ಬಿಳಿ ಅಕ್ಕಿ, ಕೆಂಪು ಅಕ್ಕಿ 
ಆರೋಗ್ಯ

ಬಿಳಿ ಅಕ್ಕಿ ಬದಲು ಕೆಂಪು ಅಕ್ಕಿ ತಿಂದರೆ ಬೇಗನೆ ತೂಕ ಇಳಿಸಬಹುದು!

ಸಾಮಾನ್ಯವಾಗಿ ಬಿಳಿ ಅಕ್ಕಿಯಿಂದ ಊಟ ಮಾಡುವುದು ರೂಢಿಯಲ್ಲಿದೆ. ಆದರೆ ಕೆಂಪು ಅಕ್ಕಿ ಊಟ ಮಾಡಿದರೇ ಅದು ದೇಹಕ್ಕೆ ಹೆಚ್ಚು ಪ್ರಯೋಜನವಾಗಲಿದೆ...

ಲಂಡನ್: ಸಾಮಾನ್ಯವಾಗಿ ಬಿಳಿ ಅಕ್ಕಿಯಿಂದ ಊಟ ಮಾಡುವುದು ರೂಢಿಯಲ್ಲಿದೆ. ಆದರೆ ಕೆಂಪು ಅಕ್ಕಿ ಊಟ ಮಾಡಿದರೇ ಅದು ದೇಹಕ್ಕೆ ಹೆಚ್ಚು ಪ್ರಯೋಜನವಾಗಲಿದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇದರಿಂದ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಿ ದೇಹದ ತೂಕವು ಇಳಿಯುತ್ತದೆ. ಕೆಂಪು ಅಕ್ಕಿ ತಿನ್ನುವುದು 30 ನಿಮಿಷ ವೇಗವಾಗಿ ನಡೆಯುವುದಕ್ಕೆ ಸಮ. ಒಂದು ದಿನಕ್ಕೆ 100 ಕ್ಯಾಲಿಯನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಮ್ಯಾಸಚೂಸೆಟ್ಸ್ ನ ತುಫ್ಟ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಇದಕ್ಕಾಗಿ ಎರಡು ಗುಂಪಿನ ಜನರು ಬಳಸಿಕೊಂಡಿದ್ದಾರೆ. ಇದರಲ್ಲಿ ಒಂದು ಗುಂಪಿಗೆ ಹಣ್ಣು, ತರಕಾರಿಯಂತ ಶಕ್ತಿಯುತವಾದ ಆಹಾರವನ್ನು ನೀಡಲಾಯಿತು. ಮತ್ತೊಂದು ಗುಂಪಿಗೆ ಕೆಂಪು ಅಕ್ಕಿಯಿಂದ ಮಾಡಿದ ಆಹಾರವನ್ನು ನೀಡಲಾಯಿತು. ಇದರಲ್ಲಿ ಧಾನ್ಯಗಳನ್ನು ಸೇವಿಸಿದ ಗುಂಪಿನವರು ವೇಗವಾಗಿ ಚಯಾಪಚಯಗೊಂಡಿದ್ದರು. ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಂಬಿನ ಅಂಶ ಕರಗಿತ್ತು. ಜತೆ ಅವರ ದೇಹದಲ್ಲಿನ ಪ್ರತಿರೋಧಕ ಶಕ್ತಿ ಸಹ ವೃದ್ಧಿಯಾಗಿತ್ತು.

ಈ ಸಂಶೋಧನೆಗಾಗಿ ಸಂಶೋಧಕರು 81 ಮಂದಿಯನ್ನು ಬಳಸಿಕೊಳ್ಳಲಾಗಿತ್ತು. 40 ವರ್ಷ ದಿಂದ 65 ವರ್ಷದ ಮಹಿಳೆಯರನ್ನು ಇದಕ್ಕೆ ಬಳಸಿಕೊಳ್ಳಲಾಗಿತ್ತು. ಈ ಅಧ್ಯಾಯನದ ಮೂಲಕ ತಿಳಿದುಬಂದ ಅಂಶ ಎಂದರೇ ಕೆಂಪು ಅಕ್ಕಿ ಊಟ ಇತರ ಹಣ್ಣ ತರಕಾರಿಗಿಂತ ಹೆಚ್ಚು ಪರಿಣಾಮಕಾರಿ ಎಂದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ