ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ. ಆದ್ದರಿಂದ ಹಲ್ಲುಗಳ ರಕ್ಷಣೆ ಅತ್ಯಗತ್ಯವಾದದ್ದು. ಅತಿ ಹೆಚ್ಚು ಸಮಯ ಹಲ್ಲುಜ್ಜುವುದು, ಹಾಗೂ ಕಾರ್ಬೊನೇಟ್ ಅಂಶಗಳನ್ನು ಹೊಂದಿರುವ ಪಾನೀಯಗಳ ಬಳಕೆಯನ್ನು ತ್ಯಜಿಸುವುದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕ್ಲೋವ್ ಡೆಂಟಲ್ ನ ಸಂದರ್ಶಕ ಸಹಲೆಗಾರರಾಗಿರುವ ಸಾಗರಿಕಾ ಶುಕ್ಲಾ, ಚಳಿಗಾಲದಲ್ಲಿ ಹಲ್ಲುಗಳಿಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಲ್ಲುಗಳ ರಕ್ಷಣೆಗೆ ತಜ್ಞರು ನೀಡಿರುವ ಕೆಲವೊಂದು ಸಲಹೆಗಳು ಹೀಗಿವೆ.
- ಹೆಚ್ಚು ಸಮಯ ಹಲ್ಲುಜ್ಜುವುದು ಸೂಕ್ತವಲ್ಲ. ಎಡಿಎ(ಅಮೆರಿಕನ್ ಡೆಂಟಲ್ ಅಸೋಸಿಯೇಷನ್) ಶಿಫಾರಸ್ಸಿನ ಪ್ರಕಾರ 2-3 ನಿಮಿಷಗಳ ಕಾಲ ಹಲ್ಲುಜ್ಜುವುದು ಸೂಕ್ತವಾಗಿದೆ. ಅತಿ ಹೆಚ್ಚು ಸಮಯ ಹಲ್ಲುಜ್ಜುವುದರಿಂದ ಸಂವೇದನೆ ಉಂಟಾಗಬಹುದು ಎಂದು ತಜ್ಞರು ಹೇಳಿದ್ದಾರೆ.
- ಚಳಿಗಾಲದಲ್ಲಿ ಹೆಚ್ಚು ಹಸಿವಾಗುವುದು ಸಹಜ, ಕಾರ್ಬೊನೇಟ್ ಅಂಶಗಳನ್ನು ಹೊಂದಿರುವ ಪಾನೀಯಗಳ ಬದಲಿಗೆ ಬಿಸಿ ಪಾನೀಯಗಳನ್ನು ಸೇವಿಸುವುದು ಉತ್ತಮ
- ಸೈಡರ್ ಅಥವಾ ಹೆಚ್ಚು ಮಸಾಲೆ ಇರುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸವಿದ್ದರೆ ಅವು ಹಲ್ಲುಗಳಿಗೆ ಹಾನಿ ಉಂಟುಮಾಡಬಲ್ಲದು, ಈಗಾಗಲೇ ಇವುಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ, ಬೆಚ್ಚಗಿನ ಉಪ್ಪು ನೀರಿನಲ್ಲಿ ಹಲ್ಲು ಮುಕ್ಕಳಿಸುವುದರಿಂದ ಹಲ್ಲಿಗೆ ಉಂಟಾದ ಹಾನಿ, ನೋವುಗಳನ್ನು ತಡೆಯಬಹುದಾಗಿದೆ
- ಚಳಿಗಾಲದಲ್ಲಿ ಸಕ್ಕರೆಯನ್ನು ಕಡಿಮೆ ಉಪಯೋಗಿಸುವುದು ಸಹ ಹಲ್ಲುಗಳ ರಕ್ಷಣೆಗೆ ಉತ್ತಮ ಕ್ರಮವಾಗಿದೆ.