ವಾಷಿಂಗ್ಟನ್: ಮಾಧ್ಯಮವೊಂದು ನಡೆಸಿರುವ ಹೊಸ ಅಧ್ಯನದಲ್ಲಿ ಮಕ್ಕಳ್ನು ಹೆರಲು ಅಮೆರಿಕಾ ವಿಶ್ವದಲ್ಲೇ ದುಬಾರಿ ಸ್ಥಳ ಎಂಬ ಪಟ್ಟ ಪಡೆದಿದೆ. 14 ಮುಂದುವರೆದ ದೇಶಗಳನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ ಇಂಗ್ಲೆಂಡಿನ ವೈದ್ಯಕೀಯ ಜರ್ನಲ್ 'ದ ಲ್ಯಾನ್ಸೆಟ್' ಆಸ್ಟ್ರೇಲಿಯಾ ಎರಡನೇ ಅತಿ ದುಬಾರಿ ಸ್ಥಳ ಎಂದಿದೆ.
ಸಿಸೇರಿಯನ್ ಮೂಲಕ ಹೇರುವುದಕ್ಕೆ ಅಮೆರಿಕಾದಲ್ಲಿ 15500 ಡಾಲರ್ ವೆಚ್ಚ ತಗಲುತ್ತದೆ ಎಂದು 'ದ ಲ್ಯಾನ್ಸೆಟ್' ಹೇಳಿದೆ. ಸರಳ ಹೆರಿಗೆಗೆ ಆಸ್ಟ್ರೇಲಿಯಾದಲ್ಲಿ 6774 ಡಾಲರ್ ವೆಚ್ಚ ತಗುಲಿದರೆ, ಅಮೆರಿಕಾದಲ್ಲಿ ಇದಕ್ಕೆ ತಗಲುವ ವೆಚ್ಚ 10322 ಡಾಲರ್.
ಜನ ಅತಿ ಹೆಚ್ಚಿನ ವೇತನ ಪಡೆಯುವ ಈ ದೇಶಗಳಲ್ಲಿ ಹೆರಿಗೆ ಸಮಯದಲ್ಲಿ ಮಕ್ಕಳು ಅಸುನೀಗುವುದನ್ನು ತಡೆಯಲು ಹೆಚ್ಚಿನ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಅದರಂತೆಯೇ ಹೆರಿಗೆಗೆ ತಗಲುವ ವೆಚ್ಚ ದೈತ್ಯವಾಗಿ ಬೆಳೆದಿದೆ ಎಂದು ವರದಿ ತಿಳಿಸಿದೆ.
"ಹಸುಗೂಸು ಅಸುನೀಗುವ ಸಾಧ್ಯತೆ ಅತಿ ಕಡಿಮೆ ಇದ್ದರು, ಇದು ಪರಿಪೂರ್ಣತೆಗೆ ಹತ್ತಿರವೇನು ಇಲ್ಲ" ಎನ್ನುವ ವರದಿ "ಹಲವು ಕಡೆ ಈ ದೇಶಗಳಲ್ಲಿ ಮಹಿಳೆಯರು ತಮ್ಮ ಗರ್ಭಧಾರಣೆಯಲ್ಲಿ ಯಾವುದೇ ಅಪಾಯ ಇಲ್ಲದಿದ್ದರೂ ಆಸ್ಪತ್ರೆಯಲ್ಲಿಯೇ ಹಡೆಯುವುದಕ್ಕೆ ಆಯ್ಕೆ ಮಾಡಿಕೊಳ್ಳುವ ಸನ್ನಿವೇಶ ಇದೆ" ಎಂದು ವರದಿ ಅಭಿಪ್ರಾಯ ಪಟ್ಟಿದೆ.
ಅತಿ ಅಪಾಯದ ಹೆರಿಗೆಯನ್ನು ನಿಭಾಯಿಸಲು ಹಲವು ಆಸ್ಪತ್ರೆಗಳು ಸಜ್ಜಾಗಿದ್ದರು, ಕೆಲವೊಮ್ಮೆ ಅಗತ್ಯವಿಲ್ಲದೆ ಇದ್ದರು ಕಡಿಮೆ ಅಪಾಯದ ಹೆರಿಗೆಗಳಲ್ಲೂ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸುವುದು ಹೆಚ್ಚಾಗಿದ್ದು, ಇದು ವೆಚ್ಚವನ್ನು ವಿಪರೀತ ಏರಿಸಿದೆ ಎಂದು ಕೂಡ ವರದಿ ಅಭಿಪ್ರಾಯ ಪಟ್ಟಿದೆ.