ಆರೋಗ್ಯ

ಗೇಮಿಂಗ್ ಡಿಸಾರ್ಡರ್ ಅನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದು

Srinivas Rao BV
ಲಂಡನ್: ನಿಮ್ಮ ಮಕ್ಕಳು ವಿಡಿಯೋ ಗೇಮ್ ಗೆ ಹೆಚ್ಚು ದಾಸರಾಗಿದ್ದಾರಾ? ಹಾಗಾದರೆ ಎಚ್ಚರವಾಗಿರಿ ಶೀಘ್ರವೇ ವಿಶ್ವ ಆರೋಗ್ಯ ಸಂಸ್ಥೆ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆ ಎಂದು ಘೋಷಿಸಲು ಸಿದ್ಧತೆ ನಡೆಸಿದೆ. 
ರೋಗಗಳ ವಿಭಾಗಗಳ ಪಟ್ಟಿಯಲ್ಲಿ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆಯನ್ನಾಗಿ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಚಿಂತನೆ ನಡೆಸಿದೆ ಎಂದು ಡಬ್ಲ್ಯೂ ಹೆಚ್ ಒ ಪ್ರಕಟಿಸಿರುವ ಡಾಯಾಗ್ನಸ್ಟಿಕ್ ಮ್ಯಾನ್ಯುಯಲ್ ಮೂಲಕ ತಿಳಿದುಬಂದಿದೆ. 
ಇಂಟರ್ ನ್ಯಾಷನಲ್ ಕ್ಲಾಸಿಫಿಕೇಷನ್ ಆಫ್ ಡಿಸೀಸಸ್(ಐಸಿಡಿ) ಯನ್ನು 1990 ರಲ್ಲಿ ಅಪ್ ಡೇಟ್ ಮಾಡಲಾಗಿದ್ದು, 27 ವರ್ಷಗಳ ನಂತರ ಈಗ ಅಪ್ ಡೇಟ್ ಆಗುತ್ತಿದ್ದು, 2018 ರಲ್ಲಿ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ಸಿದ್ಧತೆ ನಡೆಸಿದೆ. 
SCROLL FOR NEXT