ಆರೋಗ್ಯ-ಜೀವನಶೈಲಿ

ಆಲ್ಕೋಹಾಲ್ ಸೇವನೆಯಿಂದ ಅನಾರೋಗ್ಯ ತಡೆಗಟ್ಟಲು ಶಾರೀರಿಕ ಚಟುವಟಿಕೆ ಹೆಚ್ಚಿಸಿಕೊಳ್ಳಿ

Sumana Upadhyaya
ಸಿಡ್ನಿ: ಆಲ್ಕೋಹಾಲ್ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟಲು ಸಾಧಾರಣದಿಂದ ತೀವ್ರತೆಯ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ನಡೆಯುವುದು, ಸೈಕ್ಲಿಂಗ್ ಮಾಡುವುದು ಇತ್ಯಾದಿ ಚಟುವಟಿಕೆಗಳು ಸಹಾಯ ಮಾಡುತ್ತದೆ, ವಾರದಲ್ಲಿ ಕನಿಷ್ಟ 150 ನಿಮಿಷವಾದರೂ ನಡಿಗೆ ಮಾಡಬೇಕು ಎಂದು ಅಧ್ಯಯನವೊಂದು ತಿಳಿಸಿದೆ.
ಇಂಗ್ಲೆಂಡ್ ನ ನಿಯತಕಾಲಿಕೆ ಸ್ಪೋರ್ಟ್ಸ್ ಮೆಡಿಸಿನ್ ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, ಆಲ್ಕೋಹಾಲ್ ಸೇವನೆಯ ದುಶ್ಚಟ ಇರುವವರು ಹೆಚ್ಚೆಚ್ಚು ಶಾರೀರಿಕ ಚಟುವಟಿಕೆ ನಡೆಸುತ್ತಿದ್ದರೆ ಅನಾರೋಗ್ಯಕ್ಕೀಡಾಗುವುದು ಕಡಿಮೆ ಎನ್ನುತ್ತಾರೆ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಮ್ಮನುಯೆಲ್ ಸ್ಟಾಮೆಟಕಿಸ್.
ಶಾರೀರಿಕವಾಗಿ ಅಷ್ಟೊಂದು ಚಟುವಟಿಕೆಯಿಲ್ಲದ ಜನರಲ್ಲಿ ಆಲ್ಕೋಹಾಲ್ ಅಧಿಕ ಸೇವನೆಯಿರುವವರಲ್ಲಿ ಹೃದ್ರೋಗ ಖಾಯಿಲೆ ಕೂಡ ಜಾಸ್ತಿ ಎನ್ನುತ್ತಾರೆ ಸ್ಟಮಟಕಿಸ್.
ನಿಗದಿತ ಪ್ರಮಾಣದೊಳಗೆ ಆಲ್ಕೋಹಾಲ್ ಸೇವಿಸಿದರೆ ಕೂಡ ಶೇಕಡಾ 36ರಷ್ಟು ಸಾವಿನ ಸಾಧ್ಯತೆಯಿರುತ್ತದೆ. 
SCROLL FOR NEXT