ಆರೋಗ್ಯ

ಆಸ್ಟಿಯೊಪೊರೋಸಿಸ್ ಸಮಸ್ಯೆಗೆ ಚೀನಾದ ಗಿಡಮೂಲಿಕೆಯಲ್ಲಿದೆ ಮದ್ದು!

Srinivas Rao BV
ವಾಷಿಂಗ್ ಟನ್: ಆಸ್ಟಿಯೊಪೊರೋಸಿಸ್‌ (ಅಸ್ಥಿರಂಧ್ರತೆ) ಎಂಬ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗೆ ಚೀನಾದ ಗಿಡಮೂಲಿಕೆಯಲ್ಲಿ ಮದ್ದು ಇದೆ ಎಂದು ಕೆನಡಾದ ಸಂಶೋಧಕರು ಹೇಳಿದ್ದಾರೆ.
ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಚೀನಾದಲ್ಲಿ ಬಳಕೆಯಾಗುವ ಸಾಂಪ್ರದಾಯಿಕ ಔಷಧ ಆಸ್ಟಿಯೊಪೊರೋಸಿಸ್‌ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೇ ಮೂಳೆಗಳನ್ನು ಶೇ.35 ರಷ್ಟು ಸದೃಢಗೊಳಿಸಬಲ್ಲದು ಎಂಬುದನ್ನು ಕೆನಡಾದ ಸಂಶೋಧಕರು ಕಂಡುಕೊಂಡಿದ್ದಾರೆ. 
ಕೇವಲ ಆಸ್ಟಿಯೊಪೊರೋಸಿಸ್‌ ಅಷ್ಟೇ ಅಲ್ಲದೇ ಸಂಧಿವಾತ ಮತ್ತು ಕೆಲವು ಮೂಳೆಯ ಕ್ಯಾನ್ಸರ್ ಗಳನ್ನೂ ಸಹ ಈ ಗಿಡಮೂಲಿಕೆಯಿಂದ ಗುಣಪಡಿಸಬಹುದಾಗಿದೆ.  ಕ್ಯಾಥೆಪ್ಸಿನ್ ಎಂದು ಕರೆಯಲಾಗುವ ಕಿಣ್ವ (ಎನ್ಝೈಮ್) ನಿಂದ ಉಂಟಾಗುವ ಸಮಸ್ಯೆಗಳನ್ನು ರೆಡ್ ಸೇಜ್ ಗುಣಪಡಿಸಬಲ್ಲದು ಎಂದು ವ್ಯಾಂಕೋವರ್ನಲ್ಲಿ ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿರುವುದು  ಮೂಳೆ ಮತ್ತು ಖನಿಜ ಸಂಶೋಧನೆಗೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ.
SCROLL FOR NEXT