಿಗತ ಅನುಭವಕ್ಕಿಂತ ವಾಸ್ತವ ಅನುಭವ ಇದಾಗಿರುತ್ತದೆ ಎಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಸಮಂತಾ ರೊಸೆಂತಲ್ ಹೇಳುತ್ತಾರೆ.
2002ರಲ್ಲಿ ಫೇಸ್ ಬುಕ್ ಆರಂಭವಾಗುವುದಕ್ಕೂ ಮೊದಲು ಇಂಗ್ಲೆಂಡ್ ನ ಫ್ಯಾಮಿಲಿ ಸ್ಟಡಿ ಮಾಡಲಾಗಿತ್ತು. ಆಗ ವ್ಯಕ್ತಿ, ವ್ಯಕ್ತಿಗಳ ನಡುವಿನ ಸಂಬಂಧಕ್ಕೂ ನಂತರ ಫೇಸ್ ಬುಕ್ ಆರಂಭಗೊಂಡ ನಂತರ ಜನರ ಸಂವಹನದಿಂದ ಉಂಟಾದ ಅನುಭವಕ್ಕೂ ವ್ಯತ್ಯಾಸಗಳಿದ್ದವು. ಫೇಸ್ ಬುಕ್ ನಲ್ಲಿ ನೆಗೆಟಿವ್ ಕಮೆಂಟ್ ಬಂದರೆ ಜನರು ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ ಎನ್ನುತ್ತಾರೆ ಬ್ರೌನ್ ವಿಶ್ವವಿದ್ಯಾಲಯದ ಉಪನ್ಯಾಸಕ ಸ್ಟೆಫನ್ ಬುಕ.
''ಇದೊಂತರಾ ಕೋಳಿ-ಮೊಟ್ಟೆ ಪ್ರಶ್ನೆಯಿದ್ದಂತೆ, ಕೋಳಿ ಮೊದಲಾ, ಮೊಟ್ಟೆ ಮೊದಲಾ ಎಂಬ ಪ್ರಶ್ನೆಯಂತೆ ಫೇಸ್ ಬುಕ್ ನಲ್ಲಿ ಪ್ರತಿಕೂಲ ಪರಿಣಾಮ ಮೊದಲಾ ಅಥವಾ ಖಿನ್ನತೆ ಮೊದಲಾ ಎಂಬ ಸಂದೇಹ ಏಳುತ್ತದೆ ಎನ್ನುತ್ತಾರೆ ಬುಕ.
ಅಧ್ಯಯನಕ್ಕೆ 264 ಮಂದಿಯನ್ನು ಒಳಪಡಿಸಲಾಗಿತ್ತು. ಅವರಲ್ಲಿ ಶೇಕಡಾ 82ರಷ್ಟು ಮಂದಿ ಫೇಸ್ ಬುಕ್ ಬಳಸಲು ಆರಂಭಿಸದಲ್ಲಿಂದ ಕನಿಷ್ಠ ಒಂದು ಋಣಾತ್ಮಕ ಅನುಭವವಾಗಿದೆಯೆನ್ನುತ್ತಾರೆ. ಶೇಕಡಾ 24 ರಷ್ಟು ಮಂದಿಗೆ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಖಿನ್ನತಯುಂಟಾಗಿದೆ. ಈ ಅಧ್ಯಯನ ವಯಸ್ಕರಲ್ಲಿ ಆರೋಗ್ಯ(ಅಡೋಲೆಸೆಂಟ್ ಹೆಲ್ತ್) ಎಂಬ ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.