ಆರೋಗ್ಯ

ಅತಿ ಹೆಚ್ಚು ವ್ಯಾಯಾಮ, ಸ್ಟೆರಾಯ್ಡ್ ಗಳಿಂದ ಪುರುಷರಲ್ಲಿ ಬಂಜೆತನ

Srinivas Rao BV
ನವದೆಹಲಿ: ಮಿತಿ ಮೀರಿದ ವ್ಯಾಯಾಮ ಹಾಗೂ ಸ್ಟೆರಾಯ್ಡ್ ಗಳ ಸೇವನೆಗಳಿಂದ ಪುರುಷರಲ್ಲಿ ಸಂತಾನ ಶಕ್ತಿ ಕುಗ್ಗುತ್ತಿದೆ ಎಂದು ಐವಿಎಫ್ ತಜ್ಞರು ಎಚ್ಚರಿಸಿದ್ದಾರೆ. 
ಪುರುಷರಲ್ಲಿ ಬಂಜೆತನ ಹೆಚ್ಚುತ್ತಿರುವುದಕ್ಕೆ ಝೂಸ್ಪೆರ್ಮಿಯಾ ಎಂಬ ಸ್ಥಿತಿ ಕಾರಣವಾಗಿದ್ದು, ಮಿತಿ ಮೀರಿದ ವ್ಯಾಯಾಮ ಹಾಗೂ ಸ್ಟೆರಾಯ್ಡ್ ಗಳ ಸೇವನೆಗಳಿಂದ ಉಂಟಾಗುವ ಝೂಸ್ಪೆರ್ಮಿಯಾ ಸ್ಥಿತಿಯಲ್ಲಿ ವೀರ್ಯ ಉತ್ಪಾದನೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. 
ಭಾರತದಲ್ಲಿ ಪ್ರಸ್ತುತ ಶೇ.1 ರಷ್ಟು ಪುರುಷರಲ್ಲಿ ಝೂಸ್ಪೆರ್ಮಿಯಾ ಸಮಸ್ಯೆ ಎದುರಾಗಿದ್ದು, ಮಿತಿ ಮೀರಿದ ವ್ಯಾಯಾಮದಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಪರಿಣಾಮ ಪುರುಷರಲ್ಲಿ ಬಂಜೆತನ ಸಮಸ್ಯೆ ಉಂಟಾಗುತ್ತದೆ. ಹಲವು ಪುರುಷರು ದೀರ್ಘಾವಧಿಯ ವ್ಯಾಯಾಮ ತರಬೇತಿ ಪಡೆಯುತ್ತಾರೆ, ಇದು ಮಿತಿ ಮೀರಿದರೆ ಝೂಸ್ಪೆರ್ಮಿಯಾ ಸಮಸ್ಯೆ ಎದುರಾಗಲಿದೆ ಎಂದು ಐವಿಎಫ್ ತಜ್ಞ ಅರವಿಂದ್ ಎಚ್ಚರಿಸಿದ್ದಾರೆ. 
SCROLL FOR NEXT